Home / ಲೇಖನಗಳು / ಕೊನೆಯ ಬಸ್ಸು

ಕೊನೆಯ ಬಸ್ಸು

@ ಪಿ.ಎಂ.ಎ. ಗಫೂರ್

ಓರ್ವ ಪುಟ್ಟ ಬಾಲಕಿಯ ಮುಂದೆ ಎರಡು ವಸ್ತುಗಳನ್ನು ಇಟ್ಟು ನೋಡಿ. ಒಂದು ಆಕೆ ಅತಿ ಹೆಚ್ಚು ಇಷ್ಟಪಡುವ ಚಾಕ್ಲೆಟ್, ಎರಡನೆಯದ್ದು ಎರಡು ಸಾವಿರ ರೂಪಾಯಿ ನೋಟು. ಇದರಲ್ಲಿ ಯಾವುದಾದರೊಂದನ್ನು ಆರಿಸಿ ತೆಗೆಯಲು ಹೇಳಿರಿ. ಆಕೆ ಓಡಿ ಬಂದು ಆ ಚಾಕ್ಲೆಟ್ ತೆಗೆಯುತ್ತಾಳೆ. ನಂತರ ಅದರ ಸೊಗಸಾದ ಹೊರ ಕವಚವನ್ನು ಬಿಚ್ಚಿ ತೆಗೆದು ತಿನ್ನಲಾರಂಭಿಸುತ್ತಾಳೆ. ಆ ನೋಟನ್ನು ತೆಗೆದುಕೊಂಡು ಹೋಗಿ ಚಾಕ್ಲೆಟ್ ಖರೀದಿಸಲು ಸ್ವಲ್ಪ ಸಮಯ ಬೇಕಾಗುವುದು. ಆದ್ದರಿಂದ ಅವಳು ಸುಲಭವಾಗಿ ಸಿಗುವ ಬಾಯಲ್ಲಿ ನೀರೂರಿಸುವ ಚಾಕ್ಲೆಟ್ ಆಯ್ದುಕೊಳ್ಳುತ್ತಾಳೆ. ಆಕೆ ದೊಡ್ಡವಳಾಗಿ ಕೆಲವು ವರ್ಷಗಳ ಬಳಿಕ ಆಕೆಯೊಂದಿಗೆ ಈ ಘಟನೆ ವಿವರಿಸುತ್ತಾ, “ನೀನು ಅಂದು ಎರಡು ಸಾವಿರದ ನೋಟಿನ ಬದಲಿಗೆ ನೂರು ರೂಪಾಯಿಯ ಚಾಕ್ಲೆಟ್ ತೆಗೆದಿದ್ದೆ” ಎಂದಾಗ ಆಕೆ ತಲೆಯ ಮೇಲೆ ಕೈ ಇಡುತ್ತಾ ಅಯ್ಯೋ! ಆ ಎರಡು ಸಾವಿರದ ನೋಟಿನಲ್ಲಿ ಅದೆಷ್ಟು ಚಾಕ್ಲೆಟ್ ಖರೀದಿಸ ಬಹುದಿತ್ತು ಎಂದು ಆಶ್ಚರ್ಯ ಚಕಿತಳಾಗುತ್ತಾಳೆ.

ಕಟ್ಟಡ ನಿರ್ಮಾಣದ ಕಂಪೆನಿಯೊಂದರಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಇಂಜಿನಿಯರ್ ಓರ್ವರ ಕತೆ ಹೀಗಿದೆ:
ನೌಕರಿಯಿಂದ ನಿವೃತ್ತಿ ಬಯಸಿದ ಅವರು ತನ್ನ ಮಾಲಕನೊಂದಿಗೆ ತನ್ನ ಬಯಕೆ ವ್ಯಕ್ತಪಡಿಸಿದನು: “ಸಾಕು ಇನ್ನು ದುಡಿಮೆ ಸಾಕು. ಮುಂದಿನ ಬದುಕನ್ನು ಕುಟುಂಬದೊಡನೆ ವ್ಯಯಿಸಬೇಕೆಂದಿದ್ದೇನೆ.” ಆತನ ನಿರ್ಧಾರವನ್ನು ಬದಲಿಸುವಂತೆ ಮಾಲಕ ತುಂಬಾ ಒತ್ತಾಯಿಸಿದ. ಕೊನೆಗೆ ಹಾಗಾದರೆ ಬಹಳ ತುರ್ತಾಗಿ ಒಂದು ಮನೆಯ ನಿರ್ಮಾಣ ಕಾರ್ಯವಿದೆ, ಅದನ್ನು ಮುಗಿಸಿ ನೀನು ನಿವೃತ್ತಿ ಹೊಂದ ಬಹುದು ಎಂದಾಗ, ಮೊದಲು ನಿರಾಕರಿಸಿ ಕೊನೆಗೆ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡನು. ಕೊನೆಯ ಉದ್ಯೋಗ ವಾದುದರಿಂದ ಹೇಗೂ ಕೊನೆಯಾಗುತ್ತದಲ್ಲ ಎಂದು ಬೇಗ ಹೋಗಬೇಕೆಂಬ ತುಡಿತ ಆತುರದಿಂದ ಆತ ಈ ಮನೆಯ ನಿರ್ಮಾಣಕ್ಕೆ ಹೆಚ್ಚಿನ ಗಮನ ಕೊಡಲಿಲ್ಲ. ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಿಲ್ಲ. ಹೀಗೆ ಕೆಲಸ ಮುಗಿಸಿದ ಬಳಿಕ ಮಾಲಕ ಮನೆಯ ಸುತ್ತಲೂ ಒಮ್ಮೆ ಬಂದು ವೀಕ್ಷಿಸಿದನು. ಆತನನ್ನು ಅಭಿನಂಧಿಸುತ್ತಾ, ಆ ಮನೆಯ ಕೀ ಗೊಂಚಲನ್ನು ಆತನ ಕೈಗೆ ನೀಡುತ್ತಾ, “ಈ ಮನೆ ನಿಮಗೆ. ನೀವು ನಿರ್ಮಿಸಿದ ಮನೆ ನಿಮಗಾಗಿದೆ ಎಂದು ಹೇಳಿದ. ಆತ ತನ್ನ ಕೈಯನ್ನು ತಲೆಯ ಮೇಲಿರಿಸುತ್ತಾ ಇದನ್ನು ನಾನು ಮೊದಲೆ ಅರಿತಿರುತ್ತಿದ್ದರೆ ಅಯ್ಯೋ ಈ ಮನೆಯನ್ನು ಅದೆಷ್ಟು ಸುಂದರಗೊಳಿಸುತ್ತಿದ್ದೆ ಎಂದು ಯೋಚಿಸತೊಡಗಿದನು.

ನಮಗೆ ದೊರೆತ ಸಮಯದ ಅನುಭವಗಳೊಂದಿಗೆ ನಾವು ನಮ್ಮ ಆಯಸ್ಸನ್ನು ಹೇಗೆಲ್ಲಾ ಪೂರ್ತಿಗೊಳಿಸಿದೆವು ಎಂದು ಯೋಚಿಸುವಾಗ ನಮಗೆ ಹೇಗಾಗಬಹುದು? ಜಗತ್ತಿನಲ್ಲಿ ಅತ್ಯಂತ ನಯ ವಿನಯವಿರುವ ವ್ಯಕ್ತಿಗಳು ಯಾರೆಂದು ಬಲ್ಲಿರಾ? ಅದು ಮಹಾ ರೋಗಗಳಿಗೆ ತುತ್ತಾದವರು. ಯಾಕೆಂದರೆ ಬದುಕಿನ ಕುರಿತು ಅವರು ಬಹಳಷ್ಟು ಅರಿತುಕೊಂಡಿದ್ದಾರೆ.

ಎರಡು ಸಾವಿರದ ನೋಟಿನ ಬೆಲೆ ಅರಿಯದೆ ಚಾಕ್ಲೆಟ್ ತೆಗೆದ ಬಾಲಕಿಯಂತೆ ಕಳೆದು ಹೋದುದನ್ನು ಚಿಂತಿಸಿ ವ್ಯಥೆಯಿಂದ ಕಣ್ಣಾಲಿಗಳು ತುಂಬದಿರಲಿ. ಮರಣವೆಂಬುದು ಸಮಯ ತಿಳಿಸದೆ ಹಠಾತ್ತನೆ ಆಕಸ್ಮಿಕವಾಗಿ ಬರುವ ಕೊನೆಯ ಬಸ್ಸು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …