Home / ಪ್ರವಾದಿ ವಚನಗಳು (page 6)

ಪ್ರವಾದಿ ವಚನಗಳು

ಅಲ್ಲಾಹನ ಸಹಾಯಕ್ಕೆ ಅರ್ಹರು

ಅನುವಾದ: ಮದೀನಾದ ವ್ಯಕ್ತಿಯೊಬ್ಬರು ಹೇಳುತ್ತಾರೆ, ಹ.ಮುಆವಿಯಾ (ರ) ರವರು ಆಯಿಷಾ (ರ) ರಿಗೆ ಪತ್ರ ಬರೆದು, ಸಾಧ್ಯವಾದಷ್ಟು ಸಂಕ್ಷಿಪ್ತ ಪದಗಳಲ್ಲಿ ಉಪದೇಶ ಮಾಡುವಂತೆ ಕೋರುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆಯಿಷಾ ಪತ್ರ ಬರೆಯುತ್ತಾರೆ. ನಿಮ್ಮ ಮೇಲೆ ಅಲ್ಲಾಹನ ಶಾಂತಿ ರಕ್ಷಣೆ ಇರಲಿ. ಅಲ್ಲಾಹನ ಪ್ರವಾದಿ (ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ, “ಯಾರು ಅಲ್ಲಾಹನ ಸಂತೃಪ್ತಿ ಪಡೆಯಲು ಬಯಸುತ್ತಾರೆ ಮತ್ತು ಅದಕ್ಕಾಗಿ ಜನರ ಅಸಮಾಧಾನದ ಚಿಂತೆ ಮಾಡುವುದಿಲ್ಲ, ಅಂತಹ ಜನರಿಗೆ ಅಲ್ಲಾಹನು …

Read More »

ಇಂತಹ ಬಿಕ್ಕಟ್ಟು ಈ ಸಮುದಾಯದ ಮೇಲೆ ಯಾವಾಗ ಬರುತ್ತದೆ?

ಅನುವಾದ : ಹ. ಅಬ್ದುಲ್ಲಾ ಬಿನ್ ಮಸ್ ಊದ್ ರಿಂದ ವರದಿಯಾಗಿದೆ. ಪ್ರವಾದಿ ಸ ಹೇಳಿದರು, “ಹೇ ಜನರೇ, ನಿಮ್ಮ ಮೇಲೆ ಆ ಕ್ಷೋಭೆ ಹೇರಲ್ಪಡುವಾಗ, ಅದರಲ್ಲಿ ನಿಮ್ಮ ಚಿಕ್ಕ ಮಕ್ಕಳು(ಯುವಕರು) ಬೆಳೆಯುತ್ತಾರೆ ಮತ್ತು ನಿಮ್ಮ ಹಿರಿಯರು ತಮ್ಮ ವೃದ್ಧಾಪ್ಯದ ಅಂತ್ಯವನ್ನು ತಲುಪುತ್ತಾರೆ ಮತ್ತು ಕ್ಷೋಭೆಯನ್ನು(ದಾರಿಗೇಡಿತನವನ್ನು) ಸುನ್ನತ್(ಚರ್ಯೆ) ಎಂದು ಪರಿಗಣಿಸಲಾಗುವಾಗ ನಿಮ್ಮ ಅವಸ್ಥೆ ಏನಾಗಿರಬಹುದು? ಆಗ ಯಾವುದಾದರೂ ವ್ಯಕ್ತಿ ಈ ಫಿತ್ನದ (ಕ್ಷೋಭೆ/ಈ ನಾವೀನ್ಯತೆ ) ವಿರುದ್ಧ ಹೋರಾಡಲು ಎದ್ದರೆ, …

Read More »

ತೋರಿಕೆ ಶಿರ್ಕ್ ಆಗಿದೆ

ಅನುವಾದ: ಉಮರ್ ಬಿನ್ ಖಾತ್ತಾಬ್ ರಿಂದ ವರದಿ. ಒಮ್ಮೆ ಅವರು ಮನೆಯಿಂದ ಹೊರಟು ಮಸ್ಜಿದುನ್ನಬವಿ ತಲುಪಿದರು. ಅಲ್ಲಿ ಮುಆದ್ ಬಿನ್ ಜಬಲ್ (ರ) ಅಲ್ಲಾಹನ ಪ್ರವಾದಿಯ(ಸ) ಘೋರಿ ಬಳಿ ಕೂತು ಅಳುತ್ತಿದ್ದುದನ್ನು ಕಂಡರು. ಯಾಕೆ ಅಳುತ್ತಿದ್ದೀರಿ ಎಂದು ಕೇಳಿದರು. ಮುಆದ್ ಬಿನ್ ಜಬಲ್ ಹೇಳಿದರು, ನಾನು ಅಲ್ಲಾಹನ ಪ್ರವಾದಿಯಿಂದ (ಸ) ಒಂದು ವಿಷಯವನ್ನು ಕೇಳಿದ್ದೇನೆ. ಅದೇ ಮಾತು ನನ್ನನ್ನು ಅಳುವಂತೆ ಮಾಡಿದೆ. ಮತ್ತೆ ಅವರು ಹೇಳಿದರು, “ಸಣ್ಣ ಮಟ್ಟದ ತೋರಿಕೆಯೂ …

Read More »

ಭೌತಿಕವಾದಿ ವಿದ್ವಾಂಸರ ದುಷ್ಪರಿಣಾಮ ಹೇಗಿರುತ್ತೆ ನೋಡಿ

ಅನುವಾದ: ಹ.ಇಬ್ನ್ ಅಬ್ಬಾಸ್ ರಿಂದ ವರದಿಯಾಗಿದೆ, ಅಲ್ಲಾಹನ ಪ್ರವಾದಿ (ಸ) ಹೇಳಿದರು, “ಒಬ್ಬ ವ್ಯಕ್ತಿಗೆ ಅಲ್ಲಾಹನು ತನ್ನ ಧರ್ಮದ ಜ್ಞಾನ ನೀಡಿದ್ದು, ಅವನು ಅಲ್ಲಾಹನ ದಾಸರಿಗೆ ಆ ಜ್ಞಾನವನ್ನು ನೀಡುವಲ್ಲಿ ಜಿಪುಣತೆ ತೋರಿಸಿದನು ಮತ್ತು ಅವನು ಇತರರಿಗೆ ಕಲಿಸಿದರೂ ಅದಕ್ಕಾಗಿ ಹಣ ವಸೂಲಿ ಮಾಡುತ್ತಾನೆ ಮತ್ತು ತನ್ನ ಲೌಕಿಕ ಬದುಕನ್ನು ರೂಪಿಸಿದನು ಅಂತಹ ವ್ಯಕ್ತಿಗೆ ತೀರ್ಪಿನ ದಿನದಂದು ಬೆಂಕಿಯ ಲಗಾಮುಗಳನ್ನು ತೊಡಿಸಲಾಗುವುದು ಮತ್ತು ಘೋಷಣೆ ಕೂಗುವ ಓರ್ವ (ಮಲಾಯಿಕ/ದೇವದೂತ) ಹೀಗೆ …

Read More »

ಉದ್ದೇಶದ ಶುದ್ಧೀಕರಣ ಮತ್ತು ನಮ್ಮ ಕರ್ಮಗಳು

ಅನುವಾದ : ಅಬು ಹುರೈರಾ (ರ) ವರದಿ ಮಾಡಿದ್ದಾರೆ, ಅಲ್ಲಾಹನ ಪ್ರವಾದಿ(ಸ )ಹೇಳಿದರು, ತೀರ್ಪಿನ (ನಿರ್ಣಾಯಕ) ದಿನದಂದು ಮನುಷ್ಯರನ್ನು ಅವರ ಉದ್ದೇಶಕ್ಕನುಗುಣವಾಗಿ ಎದ್ದೇಳಿಸಲಾಗುವುದು. [ಅಲ್-ತರ್ಘೀಬ್ ವಾ ಅಲ್-ತರ್ಹೀಬ್: ಇಬ್ನೆ ಮಾಜಾ) ವಿವರಣಾ ಟಿಪ್ಪಣಿ: ತೀರ್ಪಿನ ದಿನದಂದು, ಅಲ್ಲಾಹನು ಮನುಷ್ಯರ ಬಾಹ್ಯವನ್ನು ಪರಿಗಣಿಸುವುದಿಲ್ಲ, ಬದಲಾಗಿ ಅವರ ಎಲ್ಲಾ ಒಳ್ಳೆಯ ಕಾರ್ಯಗಳಿಗೆ ಅವರ ಉದ್ದೇಶ ಏನಾಗಿತ್ತು ಎಂಬುದನ್ನು ಪರಿಗಣಿಸಲಾಗುತ್ತದೆ. ಕರ್ಮಗಳ ವಿಷಯದಲ್ಲಿ ಅವನ ಹೃದಯದ ಒಲವು ಏನಾಗಿತ್ತು ಮತ್ತು ಅದರ ಆಧಾರದಲ್ಲಿ ಅವನ …

Read More »

ನಾಲ್ಕು ವಿಷಯ

“ನಾಲ್ಕು ವಿಷಯಗಳ ಬಗ್ಗೆ ವಿಚಾರಣೆಗೊಳಪಡುವ ತನಕ ಯಾವ ಮನುಷ್ಯನೂ ಪುನರುತ್ಥಾನದ ದಿವಸದಂದು ಮುಂದೆ ಸಾಗಲಾರ ಅವನ ಆಯುಷ್ಯದ ಕುರಿತು ಅದನ್ನು ಅವನು ಯಾವ ಕೆಲಸದಲ್ಲಿ ಕೊನೆಗೊಳಿಸಿದನೆಂದು. ಅವನ ಕರ್ಮದ ಕುರಿತು, ಅವನು ಏನು ಕರ್ಮ ಮಾಡಿದನೆಂದು ಮತ್ತು ಅವನ ಸಂಪತ್ತಿನ ಕುರಿತು, ಅದನ್ನು ಅವನು ಎಲ್ಲಿಂದ ಸಂಪಾದಿಸಿದ, ಎಲ್ಲಿ ಅದನ್ನು ವ್ಯಯಿಸಿದನೆಂದು. ಮತ್ತು ಅವನ ಶರೀರದ ಕುರಿತು – ಅದನ್ನು ಅವನು ಯಾವ ಕೆಲಸದಲ್ಲಿ ಸವೆಯಿಸಿದನೆಂದು.” (ಅಬೂ ಬರ್ದಾ(ರ)-ತಿರ್ಮಿದಿ)  

Read More »

ಹೆಣ್ಣು ಮಕ್ಕಳು

“ಹೆಣ್ಣು ಮಕ್ಕಳ ಮೂಲಕ ಪರೀಕ್ಷೆಗೊಳಗಾಗಿ, ತರುವಾಯ ಅವರೊಂದಿಗೆ ಸದ್ವರ್ತನೆ ತೋರುವ ವ್ಯಕ್ತಿಯ ಪಾಲಿಗೆ ಆತನ ಹೆಣ್ಣು ಮಕ್ಕಳು ಆತನನ್ನು ನರಕದಿಂದ ರಕ್ಷಿಸುವ ಗುರಾಣಿಗಳಾಗುವರು.” (ಹ. ಆಯಿಶಾ(ರ)-ಮುಸ್ಲಿಮ್)

Read More »

ಸೇವಕರು

“ಸೇವಕರು, ಅಲ್ಲಾಹನು ನಿಮ್ಮ ಅಧೀನಗೊಳಿಸಿರುವ ನಿಮ್ಮ ಸಹೋದರರಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಧೀನವಿರುವ ಸಹೋದರನಿಗೆ ತಾನು ತಿನ್ನುವುದನ್ನೇ ತಿನ್ನಿಸಬೇಕು. ತಾನು ತೊಡುವುದನ್ನೇ ತೊಡಿಸಬೇಕು. ಮತ್ತು (ನೆನಪಿರಲಿ) ಆತನಿಗೆ ಶಕ್ತಿ ಮೀರಿದ ಕೆಲಸವನ್ನು ಕೊಡಬಾರದು; ಒಂದು ವೇಳೆ ಕೊಟ್ಟರೆ ನೀವು ಆತನಿಗೆ ಸಹಾಯ ಮಾಡಲೇಬೇಕು.” (ಅಬೂದರ್ರ್(ರ)-ಬುಖಾರಿ, ಮುಸ್ಲಿಮ್) (ಇಬ್ನು ಉಮರ್(ರ)-ಬುಖಾರಿ)

Read More »