Home / ಪ್ರವಾದಿ ವಚನಗಳು / ಅಲ್ಲಾಹನ ಸಹಾಯಕ್ಕೆ ಅರ್ಹರು

ಅಲ್ಲಾಹನ ಸಹಾಯಕ್ಕೆ ಅರ್ಹರು

ಅನುವಾದ: ಮದೀನಾದ ವ್ಯಕ್ತಿಯೊಬ್ಬರು ಹೇಳುತ್ತಾರೆ, ಹ.ಮುಆವಿಯಾ (ರ) ರವರು ಆಯಿಷಾ (ರ) ರಿಗೆ ಪತ್ರ ಬರೆದು, ಸಾಧ್ಯವಾದಷ್ಟು ಸಂಕ್ಷಿಪ್ತ ಪದಗಳಲ್ಲಿ ಉಪದೇಶ ಮಾಡುವಂತೆ ಕೋರುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆಯಿಷಾ ಪತ್ರ ಬರೆಯುತ್ತಾರೆ. ನಿಮ್ಮ ಮೇಲೆ ಅಲ್ಲಾಹನ ಶಾಂತಿ ರಕ್ಷಣೆ ಇರಲಿ. ಅಲ್ಲಾಹನ ಪ್ರವಾದಿ (ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ, “ಯಾರು ಅಲ್ಲಾಹನ ಸಂತೃಪ್ತಿ ಪಡೆಯಲು ಬಯಸುತ್ತಾರೆ ಮತ್ತು ಅದಕ್ಕಾಗಿ ಜನರ ಅಸಮಾಧಾನದ ಚಿಂತೆ ಮಾಡುವುದಿಲ್ಲ, ಅಂತಹ ಜನರಿಗೆ ಅಲ್ಲಾಹನು ಸಂಪೂರ್ಣ ಸಹಾಯ ಮಾಡುತ್ತಾನೆ. ಮತ್ತು ಜನರ ಅಸಮಾಧಾನದಿಂದ ಅವರಿಗೆ ಯಾವುದೇ ನಷ್ಟ ಸಂಭವಿಸಲು ಬಿಡುವುದಿಲ್ಲ. ಯಾರು ಅಲ್ಲಾಹನನ್ನು ಅಸಂತುಷ್ಟಗೊಳಿಸಿ ಜನರ ಸಂತೋಷ ಬಯಸುತ್ತಾರೆ. ಅವರಿಂದ ಅಲ್ಲಾಹನು ತನ್ನ ಸಹಾಯದ ಹಸ್ತವನ್ನು ಹಿಂದೆ ಸರಿಸುತ್ತಾನೆ ಮತ್ತು ಅವರನ್ನು ಅಲ್ಲಾಹನು ಮನುಷ್ಯರಿಗೆ ಒಪ್ಪಿಸಿ ಬಿಡುತ್ತಾನೆ. ನಿಮ್ಮ ಮೇಲೆ ಅಲ್ಲಾಹನ ಶಾಂತಿ ಇರಲಿ – ತಿರ್ಮಿದಿ

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …