Home / editor (page 31)

editor

`ವಹನ್’ ನಮ್ಮ ಹೃದಯದಲ್ಲಿದೆ

@ ಅಬೂ ಝೀಶಾನ್ ಪ್ರವಾದಿ(ಸ) ಒಮ್ಮೆ ಸಹಾಬಿಗಳೊಂದಿಗೆ ಹೇಳುತ್ತಾರೆ, “ಒಂದು ಕಾಲ ಬರುವುದು, ಆಗ ಇಸ್ಲಾಮಿನ ಶತ್ರುಗಳು ಮುಸ್ಲಿಮರ ಮೇಲೆ, ಜನರು ಊಟದ ಹಾಸಿನ ಮೇಲೆ ಹೇಗೆ ಮುಗಿ ಬೀಳುವರೋ ಹಾಗೆ ಮುಗಿ ಬೀಳುವರು.” ಆಗ ಸಹಾಬಿಗಳು ಆಶ್ಚರ್ಯಚಕಿತರಾಗಿ ಕೇಳುತ್ತಾರೆ, “ಓ ಪ್ರವಾದಿಯವರೇ(ಸ) ಆಗ ಮುಸ್ಲಿಮರು ಅಷ್ಟು ಕಡಿಮೆ ಸಂಖ್ಯೆಯಲ್ಲಿರುತ್ತಾರಾ? (ಯಾಕೆಂದರೆ ಅಂದು ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿದ್ದರೂ ಶತ್ರುಗಳನ್ನು ಸದಾ ಸೋಲಿಸುತ್ತಿದ್ದರು). ಆಗ ಪ್ರವಾದಿ(ಸ) ಉತ್ತರಿಸಿದರು, “ಇಲ್ಲ, ಅಂದು ಮುಸ್ಲಿಮರು …

Read More »

550 ಗಂಟೆ ಯಶಸ್ವಿಯಾಗಿ ವಿಮಾನ ಹಾರಿಸಿದ ಹಿಜಾಬ್‌ ಧಾರಿ ಸಯೀದಾ ಸಲ್ವಾ ಫಾತಿಮಾ

ಹಳೆ ಹೈದರಾಬಾದ್ ನಲ್ಲಿ ಶಿಕ್ಷಣಕ್ಕಾಗಿ ಹೋರಾಟದಿಂದ ಏರ್‌ಬಸ್-320 ಹಾರಾಟದ ವರೆಗಿನ ಯಶೋಗಾಥೆ ಹೈದರಾಬಾದ್: ಕೆಲ ತಿಂಗಳ ಹಿಂದೆ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗುವುದು ದೇಶಾದ್ಯಂತ ವಿವಾದದ ಸ್ವರೂಪ ಪಡೆದಿತ್ತು. ಆದರೆ, ಇಲ್ಲೊಬ್ಬ ಹಿಜಾಬ್‌ಧಾರಿ ಮಹಿಳೆಯು ಎರಡು ಸೀಟುಗಳ ಸೆಸ್ನಾದಿಂದ ಪ್ರಾರಂಭಿಸಿ, ಇದೀಗ ಏರ್‌ಬಸ್-320 ವಿಮಾನವನ್ನು 550 ಗಂಟೆಗಳ ಕಾಲ ಯಶಸ್ವಿಯಾಗಿ ಹಾರಿಸಿರುವ ಸಾಧನೆ ಹೈದರಾಬಾದ್‌ನಿಂದ ವರದಿಯಾಗಿದೆ. 2015-16ರಲ್ಲೇ ಸಲ್ವಾ ಪೈಲಟ್‌ ಆಗಿ ಆಯ್ಕೆಯಾಗಿದ್ದರು. 34 ವರ್ಷದ ಸೈಯೀದಾ ಸಲ್ವಾ ಫಾತಿಮಾರ …

Read More »

ಪ್ರವಾದಿ ಮುಹಮ್ಮದರು 6ನೇ ಶತಮಾನದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಸಮಾಜ ಸುಧಾರಣೆಯ ಕೆಲವು ಝಲಕುಗಳು

ಪ್ರವಾದಿ ಮುಹಮ್ಮದರು 6ನೇ ಶತಮಾನದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಸಮಾಜ ಸುಧಾರಣೆಯ ಕೆಲವು ಝಲಕುಗಳು ಇಲ್ಲಿವೆ. ನೆನಪಿರಲಿ, 21ನೇ ಶತಮಾನದಲ್ಲಲ್ಲ, 6ನೇ ಶತಮಾನದಲ್ಲಿ. 1. ಸರ್ವರು ಸಮಾನರು ಎಂಬ ಪರಿಕಲ್ಪನೆ. 2. ಹೆತ್ತವರು- ಅವರು ಮುಸ್ಲಿಮೇತರರಾಗಿದ್ದರೂ- ಅವರ ಸೇವೆ ಕಡ್ಡಾಯ. ಅವರ ಕೋಪ ನರಕಕ್ಕೆ ಕಾರಣ. 3. ಶ್ರೀಮಂತರು ತಮ್ಮ ಸಂಪತ್ತಿನಿಂದ ಬಡವರಿಗೆ ಪಾಲು ಕೊಡುವುದು ಕಡ್ಡಾಯ. ಆ ಮೂಲಕ ಸಂಪತ್ತು ಒಬ್ಬರಲ್ಲೇ ಸಂಗ್ರಹಗೊಳ್ಳದೆ ಚಲಾವಣೆಗೆ ಬರುವುದಕ್ಕೆ ಒತ್ತು. 4. …

Read More »

ಇತಿಹಾಸ ರಚನೆಯಲ್ಲಿ ಮೋಸಗಳು

ಅನುಬಂಧ-2 (ಖ್ಯಾತ ವಿದ್ವಾಂಸ, ಚಿಂತಕ ಮತ್ತು ಇತಿಹಾಸ ಸಂಶೋಧಕರಾದ ಶ್ರೀ ಬಿ.ಎನ್. ಪಾಂಡೆ 1985ರ ಡಿಸೆಂಬರ್ 19, 20, 21ರಂದು ಪಾಟ್ನಾದಲ್ಲಿ ಜರಗಿದ ‘ಖುದಾ ಬಕ್ಷ್’ ವಾರ್ಷಿಕ ಸಮಾರಂಭದಲ್ಲಿ ಮಾಡಿದ ಭಾಷಣಗಳ ಸಂಗ್ರಹವಾಗಿರುವ ‘ಇಸ್ಲಾಮ್ ಏಂಡ್ ಇಂಡಿಯನ್ ಕಲ್ಚರ್’ ಎಂಬ ಪುಸ್ತಕದ ಆಯ್ದ ಭಾಗಗಳನ್ನು ಇಲ್ಲಿ ಅನುಬಂಧವಾಗಿ ಸೇರಿಸಲಾಗಿದೆ.) ಭಾರತೀಯ ಇತಿಹಾಸದ ಕುರಿತು ವ್ಯಾಪಕ ಮತ್ತು ಗಹನವಾದ ನಿಷ್ಪಕ್ಷ ಅಧ್ಯಯನ ತುರ್ತಾಗಿ ನಡೆಯಬೇಕಾಗಿದೆ. ಈ ಅಧ್ಯಯನವು ಹಿಂದಿಗಿಂತ ಇಂದು ಅತ್ಯಗತ್ಯವಾಗಿದೆ. …

Read More »

ಇಸ್ಲಾಮೀ ರಾಷ್ಟ್ರದ ಪ್ರಥಮ ಸಂವಿಧಾನ

ಅನುಬಂಧ-1 ಪ್ರವಾದಿ ಮುಹಮ್ಮದ್‌ರು(ಸ) ತಮ್ಮ ಹುಟ್ಟೂರಾದ ಮಕ್ಕಾದಿಂದ ಮದೀನಕ್ಕೆ ವಲಸೆ ಹೋದರು. ಇದು ಇಸ್ಲಾಮಿನ ಸಂದೇಶ ಪ್ರಚಾರ ಇತಿಹಾಸದ ಸುಪ್ರಧಾನ ಘಟನೆಯಾಗಿತ್ತು. ಮಕ್ಕಾದ ಮಣ್ಣು, ಒಳಿತಿನ ಚಿಗುರುಗಳು ಸುಲಭದಲ್ಲಿ ಸಮೃದ್ಧವಾಗಿ ಬೆಳೆಯುವುದಕ್ಕೆ ಯೋಗ್ಯವಾಗಿರಲಿಲ್ಲ. ಆದರೆ, ಯಸ್ರಿಬ್‌ನ ಹಿನ್ನೆಲೆಯು ಸತ್ಯದ ಪ್ರಚಾರಕ್ಕೆ ತುಂಬಾ ಅನುಕೂಲವಾಗಿತ್ತು. ಪ್ರವಾದಿಯವರು ಅಲ್ಲಿಗೆ ತಲಪಿದ ಬಳಿಕ ಆ ನಗರದ ಹೆಸರನ್ನೂ ಬದಲಾಯಿಸಿದರು. ಅದು ‘ಮದೀನತ್ತುನ್ನಬಿ’ ಅರ್ಥಾತ್ ಪ್ರವಾದಿಯ ನಗರವಾಯಿತು. ಮದೀನದಲ್ಲಿ ವಿವಿಧ ಧರ್ಮ ವಿಶ್ವಾಸಿಗಳಿದ್ದರು. ಪ್ರವಾದಿಯವರ ಆಗಮನದಿಂದ …

Read More »

ಕಮ್ಯೂನಿಸ್ಟ್ ಒಕ್ಕೂಟದ ಪತನಕ್ಕೆ ಅದರ ವ್ಯವಸ್ಥೆಯಲ್ಲಿನ ದೋಷವೇ ಕಾರಣವೆಂದು ಪ್ರಚುರಪಡಿಸುವವರು ಇಸ್ಲಾಮಿನ ವಿಷಯದಲ್ಲಿ ಬೇರೆಯೇ ನಿಲುವನ್ನು ಸ್ವೀಕರಿಸುವುದು ವಿರೋಧಾಭಾಸವಲ್ಲವೇ?

ಸೋಶಲಿಝಂನ ಪತನ ಹಾಗೂ ಇಸ್ಲಾಮೀ ಆಡಳಿತ ವ್ಯವಸ್ಥೆಗೆ ಉಂಟಾದ ಆಘಾತವು ಪ್ರತ್ಯಕ್ಷವಾಗಿ ಒಂದೇ ರೀತಿ ಗೋಚರಿಸಬಹುದು. ಆದರೆ ಅವೆರಡರ ಮಧ್ಯೆ ಬಹಳ ಅಂತರವಿದೆ. ವಿಶ್ವಾಸ ರೀತಿಗಳು, ಹಕ್ಕು ಬಾಧ್ಯತೆಗಳು, ಇತಿಹಾಸ ಪಾಠಗಳು, ಪ್ರಾಯೋಗಿಕ ಅನುಭವಗಳನ್ನು ಗಮನಿಸಿದರೆ ಎಲ್ಲರಿಗೂ ಇದು ಸುಲಭವಾಗಿ ಅರ್ಥವಾಗುತ್ತದೆ. ಕಮ್ಯುನಿಸ್ಟ್ ವ್ಯವಸ್ಥೆಯ ಗುರಿಯು ಅದರ ಗೋಷಣಾ ಪತ್ರ ಸ್ಪಷ್ಟಪಡಿಸುವಂತೆ ಜಾತಿ, ವರ್ಗ ರಹಿತವಾದ ಒಂದು ಸಮಾಜದ ಸ್ಥಾಪನೆಯಾಗಿದೆ. ಲೆನಿನ್ ವಿವರಿಸುವಂತೆ ಆಡಳಿತಗಾರ-ಪ್ರಜೆ, ನಾಯಕ-ಅನುಯಾಯಿ, ಪೋಲಿಸ್, ಸೈನ್ಯ, ನ್ಯಾಯಾಲಯವಿಲ್ಲದ …

Read More »

ಇಸ್ಲಾಮ್ ಧರ್ಮವು ಅತ್ಯುತ್ತಮ ಹಾಗೂ ಫಲಪ್ರದವೆಂದಾದರೆ ವಿಶ್ವದಲ್ಲಿ ನೂರು ಕೋಟಿ ಮುಸ್ಲಿಮರೂ, ಐವತ್ತಕ್ಕಿಂತ ಹೆಚ್ಚು ಮುಸ್ಲಿಮ್ ರಾಷ್ಟ್ರಗಳಿದ್ದೂ ಅದೇಕೆ ಫಲಪ್ರದವಾಗುತ್ತಿಲ್ಲ? ಅದರ ಸತ್ಪಲಗಳು ಗೋಚರಿಸದಿರಲು ಕಾರಣವೇನು.?

ಇಸ್ಲಾಮ್ ವೈಯಕ್ತಿಕ, ಸಾಮಾಜಿಕ, ರಾಜಕೀಯ ಯಶಸ್ಸಿನೊಂದಿಗೆ ಮರಣಾನಂತರದ ವಿಜಯವನ್ನು ಖಾತ್ರಿಗೊಳಿಸುವ ಜೀವನ ವ್ಯವಸ್ಥೆಯಾಗಿದೆ. ಅದು ವ್ಯಕ್ತಿ ಜೀವನದ ತೀವ್ರ ಶಾಖಕ್ಕೆ ನೆರಳು ನೀಡುವ ಕೊಡೆಯಾಗಿ, ಕಗ್ಗತ್ತಲೆಯಲ್ಲಿ ಬೆಳಕನ್ನು ನೀಡುವ ನಂದಾದೀಪವಾಗಿ, ವಿಜಯದ ಸಂದರ್ಭದಲ್ಲಿ ನಿಯಂತ್ರಿಸುವ ಕಡಿವಾಣವಾಗಿ, ದುಃಖದ ಸಂದರ್ಭದಲ್ಲಿ ಸಾಂತ್ವನದ ಸಂದೇಶವಾಗಿ, ನೋವಿನಲ್ಲಿ ಸ್ನೇಹ ಸ್ಪರ್ಶವಾಗಿ, ತಪ್ಪು ಹಾದಿಯಿಂದ ತಡೆಯುವ ಗುರಾಣಿಯಾಗಿ ಸಹಕರಿಸುತ್ತದೆ. ಬದುಕಿಗೆ ಸ್ಪಷ್ಟ ಮಾರ್ಗದರ್ಶನವನ್ನು ನೀಡುತ್ತದೆ. ಹೀಗೆ ನಮ್ಮ ಉದಾಸೀನತೆಯನ್ನು ಕೊನೆಗೊಳಿಸುತ್ತದೆ. ಅಸ್ವಸ್ಥತೆಗೆ ವಿರಾಮ ಹಾಕುತ್ತದೆ. ಕೌಟುಂಬಿಕ …

Read More »

ಜಾಗತಿಕ ಮಟ್ಟದಲ್ಲಿ ನೋಡುವಾಗ ಹಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ಮುಸ್ಲಿಮರು ಬಹಳ ಹಿಂದುಳಿದಿದ್ದಾರೆ. ಭಾರತದ ಮುಸ್ಲಿಮರೂ ಇತರ ಧರ್ಮೀಯರಿಗಿಂತ ಬಹಳ ಹಿಂದುಳಿದ ಅವಸ್ಥೆಯಲ್ಲಿದ್ದಾರೆ. ಇಸ್ಲಾಮ್ ಪ್ರಗತಿಗೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವೆಂಬುದನ್ನು ಸೂಚಿಸುತ್ತದೆಯಲ್ಲವೇ.?

ಮಾನವ ಜಗತ್ತಿನ ಪ್ರಗತಿ ಹಾಗೂ ಅಭಿವೃದ್ಧಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಪಾತ್ರ ಹೇಳಬೇಕಾದ ಅಗತ್ಯವಿಲ್ಲದಷ್ಟು ಸ್ಪಷ್ಟವೂ, ವಿವಾದಾತೀತವೂ ಆಗಿದೆ. ಗಾಢ ನಿದ್ರೆಯಲ್ಲಿದ್ದ ಅರೇಬಿಯನ್ ಜನತೆಯನ್ನು ಇಸ್ಲಾಮ್ ಬಡಿದೆಬ್ಬಿಸಿತು. ಅವರ ಅಜ್ಞಾನ, ಅಂಧ ವಿಶ್ವಾಸವನ್ನು ಹೋಗಲಾಡಿಸಿತು. ಜೀವನದ ಎಲ್ಲಾ ರಂಗಗಳಲ್ಲೂ ಅವರ ಉನ್ನತಿಗೆ ಹಾಗೂ ಮುನ್ನಡೆಗೆ ಕಾರಣವಾಯಿತು. ಹೀಗೆ ಅವರು ವಿಶ್ವದ ನಾಯಕತ್ವ ಸ್ಥಾನಕ್ಕೆ ತಲುಪಿಸಿದರು. ಸತ್ಯ, ನ್ಯಾಯ, ಸಮಾನತೆ, ಸಹೋದರತೆ, ಸಹಿಷ್ಣುತೆ ಹಾಗೂ ಧಾರ್ಮಿಕ ಮೌಲ್ಯಗಳಲ್ಲಿ ಮಾತ್ರವಲ್ಲ ಕಲೆ, ಸಾಹಿತ್ಯ, …

Read More »

ಇಸ್ಲಾಮ್ ಮತ್ತು ಮುಸ್ಲಿಮರ ಹಿಂದುಳಿಯುವಿಕೆ

ಜಾಗತಿಕ ಮಟ್ಟದಲ್ಲಿ ನೋಡುವಾಗ ಹಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ಮುಸ್ಲಿಮರು ಬಹಳ ಹಿಂದುಳಿದಿದ್ದಾರೆ. ಭಾರತದ ಮುಸ್ಲಿಮರೂ ಇತರ ಧರ್ಮೀಯರಿಗಿಂತ ಬಹಳ ಹಿಂದುಳಿದ ಅವಸ್ಥೆಯಲ್ಲಿದ್ದಾರೆ. ಇಸ್ಲಾಮ್ ಪ್ರಗತಿಗೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವೆಂಬುದನ್ನು ಸೂಚಿಸುತ್ತದೆಯಲ್ಲವೇ.? ಮಾನವ ಜಗತ್ತಿನ ಪ್ರಗತಿ ಹಾಗೂ ಅಭಿವೃದ್ಧಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಪಾತ್ರ ಹೇಳಬೇಕಾದ ಅಗತ್ಯವಿಲ್ಲದಷ್ಟು ಸ್ಪಷ್ಟವೂ, ವಿವಾದಾತೀತವೂ ಆಗಿದೆ. ಗಾಢ ನಿದ್ರೆಯಲ್ಲಿದ್ದ ಅರೇಬಿಯನ್ ಜನತೆಯನ್ನು ಇಸ್ಲಾಮ್ ಬಡಿದೆಬ್ಬಿಸಿತು. ಅವರ ಅಜ್ಞಾನ, ಅಂಧ ವಿಶ್ವಾಸವನ್ನು ಹೋಗಲಾಡಿಸಿತು. ಜೀವನದ ಎಲ್ಲಾ ರಂಗಗಳಲ್ಲೂ …

Read More »

ಮಸೀದಿಗಳಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ನಿಷೇಧಿಸಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಎಐಎಂಪಿಎಲ್‌ಬಿ

ಹೊಸದಿಲ್ಲಿ, ಫೆ.8: ಮುಸ್ಲಿಮ್ ಮಹಿಳೆಯರು ಮಸೀದಿಗಳನ್ನು ಪ್ರವೇಶಿಸುವುದನ್ನು ಮತ್ತು ನಮಾಝ್ ಅಥವಾ ಸಾಮೂಹಿಕ ಪ್ರಾರ್ಥನೆಗಳನ್ನು ಸಲ್ಲಿಸುವುದನ್ನು ನಿಷೇಧಿಸಲಾಗಿಲ್ಲ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದೆ. ಆದರೂ, ಒಂದೇ ಸಾಲಿನಲ್ಲಿ ಅಥವಾ ಸಾಮಾನ್ಯ ಸ್ಥಳದಲ್ಲಿ ಪುರುಷರು ಮತ್ತು ಮಹಿಳೆಯರು ಮುಕ್ತವಾಗಿ ಬೆರೆಯುವುದು ಇಸ್ಲಾಮ್‌ನಲ್ಲಿ ಸೂಚಿಸಲಾಗಿರುವ ನಿಲುವಿಗೆ ಅನುಗುಣವಾಗಿಲ್ಲ. ಸಾಧ್ಯವಾದರೆ ಮಸೀದಿ ಆಡಳಿತ ಸಮಿತಿಯು ಆವರಣದಲ್ಲಿ ಮಹಿಳೆರಿಗಾಗಿ ಪ್ರತ್ಯೇಕ ಜಾಗವನ್ನು ಸೃಷ್ಟಿಸುವುದು ಅಗತ್ಯವಾಗುತ್ತದೆ …

Read More »