Home / ವಾರ್ತೆಗಳು / ಉಮ್ರಾ: ರಮಝಾನ್ ಮೊದಲ 20 ದಿನಗಳಿಗೆ ವೀಸಾ ಅನುಮತಿ

ಉಮ್ರಾ: ರಮಝಾನ್ ಮೊದಲ 20 ದಿನಗಳಿಗೆ ವೀಸಾ ಅನುಮತಿ

ಸೌದಿ ಅರೇಬಿಯಾ: ರಮಝಾನ್ ತಿಂಗಳಲ್ಲಿ ಉಮ್ರಾ ನಿರ್ವಹಿಸಲು ಬಯಸುವವರಿಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಪರವಾನಿಗೆ ನೀಡಿದೆ. ನುಸುಕ್ ಮತ್ತು ತವಕಲ್‌ನಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಉಮ್ರಾ ಬುಕಿಂಗ್ ಮಾಡಬೇಕಾಗಿದೆ.

ರಮಝಾನಿನ ಮೊದಲ 20 ದಿವಸಗಳಿಗೆ ಬುಕಿಂಗ್ ಸೌಲಭ್ಯವನ್ನು ಇದೀಗ ಆರಂಭಿಸಲಾಗಿದೆ. ಕೊನೆಯ 10 ದಿನಗಳಿಗೆ ಬುಕಿಂಗ್ ಸೌಲಭ್ಯವನ್ನು ನಂತರ ಆರಂಭಿಸಲಾಗುವುದು.

ಉಮ್ರಾ ವೀಸಾಗಳ ಜೊತೆಗೆ ಇತರ ವೀಸಾಗಳ ಮೂಲಕ ಸೌದಿಗೆ ಆಗಮಿಸುವವರಿಗೂ ಉಮ್ರಾ ನಿರ್ವಹಿಸುವುದಕ್ಕೆ ಈ ಬಾರಿ ಅನುಮತಿ ನೀಡಿರುವುದರಿಂದ ಜನ ನಿಬಿಡತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …