Home / ಪ್ರಶ್ನೋತ್ತರ / ವಾರೀಸಿನಲ್ಲಿ ಸ್ತ್ರೀಗೆ ಪುರುಷರಿಗಿಂತ ಅಧಿಕ ಪಾಲು ಸಿಗುವ ಸಂದರ್ಭಗಳಿವೆಯೇ?

ವಾರೀಸಿನಲ್ಲಿ ಸ್ತ್ರೀಗೆ ಪುರುಷರಿಗಿಂತ ಅಧಿಕ ಪಾಲು ಸಿಗುವ ಸಂದರ್ಭಗಳಿವೆಯೇ?

ಪ್ರಶ್ನೆ: ವಾರಸುಸೊತ್ತು ವಿತರಣೆಯಲ್ಲಿ ಮಹಿಳೆಯು ತನ್ನದೇ ಸ್ಥಾನಮಾನದ ಪುರುಷನಿಗಿಂತ ಅಧಿಕ ಪಾಲು ಪಡೆಯುವಂತಹ ಸನ್ನಿವೇಶವಿರಬಹುದೇ? ತಿಳಿಸಿ.

ಉತ್ತರ: ಇಸ್ಲಾಮೀ ವಾರೀಸು ನಿಯಮದಲ್ಲಿ ಎಲ್ಲ ಅವಸ್ಥೆಯಲ್ಲೂ ಸ್ತ್ರೀಗೆ ಪುರುಷನಿಗಿಂತ ಕಡಿಮೆ ಪಾಲು ಸಿಗುತ್ತದೆ ಎಂಬ ಆರೋಪವಿದೆ.  ಆದರೆ ಅದು ಸರಿಯಲ್ಲ. ಕೆಲವೊಮ್ಮೆ ಅವರಿಬ್ಬರಿಗೂ ಸಮಪಾಲು ದೊರೆಯುತ್ತದೆ. ಇನ್ನು ಕೆಲವೊಮ್ಮೆ ಸ್ತ್ರೀಗೆ ಪುರುಷನಿಗಿಂತಲೂ ಅಧಿಕ ಪಾಲು ದೊರೆಯುತ್ತದೆ. ಹಂಚುವಿಕೆಯ ಈ ಕ್ರಮವು ಯುಕ್ತಿ ಆಧಾರಿತವಾಗಿದೆ.

ಸ್ತ್ರೀ ಮತ್ತು ಪುರುಷನಿಗೆ ಸಮಪಾಲು ದೊರೆಯುವ ಕೆಲವು ರೂಪಗಳು:
1) ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನಿಗೆ ಮಕ್ಕಳೂ ತಂದೆ-ತಾಯಿಗಳೂ ಇದ್ದರೆ ತಂದೆಗೂ ತಾಯಿಗೂ ತಲಾ ಆರನೆಯ ಒಂದಂಶ (1/6) ಸಿಗುವುದು.
2) ಓರ್ವ ಮಹಿಳೆ ಮಕ್ಕಳಿಲ್ಲದವಳಾಗಿದ್ದು ಅವಳ ಉತ್ತರಾಧಿಕಾರಿಗಳಾಗಿ ಆಕೆಯ ಪತಿ ಮತ್ತು ಓರ್ವ ಸಹೋದರಿ ಇದ್ದರೆ ಇಬ್ಬರಿಗೂ ಅರ್ಧ ಪಾಲು ಸಿಗುವುದು.  ಕೇವಲ ಲಿಂಗಾ ಧಾರಿತವಾಗಿ ಮಹಿಳೆ(ಸಹೋದರಿ)ಗೆ ಕಡಿಮೆ ಮತ್ತು ಪುರುಷ(ಪತಿ)ನಿಗೆ ಹೆಚ್ಚು ಸಿಗಲಾರದು. ಇಬ್ಬರಿಗೂ ಸಮಪಾಲು ನೀಡಲಾಗುವುದು.
3) ಮರಣ ಹೊಂದಿದ ವ್ಯಕ್ತಿಯೊಬ್ಬನಿಗೆ ಉತ್ತರಾಧಿಕಾರಿಯಾಗಿ ಕೇವಲ ಒಬ್ಬ ಮಗ ಅಥವಾ ಮಗಳು ಇದ್ದರೆ, ಸಂಪೂರ್ಣ ಸೊತ್ತಿನ ಹಕ್ಕುದಾರನಾಗುವನು/ಳು. ಅದೇ ರೀತಿ ಕೇವಲ ಒಬ್ಬಳು ಪುತ್ರಿ ಇದ್ದರೆ ಅವಳಿಗೂ ಸಂಪೂರ್ಣ ಸೊತ್ತು ಸೇರುವುದು.  ಹೇಗೆಂದರೆ ಅರ್ಧಪಾಲು (1/2) ಆಕೆಯ ನಿಶ್ಚಿತ ಹಕ್ಕು. ಉಳಿದರ್ಧ ಆಕೆ `ರದ್ದ್’ ನದ್ದು ಸಿಗುವುದು. ಇದರಲ್ಲಿ ಪುರುಷನೂ ಮಹಿಳೆಯೂ ಸಮಾನರಾಗುತ್ತಾರೆ.
4) ಕೆಲವು ಸ್ಥಿತಿಗಳಲ್ಲಿ ಖಾಸಾ ಸಹೋದರ ಮತ್ತು ಸಹೋದರಿಗೆ ಸಮಪಾಲು ದೊರೆಯುವುದು. ಉದಾ:  ಓರ್ವ ಮಹಿಳೆ ಪತಿ ಮತ್ತು ಓರ್ವ ಸಹೋದರನನ್ನು ಅಗಲಿ ಹೋದರೆ ಉತ್ತರಾಧಿಕಾರದಲ್ಲಿ ಪತಿಗೆ ಅರ್ಧಪಾಲು ಮತ್ತು ಸಹೋದರನಿಗೆ  ಅರ್ಧಪಾಲು ಸಿಗುವುದು. ಅದೇ ರೀತಿ ಆಕೆ ಪತಿ ಮತ್ತು ಖಾಸಾ ಸಹೋದರಿಯನ್ನು ಬಿಟ್ಟಗಲಿದರೆ ಪತಿಗೆ ಅರ್ಧ ಮತ್ತು ಖಾಸಾ ಸಹೋದರಿಗೆ ಅರ್ಧಪಾಲು ಸಿಗುವುದು. ಹೀಗೆ ಪುರುಷ ಮತ್ತು ಸ್ತ್ರೀಗೆ ಸಮಪಾಲು ದೊರೆದಂತಾಯಿತು.ವಾರೀಸು ನಿಯಮದಲ್ಲಿ ಇನ್ನೂ ಅನೇಕ ರೂಪಗಳಿದ್ದು ಅದರಲ್ಲಿ ಸ್ತ್ರೀಗೆ ಪುರುಷನಿಗಿಂತ ಅಧಿಕಪಾಲು ದೊರೆಯುವುದು. ಉದಾ: ಒಬ್ಬನ  ಉತ್ತರಾಧಿಕಾರಿಗಳಾಗಿ ತಾಯಿ, ತಂದೆ ಮತ್ತು ಓರ್ವ ಮಗಳಿದ್ದರೆ, ತಾಯಿಗೆ ಆರನೆಯ ಒಂದಂಶ(1/6) ತಂದೆಗೆ ಮೂರನೆಯ ಒಂದಂಶ (1/3) ಸಿಗುವುದು. ಮಗಳಿಗೆ ಅರ್ಧಪಾಲು ದೊರೆಯುವುದು. ಅಂದರೆ ಪುರುಷ(ತಂದೆ) ನಿಗಿಂತ ಅಧಿಕ ಪಾಲು ಮಗಳು ಪಡೆಯುವಳು.ಮಹಿಳೆ ಪುರುಷನಿಗಿಂತ ಹೆಚ್ಚು ಪಾಲು ಪಡೆಯುವ ಇನ್ನೂ ಅನೇಕ ರೂಪಗಳಿವೆ. ಹೆಚ್ಚಿನ ವಿವರಗಳನ್ನು `ಇಸ್ಲಾಮಿನಲ್ಲಿ ವಾರೀಸು ನಿಯಮಗಳು’ ಎಂಬ ಕೃತಿಯಲ್ಲಿ ಅದನ್ನು ನೋಡಬಹುದು.

 

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …