Home / ಪ್ರಶ್ನೋತ್ತರ / ಅಲ್ಲಾಹ್ ಎಂಬ ಹೆಸರು?

ಅಲ್ಲಾಹ್ ಎಂಬ ಹೆಸರು?

ಅಲ್ಲಾಹ್ ಎಂಬ ಹೆಸರು ಹೇಗೆ ಬಂತು? ಅಲ್ಲಾಹ್ ಅಂದರೆ ದೇವರಾ? ಅವನಿಗಿರುವ ಶಕ್ತಿಯೇನು? ಮೊದಲು ಅಲ್ಲಾಹ್ ಎಂದು ಹೆಸರು ಹೇಳಿದವರು ಯಾರು? ದಯವಿಟ್ಟು ತಿಳಿಸಿರಿ.

– ಅರಬರು ಆರಾಧಿಸುವ ವಸ್ತುಗಳನ್ನು ಇಲಾಹ್ ಎಂದು ಹೇಳುತ್ತಿದ್ದರು. ಇಲಾಹ್‌ನ ಅರ್ಥ ಆರಾಧ್ಯ (ದೇವರು). ಆದರೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದ, ಮಾನವನ ಹುಟ್ಟು ಸಾವುಗಳನ್ನು ನಿರ್ಣಯಿಸುವ ಓರ್ವ ಮಹಾ ದೇವನನ್ನೂ ಅವರು ನಂಬುತ್ತಿದ್ದರು. ಅವನೇ ಅಲ್ ಇಲಾಹ್ ಇದೇ ಅಲ್ ಇಲಾಹ್ ಕ್ರಮೇಣ ‘ಅಲ್ಲಾಹ್’ ಎಂದು ಪ್ರಚಲಿತಗೊಂಡಿತು. ಅದನ್ನು ಯಾರು ಆರಂಭಿಸಿದರು ಎಂದು ನಿಖರವಾಗಿ ಹೇಳಲಾಗದು. ಪ್ರವಾದಿ ಮುಹಮ್ಮದ್(ಸ) ಏಕದೇವನ ಆರಾಧನೆಯ ಕರೆ ಕೊಟ್ಟಾಗ ಸತ್ಯನಿಷೇಧಿಗಳು “ನಮ್ಮ ಅನೇಕ ದೇವರುಗಳನ್ನು ಅಳಿಸಿ ಇವನು ಒಬ್ಬ ದೇವನನ್ನು ಮಾಡಕೊಂಡನೇ?” ಎಂದು ಆಕ್ಷೇಪಿಸಿದ್ದರು. ಅಲ್ಲಾಹ್ ಎಂಬುದು ನಾಮ ಪದವಾದರೆ ಇವರು ಒಬ್ಬ ಅಲ್ಲಾಹನಿಗೆ ನೂರಾರು ಗುಣ ಸೂಚಕ ನಾಮಗಳಿವೆ. ಅವನಿಗೆ ಸಾಟಿಯಾದ ಯಾವೊಂದು ವಸ್ತುವೂ ಇಲ್ಲ.

ಸಂಕಷ್ಟಗಳು ಮತ್ತು ವಿಪತ್ತುಗಳು ಬಂದಾಗ ಅರಬರು ತಮ್ಮ ಎಲ್ಲ ದೇವರುಗಳನ್ನು ಮರೆತು ಕೇವಲ ಅಲ್ಲಾಹನಲ್ಲಿ ಮೊರೆಯಿಡುತ್ತಿದ್ದರು.

ಉದಾ: ಪ್ರವಾದಿ ಮುಹಮ್ಮದ್‌ರ(ಸ) ಜನನದ ವರ್ಷ ಕಅಬಾ ಭವನವನ್ನು ಕೆಡವಲು ಬಂದ ಅಬ್ರಹನ ಸೇನೆಯಿಂದ ತಮ್ಮನ್ನೂ ತಮ್ಮ ಕುಟುಂಬವನ್ನೂ ರಕ್ಷಿಸಬೇಕೆಂದು ಪ್ರವಾದಿಯವರ ಪಿತಾಮಹ ಅಬ್ದುಲ್ ಮುತ್ತಲಿಬ್ ಕೇವಲ ಅಲ್ಲಾಹನಲ್ಲಿ ಪ್ರಾರ್ಥಿಸಿದ್ದರು. ಕಅಬಾ ‘ಅಲ್ಲಾಹನ ಭವನ’. ಅದನ್ನು ಅವನು ಮಾತ್ರ ರಕ್ಷಿಸಬಲ್ಲನು ಎಂದವರು ಹೇಳಿದರು. ಅವರ ಪ್ರಾರ್ಥನೆಯ ಬಳಿಕ ಅದನ್ನು ಕೆಡವಲು ಮುಂದೆ ಬಂದ ಅಬ್ರಹನ ಬೃಹತ್ ಗಜ ಸೇನೆಯನ್ನು ಅಲ್ಲಾಹನು ‘ಅಬಾಬಿಲ್’ ಎಂಬ ಚಿಕ್ಕ ಪಕ್ಷಿಗಳ ತಂಡದಿಂದ ನಾಶಗೊಳಿಸಿ ಬಿಟ್ಟನು.

ಇನ್ನೊಂದು ಘಟನೆಯಲ್ಲಿ ಪ್ರವಾದಿಯವರನ್ನು(ಸ) ನಖಶಿಖಾಂತ ವಿರೋಧಿಸುತ್ತಿದ್ದ ಅಬೂ ಜಹಲ್‌ನ ಮಗ ಇಕ್ರಿಮಾ 20 ವರ್ಷಗಳ ಪ್ರಬಲ ವಿರೋಧದ ಹೊರತಾಗಿಯೂ ಪ್ರವಾದಿಯವರಿಗೆ(ಸ) ಮಕ್ಕಾ ವಿಜಯ ಪ್ರಾಪ್ತವಾದಾಗ, ಇನ್ನು ಈ ನೆಲದಲ್ಲಿ ನಾನಿರಲಾರೆ ಎಂದು ಪಲಾಯನಗೈದರು. ಹಾಗೇ ಅವರಿಗೆ ಒಂದು ಹಡಗು ಸಿಕ್ಕಿತು. ಅದನ್ನೇರಿ ಸುರಕ್ಷಿತವಾಗಿ ಪಾರಾಗಬಲ್ಲೆನೆಂದು ಅವರು ಭಾವಿಸಿದ್ದರು. ಹಡಗು ಸ್ವಲ್ಪ ದೂರ ಹೋದಾಗ ಕಡಲಲ್ಲಿ ಭಯಂಕರ ಬಿರುಗಾಳಿಯೆದ್ದಿತು. ಪ್ರಯಾಣಿಕರಲ್ಲಿ ಹಾಹಾಕಾರವೆದ್ದಿತು. ಆಗ ಅವರೆಲ್ಲರೂ ತಂತಮ್ಮ ಇಷ್ಟ ದೇವರುಗಳನ್ನು ಪ್ರಾರ್ಥಿಸ ತೊಡಗಿದ್ದರು. ಆದರೂ ಬಿರುಗಾಳಿ ಕಡಿಮೆಯಾಗಲಿಲ್ಲ. ಎಲ್ಲರೂ ಜೀವ ಹಿಡಿದು ಹಡಗಿನಲ್ಲಿ ಕುಳಿತಿದ್ದರು. ಕೊನೆಗೆ ಅವರೆಲ್ಲರೂ ಒಕ್ಕೂರಳಿನಿಂದ ‘ಅಲ್ಲಾಹನನ್ನು ಮಾತ್ರ ಪ್ರಾರ್ಥಿಸೋಣ’ ಎಂದು ತೀರ್ಮಾನಿಸಿದರು. ಏಕೆಂದರೆ ಅಂತಹ ನಿರ್ಣಾಯಕ ಘಟ್ಟದಲ್ಲಿ ಅಲ್ಲಾಹನು ಮಾತ್ರ ಸಹಾಯಕ್ಕೆ ಒದಗುವವನೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಈ ಪ್ರಾರ್ಥನೆಯು ಇಕ್ರಿಮಾರ ಕಣ್ಣು ತೆರೆಸಿತು. ಅವರಿಗೆ ಜ್ಞಾನೋದಯವಾಯಿತು. ಈ ಕಳೆದ ಎರಡು ದಶಕಗಳಿಂದ ಮುಹಮ್ಮದ್(ಸ) ಹೇಳುತ್ತಿದ್ದುದು ಇದನ್ನೇ ಅಲ್ಲವೇ ಎಂದು ಅವರು ಯೋಚಿಸಿದರು. ಕೊನೆಗೆ ಒಂದು ತೀರ್ಮಾನಕ್ಕೆ ಬಂದರು. ಈ ವಿಪತ್ತಿನಿಂದ ಪಾರಾದರೆ ನೇರವಾಗಿ ಪ್ರವಾದಿಯವರ ಬಳಿಗೆ ಹೋಗಿ ವಿಧೇಯತೆಯ ಪ್ರತಿಜ್ಞೆ ಕೈಗೊಳ್ಳುವುದಾಗಿ ಅವರು ನಿರ್ಧರಿಸಿದರು. ಹಾಗೆ ಬಿರುಗಾಳಿ ನಿಂತಾಗ ಅವರು ಪ್ರವಾದಿಯವರ ಸನ್ನಿಧಿಗೆ ಬಂದು ಇಸ್ಲಾಮ್ ಸ್ವೀಕರಿಸಿದರು.

‘ಅಲ್ಲಾಹ್’ ಎಂಬುದು ಇಲಾಹ್‌ಗಳ ಇಲಾಹ್ ಆಗಿರುವವನು. ಅಲ್ ಇಲಾಹ್ ಪದ ಕ್ರಮೇಣ ಅಲ್ಲಾಹ್ ಎಂದು ಪ್ರಸಿದ್ಧವಾಯಿತು.

ಅರಬರು ಆ ಪರಮ ಇಲಾಹ್‌ನನ್ನೇ ಅಲ್ಲಾಹ್ ಎಂದು ಕರೆಯುತ್ತಿದ್ದರು. ಎಲ್ಲ ಆಶ್ರಯಗಳೂ ವಿಫಲವಾದ ತಮ್ಮ ಮೊರೆಯನ್ನು ಸಂಕಷ್ಟದ ವೇಳೆ ಅಲ್ಲಾಹನ ಮುಂದಿಡುತ್ತಿದ್ದರು. ಹಿರಿಯ ವಿದ್ವಾಂಸರು, ವ್ಯಾಖ್ಯಾನಗಾರರಲ್ಲಿ ಅನೇಕರು ಅಲ್ ಇಲಾಹ್ ಅಲ್ಲಾಹ್ ಆಯಿತೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ.

SHARE THIS POST VIA

About editor

Check Also

ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. ನಿಜವೇ ?

✍️ ಏ.ಕೆ. ಕುಕ್ಕಿಲ ಕೆಲವು ಆರೋಪಗಳಿವೆ. 1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. 2. ಅವರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ. 3. ಅವರು …

Leave a Reply

Your email address will not be published. Required fields are marked *