Home / ಪ್ರವಾದಿ ವಚನಗಳು / ಭೌತಿಕವಾದಿ ವಿದ್ವಾಂಸರ ದುಷ್ಪರಿಣಾಮ ಹೇಗಿರುತ್ತೆ ನೋಡಿ

ಭೌತಿಕವಾದಿ ವಿದ್ವಾಂಸರ ದುಷ್ಪರಿಣಾಮ ಹೇಗಿರುತ್ತೆ ನೋಡಿ

ಅನುವಾದ: ಹ.ಇಬ್ನ್ ಅಬ್ಬಾಸ್ ರಿಂದ ವರದಿಯಾಗಿದೆ, ಅಲ್ಲಾಹನ ಪ್ರವಾದಿ (ಸ) ಹೇಳಿದರು, “ಒಬ್ಬ ವ್ಯಕ್ತಿಗೆ ಅಲ್ಲಾಹನು ತನ್ನ ಧರ್ಮದ ಜ್ಞಾನ ನೀಡಿದ್ದು, ಅವನು ಅಲ್ಲಾಹನ ದಾಸರಿಗೆ ಆ ಜ್ಞಾನವನ್ನು ನೀಡುವಲ್ಲಿ ಜಿಪುಣತೆ ತೋರಿಸಿದನು ಮತ್ತು ಅವನು ಇತರರಿಗೆ ಕಲಿಸಿದರೂ ಅದಕ್ಕಾಗಿ ಹಣ ವಸೂಲಿ ಮಾಡುತ್ತಾನೆ ಮತ್ತು ತನ್ನ ಲೌಕಿಕ ಬದುಕನ್ನು ರೂಪಿಸಿದನು ಅಂತಹ ವ್ಯಕ್ತಿಗೆ ತೀರ್ಪಿನ ದಿನದಂದು ಬೆಂಕಿಯ ಲಗಾಮುಗಳನ್ನು ತೊಡಿಸಲಾಗುವುದು ಮತ್ತು ಘೋಷಣೆ ಕೂಗುವ ಓರ್ವ (ಮಲಾಯಿಕ/ದೇವದೂತ) ಹೀಗೆ ಘೋಷಣೆ ಮಾಡುತ್ತಾನೆ,

ಈ ವ್ಯಕ್ತಿ ಯಾರೆಂದರೆ ಈತನಿಗೆ ಅಲ್ಲಾಹನು ತನ್ನ ಧರ್ಮದ ಜ್ಞಾನ ನೀಡಿದ್ದು, ಅವನು ಅಲ್ಲಾಹನ ದಾಸರಿಗೆ ಆ ಜ್ಞಾನವನ್ನು ನೀಡುವಲ್ಲಿ ಜಿಪುಣತೆ ತೋರಿಸಿದನು ಮತ್ತು ಅವನು ಇತರರಿಗೆ ಕಲಿಸಿದರೂ ಅದಕ್ಕಾಗಿ ಹಣ ವಸೂಲಿ ಮಾಡಿದನು ಮತ್ತು ಅದರಿಂದ ತನ್ನ ಲೌಕಿಕ ಬದುಕನ್ನು ರೂಪಿಸಿದನು. ಈ ದೇವದೂತನು ತೀರ್ಪಿನ ದಿನದಂದು ವಿಚಾರಣೆಯ ಅಂತ್ಯದವರೆಗೂ ಈ ಘೋಷಣೆಯನ್ನು ನಿರಂತರವಾಗಿ ಮಾಡುತ್ತಾ ಇರುತ್ತಾನೆ”.
[ಅಲ್-ತರ್ಘೀಬ್ ವಾ ಅಲ್-ತರ್ಹೀಬ್]

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …