“ಕೋಮು ಪಕ್ಷಪಾತದ ಕಡೆಗೆ ಕರೆ ನೀಡುವವನು ನಮ್ಮವನಲ್ಲ. ಕೋಮು ಭಾವನೆಯೊಂದಿಗೆ ಯುದ್ಧ ಮಾಡುವವನೂ ನಮ್ಮವನಲ್ಲ. ಕೋಮು ಪಕ್ಷಪಾತದೊಂದಿಗೆ ಸಾಯುವವನೂ ನಮ್ಮವನಲ್ಲ.”
(ಜುಬೈರ್ ಬಿನ್ ಮುತ್‌ಇಮ್(ರ)-ಅಬೂ ದಾವೂದ್)
ನಾನು ಪ್ರವಾದಿ(ಸ)ರವರಲ್ಲಿ ಕೇಳಿದೆ, ನನ್ನವರನ್ನು ಪ್ರೀತಿಸುವುದು ಕೋಮು ಪಕ್ಷಪಾತವೇ? ಪ್ರವಾದಿ(ಸ) ಹೇಳಿದರು- “ಅಲ್ಲ, ಅದು ಪಕ್ಷಪಾತವಲ್ಲ. ಒಬ್ಬನು ತನ್ನವರಿಗೆ ಅವರ ಅಕ್ರಮ ಕಾರ್ಯಗಳಲ್ಲೂ ನೆರವಾಗುವುದು ಕೋಮು ಪಕ್ಷಪಾತವಾಗಿದೆ.” (ಅಬೂ ಫಸೀಲ(ರ)-ಮಿಶ್ಕಾತ್)
“ಮಿಥ್ಯ ಮತ್ತು ನಿಷಿದ್ಧ ಕಾರ್ಯಗಳಲ್ಲಿ ತಮ್ಮ ಗೋತ್ರ (ಕುಲ, ಕುಟುಂಬ, ಜನಾಂಗ)ವನ್ನು ಬೆಂಬಲಿಸುವವನ ಉದಾಹರಣೆಯು, ಬಾವಿಗೆ ಬೀಳುವ ಒಂಟೆಯ ಬಾಲ ಹಿಡಿದವನಂತಿದೆ. ಒಂಟೆಯೊಂದಿಗೆ ಅವನೂ ಬಾವಿಯಲ್ಲಿ ಬೀಳುತ್ತಾ.” (ಇಬ್ನು ಮಸ್‌ವೂದ್(ರ)-ಅಬೂ ದಾವುದ್)
IslamKannada News Portal
