ಮಕ್ಕಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆ ಕೊನೆಗೊಂಡಿದ್ದು ಸೌದಿ ಬಾಂಗ್ಲಾದೇಶಿ ಮತ್ತು ಫ್ರಾನ್ಸ್ ನ ಸ್ಪರ್ಧಿಗಳು ವಿಜೇತರಾಗಿದ್ದಾರೆ. ಒಟ್ಟು ಎಂಟು ಕೋಟಿ ರೂಪಾಯಿ ಬಹುಮಾನ ಮೊತ್ತದ ಈ ಸ್ಪರ್ಧೆಯಲ್ಲಿ 123 ರಾಷ್ಟ್ರಗಳಿಂದ ಆರು ಸಾವಿರಕ್ಕಿಂತಲೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು.
ಆಗಸ್ಟ್ ಹತ್ತರಂದು ಈ ಸ್ಪರ್ಧೆಯ ಕೊನೆಯ ಸುತ್ತು ಆರಂಭವಾಗಿತ್ತು. ಇದು ಮಕ್ಕಾದಲ್ಲಿ ನಡೆದ 43ನೇ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ಕುರ್ ಆನ್ ಸ್ಪರ್ಧೆಯಾಗಿದೆ. 13 ದಿವಸಗಳ ಈ ಸ್ಪರ್ಧೆ ನಡೆದಿತ್ತು.
ಕುರ್ ಆನ್ ಕಂಠಪಾಠ, ಪಾರಾಯಣ, ವ್ಯಾಖ್ಯಾನ ಮುಂತಾಗಿ ಐದು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿದೆ. ಸೌದಿ ಅರೇಬಿಯಾದ ಸಅದ್ ಬಿನ್ ಇಬ್ರಾಹಿಂ ಬಿನ್ ಅಹ್ಮದ್ ಅಲ್ ರೂವೈತಿ ಎಂಬ ಬಾಲಕ ಕಂಠಪಾಠ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಒಂದು ಕೋಟಿ 10 ಲಕ್ಷ ರೂಪಾಯಿಯನ್ನು ಪಡೆದಿದ್ದಾನೆ.
ಕುರ್ ಆನ್ ಪಾರಾಯಣ ಮತ್ತು ವ್ಯಾಖ್ಯಾನ ವಿಭಾಗದಲ್ಲಿ ಸೌದಿಯ ಜಾಬರ್ ಬಿನ್ ಹುಸೈನ್ ಮಾಲಿಕಿ ಪ್ರಥಮ ಸ್ಥಾನಿಯಾಗಿದ್ದಾನೆ. ಈತನಿಗೆ 60 ಆರು ಲಕ್ಷ ರೂಪಾಯಿ ಲಭಿಸಿದೆ.
ಕೇವಲ ಕುರ್ ಆನ್ ಪಾರಾಯಣ ವಿಭಾಗದಲ್ಲಿ ಬಾಂಗ್ಲಾದೇಶದ ಅನಸ್ ಬಿನ್ ಅತಿಕ್ ಪ್ರಥಮ ಸ್ಥಾನಿಯಾಗಿದ್ದಾನೆ. ಈತನಿಗೆ 44 ಲಕ್ಷ ರೂಪಾಯಿ ಲಬಿಸಿದೆ. ಫ್ರಾನ್ಸ್ ನ ಬಿಲಾಲ್ ಅಹಮದ್ ಎಂಬಾತ ಐದನೇ ಸ್ಥಾನ ಪಡೆದಿದ್ದಾನೆ. ಈತನಿಗೆ 14 ಲಕ್ಷ ರೂಪಾಯಿಗಳು ಲಭಿಸಿವೆ.
ಮಕ್ಕಾದ ಡಿಪ್ಯೂಟಿ ಗವರ್ನರ್ ಅವರು ಬಹುಮಾನವನ್ನು ವಿತರಿಸಿದ್ದಾರೆ.