ಅಬ್ದುಲ್ಲಾ ಬಿನ್ ಅಮ್ರ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಯಾರಲ್ಲಿ ನಾಲ್ಕು ವಿಷಯಗಳಿರುತ್ತವೋ ಆತ ಅಪ್ಪಟ ಮುನಾಫಿಕ್ (ಕಪಟ ವಿಶ್ವಾಸಿ) ಆಗಿರುತ್ತಾನೆ. ಯಾರಲ್ಲಿ ಯಾವುದಾದರೂ ಒಂದು ವಿಷಯವಿರವುದೋ ಅವನಲ್ಲಿ ಕಪಟ ವಿಶ್ವಾಸದ ಒಂದಂಶವಿರುವುದು – ಅವನು ಅದನ್ನು ತೊರೆಯುವ ತನಕ.
1. ವಸ್ತು ಜೋಪಾನವಾಗಿಡಲು ಕೊಟ್ಟರೆ ವಂಚನೆ ಮಾಡುವುದು.
2. ಮಾತನಾಡಿದರೆ ಸುಳ್ಳು ಹೇಳುವುದು.
3. ವಚನ ಕೊಟ್ಟರೆ ಭಂಗ ಮಾಡುವುದು.
4. ಜಗಳಾಡಿದರೆ ಬಯ್ಯುವುದು. (ಮುತ್ತಫಕುನ್ ಅಲೈಹಿ)
Check Also
ಪ್ರಾಥ೯ನೆ, ಸತ್ಕಮ೯
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …
IslamKannada News Portal
