Home / ಪ್ರವಾದಿ ವಚನಗಳು (page 7)

ಪ್ರವಾದಿ ವಚನಗಳು

ಸ್ವರ್ಗದ ಗಂಧ

“ಸಂರಕ್ಷಣೆಯ ವಾಗ್ದಾನ ನೀಡಲಾಗಿರುವ ಒರ್ವ ಮುಸ್ಲಿಮೇತರನನ್ನು ಕೊಂದವನು, ಸ್ವರ್ಗದ ಗಂಧವನ್ನೂ ಅನುಭವಿಸಲಾರನು. ವಸುತಃ ಅದು 40 ವರ್ಷಗಳಷ್ಟು ದೂರ ತಲುಪುತ್ತದೆ.” (ಇಬ್ನು ಉಮರ್(ರ)-ಬುಖಾರಿ)

Read More »

ಅಕ್ರಮ

“ಒಬ್ಬನು ಯಾರದಾದರೂ ಗೇಣಗಲದಷ್ಟು ಭೂಮಿಯನ್ನು ಅಕ್ರಮವಾಗಿ ಕಬಳಿಸಿಕೊಂಡರೆ, ಕಿಯಾಮತ್‌ನಂದು ಏಳು ಭೂಮಿಗಳ ಉರುಳನ್ನು ಅವನ ಕೊರಳಿಗೆ ಹಾಕಲಾಗುವುದು.(ಸ‌ಈದ್ ಬಿನ್ ಝೈದ್(ರ)-ಬುಖಾರಿ,ಮುಸ್ಲಿಮ್)

Read More »

ಸಹೋದರರು

ಪ್ರವಾದಿವರ್ಯರು(ಸ)ರು, “ಎಲ್ಲ ಮಾನವರೂ ಪರಸ್ಪರ ಸಹೋದರರೆಂದು ಸಾಕ್ಷ್ಯ ನುಡಿದಿದ್ದಾರೆ, ಕೇವಲ ಮುಸ್ಲಿಮರಲ್ಲ.” (ಅಬೂ ದಾವೂದ್)

Read More »

ಬಡ್ಡಿ

ಪ್ರವಾದಿ(ಸ)ರು ಬಡ್ಡಿ ತಿನ್ನುವವನನ್ನೂ, ಬಡ್ಡಿ ತಿನ್ನಿಸುವವನನ್ನೂ, ಬಡ್ಡಿಗೆ ಸಾಕ್ಷಿ ನಿಲ್ಲುವ ಇಬ್ಬರನ್ನೂ ಮತ್ತು ಬಡ್ಡಿಯ ದಾಖಲೆ ಪತ್ರ ಬರೆಯುವವನನ್ನೂ ಶಪಿಸಿದ್ದಾರೆ. (ಅಬ್ದುಲ್ಲಾ ಬಿನ್ ಮಸ್‌ವೂದ್(ರ)- ಬುಖಾರಿ, ಮುಸ್ಲಿಮ್)

Read More »

ಕೋಮು ಪಕ್ಷಪಾತ

“ಕೋಮು ಪಕ್ಷಪಾತದ ಕಡೆಗೆ ಕರೆ ನೀಡುವವನು ನಮ್ಮವನಲ್ಲ. ಕೋಮು ಭಾವನೆಯೊಂದಿಗೆ ಯುದ್ಧ ಮಾಡುವವನೂ ನಮ್ಮವನಲ್ಲ. ಕೋಮು ಪಕ್ಷಪಾತದೊಂದಿಗೆ ಸಾಯುವವನೂ ನಮ್ಮವನಲ್ಲ.” (ಜುಬೈರ್ ಬಿನ್ ಮುತ್‌ಇಮ್(ರ)-ಅಬೂ ದಾವೂದ್) ನಾನು ಪ್ರವಾದಿ(ಸ)ರವರಲ್ಲಿ ಕೇಳಿದೆ, ನನ್ನವರನ್ನು ಪ್ರೀತಿಸುವುದು ಕೋಮು ಪಕ್ಷಪಾತವೇ? ಪ್ರವಾದಿ(ಸ) ಹೇಳಿದರು- “ಅಲ್ಲ, ಅದು ಪಕ್ಷಪಾತವಲ್ಲ. ಒಬ್ಬನು ತನ್ನವರಿಗೆ ಅವರ ಅಕ್ರಮ ಕಾರ್ಯಗಳಲ್ಲೂ ನೆರವಾಗುವುದು ಕೋಮು ಪಕ್ಷಪಾತವಾಗಿದೆ.” (ಅಬೂ ಫಸೀಲ(ರ)-ಮಿಶ್ಕಾತ್) “ಮಿಥ್ಯ ಮತ್ತು ನಿಷಿದ್ಧ ಕಾರ್ಯಗಳಲ್ಲಿ ತಮ್ಮ ಗೋತ್ರ (ಕುಲ, ಕುಟುಂಬ, ಜನಾಂಗ)ವನ್ನು …

Read More »

ಅಕ್ರಮಿ

“ಅಕ್ರಮಿಯನ್ನು ನೋಡಿಯೂ ಜನರು ಅವನನ್ನು ತಡೆಯದಿದ್ದರೆ, ಅಲ್ಲಾಹನು ಅವರನ್ನು ಒಟ್ಟಿಗೆ ಶಿಕ್ಷಿಸುವನು.” (ಅಬೂ ದಾವೂದ್)      

Read More »

ಶ್ರೀಮಂತಿಕೆ

“ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ.” (ಹ. ಅಬೂಹುರೈರಾ(ರ)-ಬುಖಾರಿ, ಮುಸ್ಲಿಂ.)

Read More »

ಕರುಣೆ

“ಯಾರು ಜನರ ಮೇಲೆ ಕರುಣೆ ತೋರುವುದಿಲ್ಲವೋ ಅವರ ಮೇಲೆ ಅಲ್ಲಾಹನು ಕರುಣೆ ತೋರುವುದಿಲ್ಲ.” (ಅಬ್ದುಲ್ಲಾ ಬಿನ್ ಅಮ್ರ್(ರ)-ಅಬೂದಾವೂದ್, ತಿರ್ಮಿದಿ))

Read More »