Home / ಪ್ರಶ್ನೋತ್ತರ / ಇಸ್ಲಾಮ್ ಧರ್ಮವು ಅತ್ಯುತ್ತಮ ಹಾಗೂ ಫಲಪ್ರದವೆಂದಾದರೆ ವಿಶ್ವದಲ್ಲಿ ನೂರು ಕೋಟಿ ಮುಸ್ಲಿಮರೂ, ಐವತ್ತಕ್ಕಿಂತ ಹೆಚ್ಚು ಮುಸ್ಲಿಮ್ ರಾಷ್ಟ್ರಗಳಿದ್ದೂ ಅದೇಕೆ ಫಲಪ್ರದವಾಗುತ್ತಿಲ್ಲ? ಅದರ ಸತ್ಪಲಗಳು ಗೋಚರಿಸದಿರಲು ಕಾರಣವೇನು.?

ಇಸ್ಲಾಮ್ ಧರ್ಮವು ಅತ್ಯುತ್ತಮ ಹಾಗೂ ಫಲಪ್ರದವೆಂದಾದರೆ ವಿಶ್ವದಲ್ಲಿ ನೂರು ಕೋಟಿ ಮುಸ್ಲಿಮರೂ, ಐವತ್ತಕ್ಕಿಂತ ಹೆಚ್ಚು ಮುಸ್ಲಿಮ್ ರಾಷ್ಟ್ರಗಳಿದ್ದೂ ಅದೇಕೆ ಫಲಪ್ರದವಾಗುತ್ತಿಲ್ಲ? ಅದರ ಸತ್ಪಲಗಳು ಗೋಚರಿಸದಿರಲು ಕಾರಣವೇನು.?

ಇಸ್ಲಾಮ್ ವೈಯಕ್ತಿಕ, ಸಾಮಾಜಿಕ, ರಾಜಕೀಯ ಯಶಸ್ಸಿನೊಂದಿಗೆ ಮರಣಾನಂತರದ ವಿಜಯವನ್ನು ಖಾತ್ರಿಗೊಳಿಸುವ ಜೀವನ ವ್ಯವಸ್ಥೆಯಾಗಿದೆ. ಅದು ವ್ಯಕ್ತಿ ಜೀವನದ ತೀವ್ರ ಶಾಖಕ್ಕೆ ನೆರಳು ನೀಡುವ ಕೊಡೆಯಾಗಿ, ಕಗ್ಗತ್ತಲೆಯಲ್ಲಿ ಬೆಳಕನ್ನು ನೀಡುವ ನಂದಾದೀಪವಾಗಿ, ವಿಜಯದ ಸಂದರ್ಭದಲ್ಲಿ ನಿಯಂತ್ರಿಸುವ ಕಡಿವಾಣವಾಗಿ, ದುಃಖದ ಸಂದರ್ಭದಲ್ಲಿ ಸಾಂತ್ವನದ ಸಂದೇಶವಾಗಿ, ನೋವಿನಲ್ಲಿ ಸ್ನೇಹ ಸ್ಪರ್ಶವಾಗಿ, ತಪ್ಪು ಹಾದಿಯಿಂದ ತಡೆಯುವ ಗುರಾಣಿಯಾಗಿ ಸಹಕರಿಸುತ್ತದೆ. ಬದುಕಿಗೆ ಸ್ಪಷ್ಟ ಮಾರ್ಗದರ್ಶನವನ್ನು ನೀಡುತ್ತದೆ. ಹೀಗೆ ನಮ್ಮ ಉದಾಸೀನತೆಯನ್ನು ಕೊನೆಗೊಳಿಸುತ್ತದೆ. ಅಸ್ವಸ್ಥತೆಗೆ ವಿರಾಮ ಹಾಕುತ್ತದೆ. ಕೌಟುಂಬಿಕ ಜೀವನದಲ್ಲಿ ಧೈರ್ಯ ಹಾಗೂ ಭದ್ರತೆಯನ್ನು ನೀಡುತ್ತದೆ. ವೈಯುಕ್ತಿಕವಾಗಿ ಇಸ್ಲಾಮನ್ನು ಪ್ರಾಯೋಗಿಕಗೊಳಿಸಿ ಸತ್ಪಲವನ್ನು ಪಡೆಯುವುದರೊಂದಿಗೆ, ಪ್ರಾಮಾಣಿಕವಾದ ಆಚರಣೆಯು ಮರಣಾನಂತರ ನರಕದಿಂದ ಮುಕ್ತಗೊಳಿಸಿ ಸ್ವರ್ಗಕ್ಕೆ ಅರ್ಹಗೊಳಿಸುತ್ತದೆ. ಇಸ್ಲಾಮ್ ತನ್ನ ಕಾರ್ಯಭಾರವನ್ನು ಕಳೆದ ಹದಿನಾಲ್ಕು ಶತಮಾನಗಳಿಂದ ನಿರಂತರವಾಗಿ ನಿರ್ವಹಿಸುತ್ತಾ ಬರುತ್ತಿದೆ. ಇಂದು ಕೂಡಾ ಲೋಕದಲ್ಲೆಡೆ ಇಸ್ಲಾಮಿನ ಸತ್ಫಲಗಳು ಜನಕೋಟಿಗಳಲ್ಲಿ ಗೋಚರಿಸುತ್ತಿದೆ.

ಒಂದು ಕಾರ್ಯವು ಅತ್ಯುತ್ತಮವೂ, ಫಲಪ್ರದವೂ ಆಗಿರುವ ಕಾರಣಕ್ಕೆ ಎಲ್ಲರೂ ಅದನ್ನು ಸ್ವೀಕರಿಸಬೇಕೆಂದಿಲ್ಲ. ಧೂಮಪಾನ ಕೆಟ್ಟದೆಂದು ತಿಳಿಯದವರು ಲೋಕದಲ್ಲಿ ಯಾರೂ ಇರಲಾರರು. ಆದರೂ ಕೋಟ್ಯಂತರ ಜನರು ಅದನ್ನು ಉಪಯೋಗಿಸುತ್ತಾರೆ. ಮದ್ಯಪಾನವು ಶರೀರ, ಮಸ್ತಿಷ್ಕ, ಕುಟುಂಬ, ಸಮಾಜ ಹಾಗೂ ರಾಷ್ಟ್ರಕ್ಕೆ ಹಾನಿಕರವೆಂಬ ಅರಿವಿದ್ದರೂ ಜನರು ಕೋಟ್ಯಂತರ ಹಣವನ್ನು ಅದಕ್ಕಾಗಿ ಸುರಿಯುತ್ತಾರೆ. ಆದ್ದರಿಂದ ಒಂದು ಕಾರ್ಯವು ಒಳಿತೋ-ಕೆಡುಕೋ, ಗುಣಕರವೊ-ದೋಷಪೂರ್ಣವೋ, ಫಲಪ್ರದವೋ ಎಂಬುದರ ಮಾನದಂಡ ಅದನ್ನು ಎಷ್ಟು ಜನರು ನಿರಾಕರಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ ಎಂಬುದಲ್ಲ ಒಂದು ಕಾರ್ಯವನ್ನು ಒಪ್ಪಿಕೊಂಡು ಕಾರ್ಯಗತಗೊಳಿಸಿದರೆ ಅದು ಸತ್ಫಲಕ್ಕೆ ಕಾರಣವಾದರೆ ಒಳಿತೆಂದೂ, ಅದನ್ನು ಕಾರ್ಯಗತಗೊಳಿಸದಿದ್ದರೆ ಒಳ್ಳೆಯ ಫಲ ಗೋಚರಿಸುವುದಾದರೆ ಅದು ಕೆಡುಕೆಂದೂ ತಿಳಿದುಕೊಳ್ಳವುದೇ ಸೂಕ್ತ ಮಾನದಂಡವಾಗಿದೆ. ಈ ಆಧಾರದಲ್ಲಿ ನೋಡುವಾಗ ಇಸ್ಲಾಮಿನ ಸಾಮಾಜಿಕ-ಆರ್ಥಿಕ -ರಾಜಕೀಯ-ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದಾಗ ಮಾನವ ಸಮೂಹಕ್ಕೆ ಅತ್ಯುಜ್ವಲ ವಿಜಯವನ್ನೋ ಅಮೂಲ್ಯವಾದ ಕೊಡುಗೆಯನ್ನೋ ನೀಡಿದೆ. ಆದರೆ ಅದನ್ನು ಯಾವ ರೀತಿ ನಾವು ಪ್ರಾಯೋಗಿಕಗೊಳಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *