Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಮುಹಮ್ಮದ್(ಸ) ದೇವ ಪ್ರವಾದಿಯಾಗಿದ್ದಾರೆ – ಡಾ. ಕೈಥ್ ಎಲ್.ಮೂರೆ

ಮುಹಮ್ಮದ್(ಸ) ದೇವ ಪ್ರವಾದಿಯಾಗಿದ್ದಾರೆ – ಡಾ. ಕೈಥ್ ಎಲ್.ಮೂರೆ

ಅವರು ದೇವ ಪ್ರವಾದಿ
ಕುರ್‌ ಆನ್ ಹೇಳುತ್ತದೆ: “ನಾವು ಮಾನವನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು. ತರುವಾಯ ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿ ತೊಟ್ಟಿಕ್ಕಿದ ಹನಿಯಾಗಿ ಮಾರ್ಪಡಿಸಿದೆವು. ಅನಂತರ ಆ ಹನಿಗೆ ಮಾಂಸ ಪಿಂಡದ ರೂಪ ಕೊಟ್ಟೆವು. ಬಳಿಕ ಮಾಂಸ ಪಿಂಡವನ್ನು ಮಾಂಸ ಖಂಡವನ್ನಾಗಿ ಮಾಡಿದೆವು. ಆ ಮೇಲೆ ಮಾಂಸ ಖಂಡವನ್ನು ಎಲುಬುಗಳಾಗಿ ಮಾಡಿದೆವು. ತರುವಾಯ ಎಲುಬುಗಳ ಮೇಲೆ ಮಾಂಸ ತೊಡಿಸಿದೆವು. ಆ ಬಳಿಕ ಅದನ್ನೊಂದು ಬೇರೆಯೇ ಸೃಷ್ಟಿಯನ್ನಾಗಿ ಮಾಡಿ ನಿಲ್ಲಿಸಿದೆವು. ಅಲ್ಲಾಹನು ಮಹಾ ಸಮೃದ್ಧನು; ಸಕಲ ಶಿಲ್ಪಿಗಳಿಗಿಂತ ಶ್ರೇಷ್ಠ ಶಿಲ್ಪಿ.” ಏಳನೇ ಶತಮಾನದಲ್ಲಿ ಉಲ್ಲೇಖಿಸಲಾದ ಈ ವೈಜ್ಞಾನಿಕ ನಿಖರತೆಯು ನನ್ನನ್ನು ಬಹಳಷ್ಟು ವಿಸ್ಮಯಗೊಳಿಸಿತು. ಈ ಹೇಳಿಕೆಗಳು ಖಂಡಿತವಾಗಿಯೂ ಸೃಷ್ಟಿಕರ್ತನಿಂದಲೇ ಮುಹಮ್ಮದ್ (ಸ)ರಿಗೆ ಲಭ್ಯವಾಗಿರಬಹುದೆಂದು ನನಗೀಗ ಸ್ಪಷ್ಟವಾಗಿದೆ. ಏಕೆಂದರೆ ಈ ನಿರ್ದಿಷ್ಟವಾದ ಜ್ಞಾನವನ್ನು ಆ ನಂತರದ ಅನೇಕ ಶತಮಾನಗಳವರೆಗೂ ಕಂಡು ಹಿಡಿಯಲಾಗಿಲ್ಲ. ಇದರಿಂದಾಗಿ ಮುಹಮ್ಮದ್ (ಸ) ದೇವನ ನಿಜವಾದ ಸಂದೇಶ ವಾಹಕರಾಗಿದ್ದಾರೆ ಎಂಬುದು ನನಗೆ ರುಜುವಾಯಿತು.

ಡಾ. ಕೈಥ್ ಎಲ್.ಮೂರೆ
ಕೆನಡಿಯನ್ ಪ್ರಾಧ್ಯಾಪಕರು ಮತ್ತು ಟೊರೊಂಟೊ ವಿಶ್ವವಿದ್ಯಾನಿಲಯದ ಅನಾಟಮಿ ವಿಭಾಗದ ಮುಖ್ಯಸ್ಥ

-Embryology in the Koran and the Hadith

 

SHARE THIS POST VIA

About editor

Check Also

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಮುಹಮ್ಮದ್(ಸ)- ಪ್ರಿಂಗೆಲ್ ಕೆನಡಿ

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಯಾವುದೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಅದನ್ನು ಕಾರ್ಯಗತ ಮಾಡುವಲ್ಲಿ ಒಬ್ಬ ಮಹಾ ವ್ಯಕ್ತಿಯ …

Leave a Reply

Your email address will not be published. Required fields are marked *