ಒಮ್ಮೆ ಓರ್ವ ವ್ಯಕ್ತಿ ಪ್ರವಾದಿವರ್ಯರೊಡನೆ(ಸ), “ಅಲ್ಲಾಹನ ಸಂದೇಶವಾಹಕರೇ! ನನ್ನ ಬಂಧುಗಳ ಪೈಕಿ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರಾಗಿರುವವರು ಯಾರು?”ಎಂದು ವಿಚಾರಿಸಿದನು. ಅದಕ್ಕುತ್ತರವಾಗಿ ಪ್ರವಾದಿ(ಸ) ಹೇಳಿದರು: “ನಿನ್ನ ತಾಯಿ.” “ಆ ಬಳಿಕ ಯಾರು?” ಎಂದು ಆ ವ್ಯಕ್ತಿ ಕೇಳಿದನು. “ನಿನ್ನ ತಾಯಿ” ಎಂದು ಪ್ರವಾದಿ(ಸ) ಉತ್ತರಿಸಿದರು. “ಆ ಬಳಿಕ ಯಾರು?” ಎಂದು ಅವನು ವಿಚಾರಿಸಿದನು. “ನಿನ್ನ ತಾಯಿ” ಎಂದು ಪ್ರವಾದಿ(ಸ) ಹೇಳಿದರು. “ಆ ಬಳಿಕ ಯಾರು?” ಎಂದು ಆ ವ್ಯಕ್ತಿ ಮತ್ತೆ ಕೇಳಿದಾಗ ಪ್ರವಾದಿ(ಸ) ಹೇಳಿದರು: “ನಿನ್ನ ತಂದೆ.” (ಬುಖಾರಿ, ಮುಸ್ಲಿಮ್ ವರದಿ-ಅಬೂ ಹುರೈರಾ(ರ))
IslamKannada News Portal
