ಮೈಸೂರು: ಮೈಸೂರು ಸಂಸ್ಥಾನ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಒಬ್ಬ ಮಾದರಿ ಆಡಳಿತಗಾರ. ಜನರ ಆಧ್ಯಾತ್ಮಿಕ ಹಾಗೂ ಭೌತಿಕ ಕಲ್ಯಾಣವೂ ಅಭಿವೃದ್ಧಿಯೆಂದು ಪರಿಗಣಿಸಿಕೊಂಡಿದ್ದ ಒಡೆಯರು, ತನ್ನ ಪ್ರಜೆಗಳ ಸಂತೋಷ ಮತ್ತು ಯೋಗಕ್ಷೇಮಕ್ಕಿಂತ ಹೆಚ್ಚಿನ ಆಶಿರ್ವಾದವು ಒಬ್ಬ ಆಡಳಿತಗಾರನಿಗೆ ಇಲ್ಲವೆಂದೇ ನಂಬಿದ್ದವರು. ಅವರ ಈ ನಂಬಿಕೆಯು ಅವರು ಆಗಿನ ಬಾಡಿ ಗಾರ್ಡ್ ಲೈನ್ ಪ್ರದೇಶದಲ್ಲಿ ತನ್ನ ಮುಸ್ಲಿಂ ಪ್ರಜೆಗಳಿಗಾಗಿ ಮಸೀದಿ ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ …
Read More »ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ ಕತರ್ ನ ಇಸ್ಲಾಮಿಕ್ ಕಲಾ ಮ್ಯೂಸಿಯಂ
2 ತಾಸುಗಳಲ್ಲಿ 50 ಭಾಷೆಗಳಲ್ಲಿ ‘ಲಿಟಲ್ ಪ್ರಿನ್ಸ್’ ಕಥೆ ವಾಚನ ದೋಹಾ: ಓದುವಿಕೆಯ ರಿಲೇ ಸ್ಪರ್ಧೆಯಲ್ಲಿ ಅತ್ಯಧಿಕ ಭಾಷೆಗಳನ್ನು ಬಳಸುವ ಮೂಲಕ ಕತರ್ ನ ಇಸ್ಲಾಮಿಕ್ ಕಲಾ ಮ್ಯೂಸಿಯಂ (ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್) ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. 2022ರಲ್ಲಿ ಕತರ್ ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ನಲ್ಲಿ ಕತರ್ ನಲ್ಲಿ ಮಾತನಾಡಲಾಗುವ ಹಲವಾರು ಭಾಷೆಗಳನ್ನು ಬಳಸಿಕೊಂಡು ಈ ವಾಚನ ಸ್ಪರ್ಧೆಯನ್ನು ಆಚರಿಸಲಾಗಿತ್ತು. 500ಕ್ಕೂ ಅಧಿಕ …
Read More »ಕುರ್ಆನ್ ಎಂತಹ ಮುಸ್ಲಿಮರನ್ನು ಬಯಸುತ್ತದೆ?
ಎಂ. ಅಶ್ರಫ್ ಪವಿತ್ರ ಕುರ್ಆನ್ ಎಂತಹ ಮುಸ್ಲಿಮರನ್ನು ಬಯಸುತ್ತದೆ? ಈ ಪ್ರಶ್ನೆಗೆ ಉತ್ತರವನ್ನು ಅದರ ವಾಹಕರಾದ ಪ್ರವಾದಿ ಮುಹಮ್ಮದ್(ಸ) ರವರು ಸ್ವತಃ ಪ್ರಾಯೋಗಿಕವಾಗಿ ನೀಡಿ ಹೋಗಿದ್ದಾರೆ. ಒಮ್ಮೆ ಓರ್ವರು ಸತ್ಯವಿಶ್ವಾಸಿಗಳ ಮಾತೆ ಆಯಿಶಾ(ರ)ರೊಡನೆ ಪ್ರವಾದಿವರ್ಯರ(ಸ) ಜೀವನ ಹೇಗಿತ್ತು ಎಂದು ಕೇಳಿದಾಗ, ಆಯಿಶಾ(ರ), “ನೀವು ಕುರ್ಆನ್ ಓದಿಲ್ಲವೇ?” ಎಂದು ಮರು ಪ್ರಶ್ನಿಸುತ್ತಾರೆ. ಆಗಂತುಕ ಓದಿದ್ದೇನೆಂದಾಗ, “ಅದುವೇ ಅಲ್ಲಾಹನ ಸಂದೇಶವಾಹಕರ(ಸ) ಜೀವನವಾಗಿತ್ತು” ಎಂದು ಉತ್ತರಿಸುತ್ತಾರೆ. ಪವಿತ್ರ ಕುರ್ಆನ್ನ ಉದ್ದೇಶವು ಮಾನವನಿಗೆ ಮಾರ್ಗದರ್ಶನ ನೀಡುವುದಾಗಿದೆ. …
Read More »ಪ್ರವಾದಿಯನ್ನು(ಸ) ಓದುವಾಗ ಗಮನಿಸದ ಅಂಶಗಳು
ಇರ್ಶಾದ್, ಬೆಂಗಳೂರು ಪ್ರವಾದಿ ಮುಹಮ್ಮದ್(ಸ)ರ ಜೀವನದ ಅಧ್ಯಯನ ನಡೆಸುವಾಗ ಅವರ ಕರೆಗೆ ಓಗೊಟ್ಟು ಇಸ್ಲಾಮ್ ಸ್ವೀಕರಿಸಿ ತಮ್ಮ ಜೀವನವನ್ನೇ ಈ ಸಂದೇಶಕ್ಕಾಗಿ ಮುಡಿಪಾಗಿಟ್ಟ ಸಹಾಬಿಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ನಾವು ಆಗಾಗ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ಅದರಿಂದ ಪ್ರೇರಣೆ ಪಡೆಯುವ ಪ್ರಯತ್ನ ಮಾಡುತ್ತೇವೆ. ಆದರೆ ಪ್ರವಾದಿ ಮುಹಮ್ಮದ್(ಸ)ರ ಸಂದೇಶ ಸ್ವೀಕರಿಸದಿದ್ದರೂ ಅವರ ಜೀವನದ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ಅವರಿಗೆ ಬೆಂಬಲ ನೀಡಿದ ಹಲವಾರು ಮಹಾನ್ ವ್ಯಕ್ತಿಗಳ ಪೈಕಿ ಅಬೂತಾಲಿಬ್ …
Read More »ಸಲ್ಲಲ್ಲಾಹು ಅಲೈಹಿ ವ ಸಲ್ಲಮ್
✍️ ಏ.ಕೆ. ಕುಕ್ಕಿಲ ಯಾವುದೇ ಜೀವಂತ ಸಿದ್ಧಾಂತದ ಲಕ್ಷಣ ಏನೆಂದರೆ, ಸದಾ ಚರ್ಚೆಯಲ್ಲಿರುವುದು. ಪ್ರತಿದಿನ ಆ ಸಿದ್ಧಾಂತದ ಸುತ್ತ ಚರ್ಚೆಗಳನ್ನು ನಡೆಸುವ ವಾತಾವರಣ ನಾಗರಿಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವುದು. ಮೃತ ಸಿದ್ಧಾಂತಕ್ಕೆ ಈ ಲಕ್ಷಣ ಇರುವುದಿಲ್ಲ. ಆ ಸಿದ್ಧಾಂತಕ್ಕೂ ಅದರ ಅನುಯಾಯಿಗಳೆಂದು ಹೇಳಿಕೊಳ್ಳುವವರಿಗೂ ಬಹುತೇಕ ಸಂಪರ್ಕ ಕಡಿದು ಹೋಗಿರುತ್ತದೆ. ಅವರು ತನ್ನಿಚ್ಛೆಯನ್ನು ಅನುಸರಿಸುತ್ತಿರುತ್ತಾರೆ. ಸಿದ್ಧಾಂತದಲ್ಲಿ ತಮಗೆ ಅನುಕೂಲಕರವೆಂದು ಅನಿಸಿದ್ದನ್ನು ಮಾತ್ರ ಪಾಲಿಸುತ್ತಾ, ಉಳಿದವುಗಳನ್ನು ತಿರಸ್ಕರಿಸುತ್ತಾ ಬದುಕುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಸಿದ್ಧಾಂತಕ್ಕಿಂತ ಅದರ …
Read More »ಜಗತ್ತು ಕಂಡ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ಮಹಿಳಾ ವಿಮೋಚಕ ಪ್ರವಾದಿ ಮುಹಮ್ಮದ್(ಸ)
ಮನುಷ್ಯರಿಗೆ ದೈವಿಕ ಸಂದೇಶವನ್ನು ತಲುಪಿಸುವ ಮಹಾಪುರುಷರನ್ನು ಪ್ರವಾದಿಗಳೆಂದು ಕರೆಯಲಾಗುತ್ತದೆ. ಈ ಭೂಮುಖದ ಮೇಲೆ ಬೇರೆ ಬೇರೆ ಪ್ರದೇಶಗಳಿಗೆ, ಬೇರೆ ಬೇರೆ ಕಾಲಗಳಲ್ಲಿ ಪ್ರವಾದಿಗಳ ಆಗಮನವಾಗಿದೆ ಎಂಬುದು ಮುಸಲ್ಮಾನರ ವಿಶ್ವಾಸದ ಭಾಗವಾಗಿದೆ. ಸುಮಾರು ಒಂದುಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದಿರುವರೆಂದು ವರದಿಯಿದೆ. ಪ್ರವಾದಿ ಮುಹಮ್ಮದ್(ಸ) ರು ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ. ಜಾಗತಿಕ ಮುಸಲ್ಮಾನರು ರಬಿಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ರನ್ನು ಅತಿ ಹೆಚ್ಚು ಸ್ಮರಿಸುವುದನ್ನು, ಗುಣಗಾನ ಮಾಡುವುದನ್ನು ಕಾಣಬಹುದು. ರಬಿಉಲ್ ಅವ್ವಲ್ …
Read More »ಮಹಾನ್ ಪ್ರವಾದಿ ಮುಹಮ್ಮದ್ ಪೈಗಂಬರ್…
✍🏽ಮುಷ್ತಾಕ್ ಹೆನ್ನಾಬೈಲ್ ಮದೀನಾ ನಗರದ ಬೀದಿಯದು. ಆ ಅಜ್ಜಿ ಬೆಳಿಗ್ಗೆಯಿಂದಲೇ ಬೊಬ್ಬೆ ಹಾಕುತ್ತಿದ್ದಳು. ಬನ್ನಿ ಸ್ವಲ್ಪ ನನ್ನತ್ತ ನೋಡಿ, ನಾನು ಈ ನಗರ ತೊರೆಯಬೇಕಿದೆ, ಇಲ್ಲಿ ಬದುಕುವ ಪರಿಸ್ಥಿತಿ ಇಲ್ಲ. ಎಲ್ಲಿ ನೋಡಿದರೂ ವಂಚಕರು. ನಾನೆಂದೂ ಮತ್ತೆ ಈ ನಗರಕ್ಕೆ ಬರಲಾರೆ, ನನ್ನ ಈ ಭಾರವಾದ ಮೂಟೆಗಳನ್ನು ಹೊತ್ತು ನಗರದ ಹೊರಭಾಗಕ್ಕೆ ನನ್ನನ್ನು ತಲುಪಿಸಿ ಎಂಬುದೇ ಆ ಹಣ್ಣು ಹಣ್ಣು ಮದುಕಿಯ ಬೊಬ್ಬೆಯಾಗಿತ್ತು. ದೂರದ ಪಯಣ, ಭಾರವಾದ ಮೂಟೆಗಳು ಮತ್ತು …
Read More »ಪ್ರವಾದಿ ಮುಹಮ್ಮದ್(ಸ): ಶ್ರೇಷ್ಠ ಸಮಾಜ ಸುಧಾರಕ
ಮನುಷ್ಯರಿಗೆ ದೈವಿಕ ಸಂದೇಶವನ್ನು ತಲುಪಿಸುವ ಮಹಾ ಪುರುಷರನ್ನು ಪ್ರವಾದಿಗಳೆಂದು ಕರೆಯಲಾಗುತ್ತದೆ. ಈ ಭೂಮುಖದ ಮೇಲೆ ಬೇರೆ ಬೇರೆ ಪ್ರದೇಶಗಳಿಗೆ, ಬೇರೆ ಬೇರೆ ಕಾಲಗಳಲ್ಲಿ ಪ್ರವಾದಿಗಳ ಆಗಮನವಾಗಿದೆ ಎಂಬುದು ಮುಸ್ಲಿಮರ ವಿಶ್ವಾಸದ ಭಾಗವಾಗಿದೆ. ಸುಮಾರು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದಿರುವರೆಂದು ವರದಿಯಿದೆ. ಪ್ರವಾದಿ ಮುಹಮ್ಮದ್(ಸ)ರು ಆ ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ. ಜಾಗತಿಕ ಮುಸ್ಲಿಮರು ರಬೀಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ)ರನ್ನು ಅತಿ ಹೆಚ್ಚು ಸ್ಮರಿಸುವುದನ್ನು, ಗುಣಗಾನ ಮಾಡುವುದನ್ನು ಕಾಣಬಹುದು. ರಬೀಉಲ್ …
Read More »ಕೆಡುಕು ಮುಕ್ತ ಸಮಾಜ: ಪ್ರವಾದಿ(ಸ) ಮಾದರಿ
ಬನೀ ಇಸ್ರಾಯೀಲರ ಮಧ್ಯೆ ಓರ್ವ ಒಳ್ಳೆಯ ವ್ಯಕ್ತಿ ಇದ್ದ. ಕೆಟ್ಟು ಹೋಗಿದ್ದ ಆ ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಬೆರಳಣಿಕೆಯಷ್ಟಿತ್ತು. ಆ ಊರಿನ ರಾಜ ಈ ವ್ಯಕ್ತಿಯನ್ನು ಕರೆಸಿ ಈ ವ್ಯಕ್ತಿಯಿಂದ ಕೆಡುಕು ಮಾಡಿಸುತ್ತೇನೆ ಎಂದು ಪಣತೊಟ್ಟ. ಅವನನ್ನು ಕರೆಸಿ ಮೂರು ಕೆಡುಕುಗಳ ಪೈಕಿ ಯಾವುದಾದರೂ ಒಂದನ್ನು ಮಾಡುವಂತೆ ಹೇಳಲಾಯಿತು. ಒಂದನೆಯದು ತಾಯಿಯನ್ನು ಕೊಲ್ಲಬೇಕು. ಎರಡನೆಯದು ತಂಗಿಯೊಂದಿಗೆ ವ್ಯಭಿಚಾರ ಮಾಡಬೇಕು. ಮೂರನೆಯದು ಮದ್ಯ ಕುಡಿಯಬೇಕು. ಆ ವ್ಯಕ್ತಿ ಅಸಹಾಯಕ ಅವಸ್ಥೆಯಲ್ಲಿ ಕೆಡುಕುಗಳಲ್ಲಿ …
Read More »ದೇಶ ಮತ್ತು ಧರ್ಮ: ಪ್ರವಾದಿ(ಸ) ಪರಿಕಲ್ಪನೆ: “ದೇಶ ಮೊದಲೋ ಧರ್ಮ ಮೊದಲೋ?”
ದೇಶ ಧರ್ಮ ಇವೆರಡರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರ ಕಡೆಗೆ ಎಸೆದು ಕೆಲವರು ಸುಖ ಪಡುವುದಿದೆ. ಅಲ್ಲದೇ, ಈ ಪ್ರಶ್ನೆಗೆ ಲಭ್ಯವಾಗುವ ಉತ್ತರದ ಆಧಾರದಲ್ಲಿ ಓರ್ವರ ದೇಶಪ್ರೇಮವನ್ನು ಅವರು ತೀರ್ಮಾನಿಸುವುದೂ ಇದೆ. ದೇಶ ಮೊದಲು ಎಂದವ ದೇಶಪ್ರೇಮಿ ಮತ್ತು ಧರ್ಮ ಮೊದಲು ಎಂದವ ದೇಶದ್ರೋಹಿ ಎಂದು ಷರಾ ಬರೆಯುವುದಕ್ಕೆ ಈ ಪ್ರಶ್ನೆಯನ್ನು ಬಳಸಿಕೊಳ್ಳುವುದೂ ಇದೆ. ಒಂದು ಅಂಕಿ-ಅಂಶ ಕೊಡುತ್ತೇನೆ. 2021ರಲ್ಲಿ ಒಂದು ಲಕ್ಷದ 63 ಸಾವಿರ …
Read More »
IslamKannada News Portal