ಪ್ರವಾದಿ ಮುಹಮ್ಮದ್ (ಸ)ರು ಇಸ್ಲಾಮ್ ಧರ್ಮದ ಸ್ಥಾಪಕರೆಂದು ಹೇಳಲಾಗುತ್ತದೆ. ಮುಹಮ್ಮದ್ (ಸ)ರು ಇಸ್ಲಾಮ್ ಧರ್ಮದ ಸ್ಥಾಪಕರಲ್ಲ. ಹಿಂದೆ ಬಂದ ಎಲ್ಲ ಪ್ರವಾದಿಗಳಂತೆ ಇಸ್ಲಾಮ್ ಧರ್ಮದ ಬೋಧಕರಾಗಿದ್ದಾರೆ.
ನೆರೆಹೊರೆಯವರಿಗೆ ಸಂಬಂಧಿಸಿದ ಅವರ ಬೋಧನೆಗಳನ್ನು ನಾವು ಪಾಲಿಸಿದರೆ ಸ್ವರ್ಗ ಗಳಿಸಲು ಸಾಧ್ಯವಾಗಬಹುದು.
ಓರ್ವ ಮಹಿಳೆ ಐಚ್ಚಿಕ ಆರಾಧನೆಗಳಲ್ಲಿ ಅಷ್ಟೇನೂ ಆಸಕ್ತಿಯಿಲ್ಲ. ಅದರೆ ತನ್ನ ನೆರೆಹೊರೆಯವರಿಗೆ ಗಿಣ್ಣುಗಳ ತುಂಡುಗಳನ್ನು ಹಂಚುತ್ತಾಳೆ ಎಂದು ಹೇಳಿದಾಗ ಆ ಮಹಿಳೆ ಸ್ವರ್ಗಕ್ಕೆ ಹೋಗುತ್ತಾಳೆ ಎಂದು ಪ್ರವಾದಿ (ಸ ) ಹೇಳಿದರು.
ಇನ್ನೋರ್ವ ಮಹಿಳೆ ಐಚ್ಚಿಕ ಆರಾಧನೆಗಳಲ್ಲಿ ಬಹಳ ಆಸಕ್ತಿ. ಆದರೆ ತನ್ನ ನಾಲಗೆಯಿಂದ ನೆರೆಹೊರೆಯವರಿಗೆ ಕಿರುಕುಳ ನೀಡುತ್ತಾಳೆ ಎಂದು ಹೇಳಿದಾಗ ಆ ಮಹಿಳೆ ನರಕಕ್ಕೆ ಹೋಗುತ್ತಾಳೆ ಎಂದು ಹೇಳಿದರು. ಇದರಿಂದ ನೆರೆಹೊರೆ ಸಂಬಂಧದ ಪ್ರಾಮುಖ್ಯತೆಯನ್ನು ನಾವು ಅರಿಯಬಹುದಾಗಿದೆ.
ನಿಮ್ಮ ಸುತ್ತಮುತ್ತಲ ನಲ್ವತ್ತು ಮನೆಗಳು ನಿಮ್ಮ ನೆರೆಹೊರೆಗಳಾಗಿವೆ ಎಂದು ಪ್ರವಾದಿಯವರು ಹೇಳುವಾಗ ಮುಸ್ಲಿಮ್ ಮುಸ್ಲಿಮೇತರ ನೆರೆಹೊರೆ ಎಂದು ಹೇಳಲಿಲ್ಲ. ನೀವು ಒಂದು ಖರ್ಜೂರ ದಾನ ಮಾಡಿಯಾದರೂ ಸ್ವರ್ಗ ಪ್ರವೇಶಿಸಲು ಪ್ರಯತ್ನಿಸಿರಿ ಎಂದು ಹೇಳಿರುವರು.
ಪರಲೋಕದಲ್ಲಿ ಸಂಬಂಧಗಳ ಕುರಿತು ಪ್ರಥಮ ವಿಚಾರಣೆ ಇಬ್ಬರು ನೆರೆಹೊರೆಯವರಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಪ್ರತಿಯೊಬ್ಬರೂ ಪಾಲಿಸಲು ಸಾಧ್ಯವಾಗುವ ಸರಳವಾದ ಉಪದೇಶವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರೂ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡರೆ ಉತ್ತಮ ಸಮಾಜವೇ ಅಸ್ತಿತ್ವಕ್ಕೆ ಬರಬಹುದು. ಸಮಾಜ ಉತ್ತಮವಾದರೆ ರಾಷ್ಟ್ರಉತ್ತಮವಾಗುವುದರಲ್ಲಿ ಸಂದೇಹವೇ ಇಲ್ಲ.
✍️ಶಮೀರ ಜಹಾನ್
IslamKannada News Portal
