Home / editor (page 4)

editor

ಎಲ್ಲರ ಮೇಲೆ ಪ್ರಭಾವ ಬೀರುವ ಪ್ರವಾದಿ ಮುಹಮ್ಮದ್(ಸ)

✍️ ಸಯ್ಯದ್ ಅಝರುದ್ದೀನ್ ಅನುವಾದ: ಮುಖ್ತಾರ್ ಅಹ್ಮದ್ ಇಂದಿನ ಶಬ್ದಕೋಶದಲ್ಲಿ ಪ್ರಭಾವಿಗಳೆಂದರೆ, ಅಭಿಪ್ರಾಯಗಳನ್ನು ರೂಪಿಸುವವರು, ಸಮುದಾಯಗಳನ್ನು ಸಜ್ಜುಗೊಳಿಸುವವರು ಮತ್ತು ಬದಲಾವಣೆಯನ್ನು ಚಾಲನೆ ಮಾಡುವವರು. ಆಧುನಿಕ ಪರದೆಗಳ ಆಚೆಗೆ ನಾವು ದೃಷ್ಟಿಹಾಯಿಸಿದರೆ ಇತಿಹಾಸವು ಖಂಡಗಳು ಮತ್ತು ಶತಮಾನಗಳನ್ನು ವ್ಯಾಪಿಸಿರುವ ಮತ್ತೊಂದು ರೀತಿಯ ಪ್ರಭಾವಶಾಲಿ ವ್ಯಕ್ತಿಯನ್ನು ಪ್ರಸ್ತುತಪಡಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ಅವರನ್ನು ವಿಶ್ವ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಗುರುತಿಸಲಾಗಿದೆ. ಮೈಕಲ್ ಹೆಚ್. ಹಾರ್ಟ್ ಅವರ ಪ್ರಸಿದ್ಧ ಕೃತಿ `ದಿ …

Read More »

ಪ್ರವಾದಿಗಳ ಇತಿಹಾಸ

ಸಕಲ ಮಾನವರು ಒಂದೇ ತಂದೆ ತಾಯಿಯ ಸಂತಾನವಾಗಿದ್ದಾರೆ. ನಾವೆಲ್ಲರೂ ಪ್ರಥಮ ಮಾನವ ಮತ್ತು ಪ್ರವಾದಿ ಆದಮ್ ರ(ಅ) ಮಕ್ಕಳಾಗಿದ್ದೇವೆ. ಆದಮ್‌ ರು(ಅ) ತಮ್ಮ ಸಂತಾನಗಳಿಗೆ ದೇವನ ಆದೇಶಗಳನ್ನು ಹೇಳಿಕೊಡಬೇಕೆಂದು ದೇವನು ಆದೇಶಿಸಿದನು. ಅದರಂತೆ “ದೇವನೊಬ್ಬನೇ ಅವನಲ್ಲದೆ ಅನ್ಯ ಆರಾಧ್ಯನಿಲ್ಲ, ಅವನೇ ನಿಮ್ಮ ಪ್ರಭು. ಅವನ ಆದೇಶಗಳ ಪಾಲನೆಯಿಂದ ಜೀವನದಲ್ಲಿ ಅವನ ಸಂತೃಪ್ತಿಗೆ ಪ್ರಯತ್ನಿಸಬೇಕು. ನೀವು ಸಹಾಯಕ್ಕಾಗಿ ದೇವನನ್ನು ಪ್ರಾರ್ಥಿಸಿರಿ. ಭೂಮಿಯಲ್ಲಿ ಅವನಿಗೆ ಮಾತ್ರ ಕೃತಜ್ಞರಾಗಿ ಜೀವಿಸಿರಿ. ಹೀಗೆ ಮಾಡಿದರೆ ನೀವು …

Read More »

ತಮ್ಮ ಕುಟುಂಬದವರನ್ನು ಕೊಂದ ಬಹುದೇವಾರಾಧಕರನ್ನು ಕ್ಷಮಿಸಿದ ಪ್ರವಾದಿ..

✍🏾 ಮುಷ್ತಾಕ್ ಹೆನ್ನಾಬೈಲ್   ಪ್ರವಾದಿ ಮಕ್ಕಾದಲ್ಲಿ ಜೀವಿಸಿದ ಕಾಲದಲ್ಲಿ ಮಕ್ಕಾದ ಬಹುದೇವಾರಾಧಕರು ನಿತ್ಯವೂ ಇನ್ನಿಲ್ಲದ ಕಾಟವನ್ನು ಅವರಿಗೆ ಮತ್ತು ಅವರ ಕುಟುಂಬದವರಿಗೆ ನೀಡಿದರು. ವರ್ಷಗಟ್ಟಲೆ ಅವರ ಕುಟುಂಬವನ್ನು ಬಹಿಷ್ಕರಿಸಿ, ಅನ್ನ ನೀರಿಗೂ ಗತಿಯಿಲ್ಲದಂತೆ ಮಾಡಿದರು. ಪ್ರವಾದಿಯವರನ್ನು ಬೆಂಬಲಿಸುವ ವ್ಯಕ್ತಿಗಳ ಮತ್ತು ಅವರ ಕುಟುಂಬಸ್ಥರ ಮನೆಗಳನ್ನು ಲೂಟಿ ಮಾಡಿದರು. ವ್ಯಾಪಕ ಮಾನ-ಪ್ರಾಣಗಳ ಹಾನಿಯಾಯಿತು. ಪ್ರವಾದಿಯವರನ್ನು ಬೆಂಬಲಿಸಿದರು ಎನ್ನುವ ಒಂದೇ ಕಾರಣಕ್ಕೆ ಸುಮಯ್ಯಾ ಎನ್ನುವ ಹೆಣ್ಣು ಮಗಳ ಮರ್ಮಾಂಗಕ್ಕೆ ಈಟಿ ಚುಚ್ಚಿದ …

Read More »

ಇಸ್ಲಾಂ ಶಾಂತಿ ಮತ್ತು ಸಾಮರಸ್ಯದ ಧರ್ಮ; ಹಿಂದೂ ಆಧ್ಯಾತ್ಮಿಕ ಗುರು ಸ್ವಾಮಿ ವಿಶ್ವಾಸಾನಂದ್

ನವದೆಹಲಿ: ಇಸ್ಲಾಂ ಧರ್ಮವು ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುವ ಧರ್ಮವಾಗಿದೆ ಎಂದು ನೇಪಾಳದ ಹಿಂದೂ ಆಧ್ಯಾತ್ಮಿಕ ಗುರು ಶ್ರೀ ಸ್ವಾಮಿ ವಿಶ್ವಾಸಾನಂದ್ ಅವರು ಘೋಷಿಸಿದ್ದಾರೆ. SNN ಚಾನೆಲ್ ಆಯೋಜಿಸಿದ್ದ ‘ಅಜ್ಮತ್-ಎ-ಮುಸ್ತಫಾ (PBUH)’ ಎಂಬ ಆನ್‌ಲೈನ್ ಅಂತರ್ಧರ್ಮೀಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ​ಈ ಸಮ್ಮೇಳನದಲ್ಲಿ ವಿವಿಧ ಧರ್ಮಗಳ ಪಂಡಿತರು ಮತ್ತು ಬುದ್ಧಿಜೀವಿಗಳು ಪ್ರವಾದಿ ಮುಹಮ್ಮದ್ (PBUH) ಅವರ ಜೀವನ ಮತ್ತು ಸಂದೇಶದ ಬಗ್ಗೆ ಚರ್ಚಿಸಿದರು. ಪ್ರವಾದಿ ಮುಹಮ್ಮದ್ ‘ಶಾಂತಿಯ ದೂತ’ …

Read More »

ಕ್ರೈಸ್ತರ ಸುರಕ್ಷತೆಗೆ ಖಲೀಫಾ ಉಮರ್ ನೀಡಿದ ಒಡಂಬಡಿಕೆಯ ಪ್ರತಿಯನ್ನು ಎರ್ಡೊಗನ್‌ಗೆ ಸಮರ್ಪಣೆ ಮಾಡಿದ ಗ್ರೀಕ್ ಆರ್ಥೊಡಾಕ್ಸ್ ಪಿತಾಮಹ

ಇಸ್ತಾನ್‌ಬುಲ್: 638ರಲ್ಲಿ ಖಲೀಫಾ ಹಜರತ್ ಉಮರ್ ಜೆರುಸಲೆಮ್ ವಶಪಡಿಸಿಕೊಂಡ ಬಳಿಕ ಹೊರಡಿಸಿದ ಐತಿಹಾಸಿಕ ಒಡಂಬಡಿಕೆಯ ನಕಲು ಪ್ರತಿಯನ್ನು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರಿಗೆ ಜೆರುಸಲೆಮ್‌ನ ಗ್ರೀಕ್ ಆರ್ಥೊಡಾಕ್ಸ್ ಪಿತಾಮಹ ಥಿಯೋಫಿಲೋಸ್ ಜಿಯಾನೊಪೌಲೋಸ್ ಸಮರ್ಪಿಸಿದರು. ಟರ್ಕಿಯ ಡೊಲ್ಮಾಬಾಹ್ಸ್ ಅರಮನೆಯಲ್ಲಿ ಈ ಸಮರ್ಪಣೆ ಕಾರ್ಯಕ್ರಮ ನಡೆದಿದ್ದು, ಕ್ರಿಶ್ಚಿಯನ್ ಸಮುದಾಯದ ಹಕ್ಕುಗಳು ಮತ್ತು ಸುರಕ್ಷತೆಯನ್ನು ಖಾತರಿಪಡಿಸಿದ ಆ ಒಡಂಬಡಿಕೆಯನ್ನು ಇಸ್ಲಾಮಿಕ್ ಇತಿಹಾಸದಲ್ಲಿ ಧಾರ್ಮಿಕ ಸಹಬಾಳ್ವೆಯ ಪ್ರಮುಖ ದಾಖಲೆ ಎಂದು ಇತಿಹಾಸಕಾರರು ವಿವರಿಸಿದ್ದಾರೆ. ಅಂತರ್ಧರ್ಮೀಯ …

Read More »

ಭಾರತೀಯರು ಅಧ್ಯಯನಕ್ಕೆ ಒಳಪಡಿಸಬೇಕಾದ ವ್ಯಕ್ತಿತ್ವ; ಪ್ರವಾದಿ ಮುಹಮ್ಮದ್(ಸ)

✍️ ಏ.ಕೆ.ಕುಕ್ಕಿಲ ಒಂದೇ ಒಂದು ಚಿತ್ರ ಇಲ್ಲದ, ಒಂದೇ ಒಂದು ಪುತ್ಥಳಿ ಇಲ್ಲದ ಮತ್ತು ಕನಿಷ್ಠ ಕಲಾಕಾರರ ಕುಂಚದಲ್ಲೂ ಮೂಡಿಬರದ ಪ್ರವಾದಿ ಮುಹಮ್ಮದ್(ಸ) ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸ್ಮರಿಸಲ್ಪಡುವ ವ್ಯಕ್ತಿ ಹೇಗಾದರು? ಮುಹಮ್ಮದ್ ಎಂಬುದು ಜಾಗತಿಕವಾಗಿಯೇ ಅತೀ ಹೆಚ್ಚು ಬಳಕೆಯಲ್ಲಿರುವ ಹೆಸರು ಯಾಕಾಯಿತು? ಆಕಾರವಾಗಿ ಕಣ್ಣೆದುರು ಇಲ್ಲದ ವ್ಯಕ್ತಿಗೆ ಇವತ್ತು 200 ಕೋಟಿ ಅನುಯಾಯಿಗಳು ಹೇಗೆ ಸಿಕ್ಕರು? ಜಗತ್ತಿನ ಒಟ್ಟು ಜನಸಂಖ್ಯೆಯ 24%ದಷ್ಟು ಬೃಹತ್ ಜನಸಮೂಹ ಅವರ ಅನುಯಾಯಿಯಾಗಿರುವುದರ ಗುಟ್ಟೇನು? …

Read More »

ನನ್ನ ಪ್ರವಾದಿ(ಸ ) ಹೀಗೆ ಹೇಳಿದ್ದರು:

ನನ್ನ ಪ್ರವಾದಿ(ಸ ) ಹೀಗೆ ಹೇಳಿದ್ದರು: 1. ಹೆತ್ತವರಿಗೆ ಛೆ ಎಂದೂ ಹೇಳಬಾರದು. ಹೆತ್ತವರ ದುಃಖಕ್ಕೆ ಕಾರಣವಾಗುವ ಮಕ್ಕಳು ಸ್ವರ್ಗ ಪ್ರವೇಶಿಸುವುದಿಲ್ಲ. 2. ಯಾವ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಲಾಲಿಸಿ ಪೋಷಿಸಿ ಸದಾಚಾರದಿಂದ ಬೆಳೆಸುತ್ತಾರೋ ಅವರಿಗೆ ಸ್ವರ್ಗವಿದೆ. 3. ಪತ್ನಿ ಗಾಜಿನಂತೆ. ಆಕೆಯೊಂದಿಗೆ ಒರಟಾಗಿ ನಡೆದುಕೊಳ್ಳಬೇಡಿ. 4. ಅನಾಥ ಮಗುವಿನ ಮುಂದೆ ನಿಮ್ಮ ಮಕ್ಕಳನ್ನ ಮುದ್ದಿಸಬೇಡಿ. 5. ಮಧ್ಯಪಾನ ಸಹಿತ ಎಲ್ಲ ಅಮಲು ಪದಾರ್ಥಗಳೂ ನಿಷಿದ್ಧವಾಗಿದೆ. 6. ಬಡ್ಡಿ …

Read More »

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

✍️ ಏ.ಕೆ.ಕುಕ್ಕಿಲ ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ, ಮಕ್ಕಾದಲ್ಲಿ ಬುಡಕಟ್ಟು ಆಧಾರಿತವಾಗಿ ವಿಂಗಡಿಸುತ್ತಿದ್ದರು. ಪ್ರವಾದಿ ಮುಹಮ್ಮದ್ ಜನಿಸಿದ್ದು ಕುರೈಶ್ ಬುಡಕಟ್ಟಿನಲ್ಲಿ. ಆ ಕಾಲದಲ್ಲಿ ಅದು ಪ್ರಭಾವಿ ಮತ್ತು ಸರ್ವಮಾನ್ಯ ಬುಡಕಟ್ಟಾಗಿತ್ತು. ಆದರೆ ಪ್ರವಾದಿ ಮುಹಮ್ಮದರು ಈ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ನಿರ್ಧರಿಸಿದರು. ಮನುಷ್ಯರೆಲ್ಲ ಆದಮ್ ಮತ್ತು ಹವ್ವಾ ಎಂಬ ಒಂದೇ ತಂದೆ ತಾಯಿಯ ಮಕ್ಕಳು ಎಂದು ಘೋಷಿಸಿದರು. …

Read More »

ಬದುಕಿನ ಎಲ್ಲ ರಂಗಗಳ ಮಾದರಿ ಶಿಕ್ಷಕ ಪ್ರವಾದಿ ಮುಹಮ್ಮದ್ (ಸ)

✍️ ಸಲೀಮ್ ಬೋಳಂಗಡಿ ಪ್ರವಾದಿ ಮುಹಮ್ಮದರು(ಸ )ಬದುಕಿನ ಎಲ್ಲ ರಂಗಗಳಲ್ಲಿ ಮಾದರಿಯಾಗಿದ್ದರು. ಸತ್ಯ ನ್ಯಾಯ ಸಮಾನತೆ ಅವರ ಸಂದೇಶದ ಸಾರವಾಗಿತ್ತು. ಅವರು ಯಾವುದನ್ನು ಜನರಿಗೆ ಸಾರುತ್ತಿದ್ದರು ಅದನ್ನು ಸ್ವತಹ ಅನುಸರಿಸಿ ತೋರುತ್ತಿದ್ದರು ಅದು ಜನರ ಮೇಲೆ ಅವರ ಸಂದೇಶ ಪ್ರಭಾವ ಬೀರಲು ಕಾರಣವಾಗಿದೆ. ಅಜ್ಞಾನ ಕಾಲದ ಅಂದಿನ ಅರಬ್ ಸಮಾಜವು ಮೂಡನಂಬಿಕೆ ಕಂದಾಚಾರ ಮುಂತಾದ ಎಲ್ಲ ರೀತಿಯ ಅನಾಚಾರ ಅಂಧಕಾರಗಳಿಂದ ತುಂಬಿತ್ತು. ಆ ಸಮಾಜದಲ್ಲಿ ಹೆಣ್ಣನ್ನು ತುಂಬಾ ಕೀಳಾಗಿ ಕಾಣಲಾಗುತ್ತಿತ್ತು. …

Read More »

ರಿಸಾಲತ್ (ಪ್ರವಾದಿತ್ವ) ಮತ್ತು ಅದರ ಮಹತ್ವ

ರಿಸಾಲತ್ ಅಥವಾ ಸಂದೇಶವಾಹಕತ್ವವು ಮಾನವರಿಗೆ ಅತಿ ಮಹತ್ವದ ವಿಚಾರವಾಗಿದೆ. ಆದರೆ ಸಾಮಾನ್ಯವಾಗಿ ಅದಕ್ಕೆ ಮಾನವರಿಂದ ಸಿಗಬೇಕಾದ ಮಹತ್ವವು ದೊರಕಿಲ್ಲ. ಮಾನವರಿಗೆ ದೊರಕಿದ ದೇವನ ಅನುಗ್ರಹ ಮತ್ತು ದಯೆ ಎಂದು ಪ್ರವಾದಿತ್ವವನ್ನು ಪವಿತ್ರ ಕುರ್‌ಆನ್ ವಿವರಿಸಿದೆ. (ಪವಿತ್ರ ಕುರ್‌ಆನ್, 6:158, 7:52, 11:17, 28: 16:89) ಭೂಮಿಯಲ್ಲಿ ಪ್ರಾಣಿಗಳಿಗೂ ಆಹಾರ ಮತ್ತು ವಾಸ್ತವ್ಯದ ಸೌಕರ್ಯಗಳು ಇವೆ. ಆದರೆ ದೇವನು ನೇರವಾಗಿ ಸಂಬೋಧಿಸಿರುವ ಜೀವಿ ಮಾನವನಾಗಿದ್ದಾನೆ. ದೇವಾನುಗ್ರಹಗಳನ್ನು ಗುರುತಿಸುವುದು ಮತ್ತು ಅದರ ಪ್ರಯೋಜನ …

Read More »