Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ದೃಷ್ಟಿಯಲ್ಲಿ ಪ್ರವಾದಿ ಮುಹಮ್ಮದ್(ಸ)

ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ದೃಷ್ಟಿಯಲ್ಲಿ ಪ್ರವಾದಿ ಮುಹಮ್ಮದ್(ಸ)

ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷರು,
ಭಾರತ ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು 

ಪ್ರವಾದಿ ಮುಹಮ್ಮದ್‌ರು(ಸ) ಅಲ್ಲಾಹನಿಂದ ಅವತೀರ್ಣವಾದ `ಸತ್ಯದ ಸಂದೇಶವನ್ನು ಸಾರುತ್ತಿರುವ ಸಂದರ್ಭದಲ್ಲಿ ಅವರಿಗೆ ಸತ್ಯನಿಷೇಧಿಗಳಿಂದ ತುಂಬಾ ವಿರೋಧಗಳು ಎದುರಾದುವು. ಅವರ(ಸ) ಪ್ರಾಣಕ್ಕೂ ಅಪಾಯ ಒದಗಿತ್ತು. ಸಾಕಷ್ಟು ಬಗೆಯ ಹಿಂಸೆಗಳನ್ನು ಆ ಸತ್ಯನಿಷೇಧಿಗಳು ಪ್ರವಾದಿಯವರಿಗೆ(ಸ) ಕೊಟ್ಟರು. ಧನ, ಕನಕ, ಸಾಮ್ರಾಜ್ಯ, ಹೆಣ್ಣು- ಇವೆಲ್ಲವುಗಳ ಆಮಿಷವನ್ನೊಡ್ಡಿದ್ದರು. ಆದರೆ ಸತ್ಯಪಥವನ್ನು ಕ್ರಮಿಸುವಲ್ಲಿ, ಸತ್ಯವನ್ನು ಸಾರಿ ಹೇಳುವಲ್ಲಿ ಪ್ರವಾದಿಯವರು(ಸ) ಇಂತಹ ಯಾವುದೇ ಆಶೆ, ಆಮಿಷಗಳಿಗೆ ಬಲಿಯಾಗಲಿಲ್ಲ. ಅಪಾಯಗಳಿಗೆ ಹೆದರಲಿಲ್ಲ. ಈ ಎಲ್ಲಾ ದಳ್ಳುರಿಯ ಹಾದಿಯಲ್ಲೂ ಅವರು ಹೂವಿನ ಹಾಸಿಗೆಯಲ್ಲಿ ನಡೆದಂತೆ ನಡೆದರು. ಯಾರನ್ನೂ ದ್ವೇಷಿಸಲಿಲ್ಲ. ‘ಬೈದವರನ್ನ ಬಂಧುಗಳು ಹೊಡೆದವರೆನ್ನ ಹೊರೆದವರು’ ಎನ್ನುವ ಬಗೆಯಲ್ಲಿ ಚಿಂತಿಸಿ ವೈರಿಗಳನ್ನೂ ಪ್ರೀತಿಸುತ್ತಾ ಬದುಕು ಸಾಗಿಸಿದರು. ಈ ಬಗೆಯ ನಡೆನುಡಿಗಳ ಮೂಲಕವೇ ಅರೇಬಿಯಾದ ಮರಳುಗಾಡಿನಲ್ಲಿ ಪ್ರವಾದಿಯವರು(ಸ) ಪ್ರೀತಿ-ವಿಶ್ವಾಸಗಳ ಸಾಮ್ರಾಜ್ಯ ರೂಪಿಸಿ ನಂದನವನ್ನು ನಿರ್ಮಾಣ ಮಾಡಿದರು.

ಪ್ರೀತಿ ತುಂಬಿ ತುಳುಕುವ ಹೃದಯವಂತಿಕೆಯ ಈ ಮಹಾಮಾನವರ ಅಂತರಂಗದ ತುಡಿತ ಮಿಡಿತಗಳಲ್ಲಿರುವ ಸಮಾನತೆ, ಜನರ ಒಳಿತಿಗಾಗಿ ಅವರು ಪಡುವ ಪಾಡು, ತನ್ನ ಸ್ವಂತ ಸುಖದ ಬಗ್ಗೆ ಯೋಚಿಸದೆ ಲೋಕ ಹಿತಾರ್ಥವಾಗಿ ಅವರು ಚಿಂತಿಸಿದ ಬಗೆ, ನಡೆದ ಗುಡ್ಡ-ಬೆಟ್ಟಗಳ ಕಲ್ಲು-ಮುಳ್ಳಿನ ಹಾದಿ, ಪಟ್ಟ ಸಂಕಟಗಳ ಸಾಲುಸಾಲು ಓದಿದಾಗ ನಮ್ಮ ಕಣ್ಣಿನಲ್ಲಿ ನೀರು ಇಳಿದೀತು. ಹೃದಯ ನೋವಿನಿಂದ, ಕಾವಿನಿಂದ ಬೆಂದೀತು. ಆಗಲೆಲ್ಲ ನಮ್ಮ ಹೃದಯ ವಿಶ್ವಭ್ರಾತೃತ್ವದ ಕುರಿತು ಚಡಪಡಿಸೀತು.

 

SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …

Leave a Reply

Your email address will not be published. Required fields are marked *