Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಮುಹಮ್ಮದ್(ಸ)- ಪ್ರಿಂಗೆಲ್ ಕೆನಡಿ

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಮುಹಮ್ಮದ್(ಸ)- ಪ್ರಿಂಗೆಲ್ ಕೆನಡಿ

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು

ಯಾವುದೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಅದನ್ನು ಕಾರ್ಯಗತ ಮಾಡುವಲ್ಲಿ ಒಬ್ಬ ಮಹಾ ವ್ಯಕ್ತಿಯ ಪಾತ್ರ ಬಹಳ ಮುಖ್ಯವಾದುದು ಎಂದು ಹೇಳುವವರಿಗೆ ಮುಹಮ್ಮದ್ (ಸ)ರು ಒಂದು ಅತ್ಯುತ್ತಮ ಮಾದರಿ.

ಒಬ್ಬ ವ್ಯಕ್ತಿಗೆ ಸಹಕಾರವಾಗುವ ಸಾಧನನುಕೂಲತೆಗಳು, ಹಿಂಬಾಲಕರು, ಸರಿಯಾದ ಸ್ಥಳ ಮತ್ತು ಸಮಯ ಇತ್ಯಾದಿಗಳಿದ್ದರೆ ಮಾತ್ರ ಸಾಧನೆ ಮಾಡಬಹುದು ಮತ್ತು ಮುಹಮ್ಮದ್ (ಸ)ರಿಗೆ ಅದೆಲ್ಲವೂ ಲಭ್ಯವಾಗಿತ್ತು ಎಂದು ವಾದಿಸುವ ಜನರೂ ಇದ್ದಾರೆ. ಆದರೆ ಎಲ್ಲ ರೀತಿಯಲ್ಲೂ ಅನೂಕೂಲವಾಗಿರುವ ವಾತಾವರಣವಿದ್ದೂ, ಮುಹಮ್ಮದ್ (ಸ) ಇಲ್ಲದೇ ಇದ್ದಿದ್ದರೆ ಈ ಸಾಧನೆ ಖಂಡಿತವಾಗಿಯೂ ಅಸಾಧ್ಯವಾಗಿತ್ತು ಎಂಬ ವಾಸ್ತವಿಕತೆಯನ್ನು ಕೂಡ ಅಂತಹ ಜನರು ನಿರಾಕರಿಸುವುದಿಲ್ಲ. ನಿರಾಕರಿಸಲು ಸಾಧ್ಯವೂ ಇಲ್ಲ. ಈ ಆಸಾಮಾನ್ಯ ವ್ಯಕ್ತಿಯ ಕುರಿತು ಯಾವ ರೀತಿಯ ಅಭಿಪ್ರಾಯವನ್ನೂ ತಾಳಿರುವವರಾಗಿರಲಿ – ಅದು ಅವರನ್ನು ದೇವನ ನೈಜ ಸಂದೇಶವಾಹಕರೆಂಬ ನೆಲೆಯಲ್ಲಿ ಗೌರವಿಸುವ ಮುಸ್ಲಿಮರಾಗಿರಲಿ, ಅಥವಾ ಅವರನ್ನು ದುಷ್ಟತನದ ರಾಯಭಾರಿ ಎಂದು ಕರೆದ ಆಗಿನ ಕಾಲದ ಕೈಸ್ತರಿರಲಿ – ಲೋಕದ ಇತಿಹಾಸದ ಮೇಲೆ ಅವರು ಬೀರಿದ ಪ್ರಭಾವದ ತೀವ್ರತೆಯ ಕುರಿತು ಯಾರಿಗೂ ಭಿನ್ನಾಭಿಪ್ರಾಯವಿಲ್ಲ.

ಪ್ರಿಂಗೆಲ್ ಕೆನಡಿ
ಬ್ರಿಟಿಷ್ ಇತಿಹಾಸಕಾರ, ನ್ಯಾಯವಾದಿ ಮತ್ತು ಲೇಖಕ

-Arabian Society at the Time of Muhammed

SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …