ಪ್ರವಾದಿ ಮುಹಮ್ಮದರು 6ನೇ ಶತಮಾನದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಸಮಾಜ ಸುಧಾರಣೆಯ ಕೆಲವು ಝಲಕುಗಳು ಇಲ್ಲಿವೆ. ನೆನಪಿರಲಿ, 21ನೇ ಶತಮಾನದಲ್ಲಲ್ಲ, 6ನೇ ಶತಮಾನದಲ್ಲಿ.
1. ಸರ್ವರು ಸಮಾನರು ಎಂಬ ಪರಿಕಲ್ಪನೆ.
2. ಹೆತ್ತವರು- ಅವರು ಮುಸ್ಲಿಮೇತರರಾಗಿದ್ದರೂ- ಅವರ ಸೇವೆ ಕಡ್ಡಾಯ. ಅವರ ಕೋಪ ನರಕಕ್ಕೆ ಕಾರಣ.
3. ಶ್ರೀಮಂತರು ತಮ್ಮ ಸಂಪತ್ತಿನಿಂದ ಬಡವರಿಗೆ ಪಾಲು ಕೊಡುವುದು ಕಡ್ಡಾಯ. ಆ ಮೂಲಕ ಸಂಪತ್ತು ಒಬ್ಬರಲ್ಲೇ ಸಂಗ್ರಹಗೊಳ್ಳದೆ ಚಲಾವಣೆಗೆ ಬರುವುದಕ್ಕೆ ಒತ್ತು.
4. . ಮಹಿಳೆಗೆ ಆಸ್ತಿಯ ಹಕ್ಕು.
6. ಹೆಣ್ಣು ಮಕ್ಕಳು ಹೆತ್ತವರ ಪಾಲಿನ ಸ್ವರ್ಗ ಎಂದು ಹೇಳಿ ಹೆಣ್ಣು ಮಕ್ಕಳಿಗಾಗಿ ಆಸೆ ಪಡುವ ಸಮಾಜವೊಂದನ್ನು ತಯಾರಿಸಿದ್ದು.
7. ಬಡವರು ಮತ್ತು ದರಿದ್ರರಿಗೆ ಊಟ ಕೊಡದವರು ಧರ್ಮದ್ರೋಹಿಗಳು ಎಂದದ್ದು.
8. ಬಡ್ಡಿ ನಿಷೇಧ
9. ಮದ್ಯನಿಷೇಧ.
10. ಒಲ್ಲದ ಪತಿಯಿಂದ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಹೆಣ್ಣಿಗೆ ಅವಕಾಶ.
11. ಪತಿಯನ್ನು ಕಳಕೊಂಡ ಮಹಿಳೆಗೆ ಮರು ಮದುವೆಗೆ ಅವಕಾಶ.
12. ಪ್ರೌಢ ಹೆಣ್ಣು ಮಕ್ಕಳಿಗೆ ತನ್ನ ವರನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ
12.. ಶಿಕ್ಷಣಕ್ಕೆ ಒತ್ತು.
13. ಇಹದ ಬದುಕು ಪರದಲ್ಲಿ ವಿಚಾರಣೆಗೆ ಒಳಗಾಗುತ್ತದೆ ಎಂಬ ಪರಿಕಲ್ಪನೆ.
14. ವಧುವಿಗೆ ವರನು ಏನನ್ನಾದರೂ ಕೊಟ್ಟು ಮದುವೆ ಮಾಡಿಕೊಳ್ಳುವುದು.
15. ಇತರ ಆರಾಧ್ಯರನ್ನು ನಿಂದಿಸುವುದು ಅಪರಾಧ.
- ಏ ಕೆ ಕುಕ್ಕಿಲ
IslamKannada News Portal
