ಅನುವಾದ: ಉಮರ್ ಬಿನ್ ಖಾತ್ತಾಬ್ ರಿಂದ ವರದಿ. ಒಮ್ಮೆ ಅವರು ಮನೆಯಿಂದ ಹೊರಟು ಮಸ್ಜಿದುನ್ನಬವಿ ತಲುಪಿದರು. ಅಲ್ಲಿ ಮುಆದ್ ಬಿನ್ ಜಬಲ್ (ರ) ಅಲ್ಲಾಹನ ಪ್ರವಾದಿಯ(ಸ) ಘೋರಿ ಬಳಿ ಕೂತು ಅಳುತ್ತಿದ್ದುದನ್ನು ಕಂಡರು. ಯಾಕೆ ಅಳುತ್ತಿದ್ದೀರಿ ಎಂದು ಕೇಳಿದರು. ಮುಆದ್ ಬಿನ್ ಜಬಲ್ ಹೇಳಿದರು, ನಾನು ಅಲ್ಲಾಹನ ಪ್ರವಾದಿಯಿಂದ (ಸ) ಒಂದು ವಿಷಯವನ್ನು ಕೇಳಿದ್ದೇನೆ. ಅದೇ ಮಾತು ನನ್ನನ್ನು ಅಳುವಂತೆ ಮಾಡಿದೆ. ಮತ್ತೆ ಅವರು ಹೇಳಿದರು, “ಸಣ್ಣ ಮಟ್ಟದ ತೋರಿಕೆಯೂ ಶಿರ್ಕ್ (ಅಲ್ಲಾಹನೊಂದಿಗೆ ಭಾಗೀದಾರಿಕೆ) ಆಗಿದೆ.” – (ಮಿಶ್ಕಾತ್)
ವಿವರಣಾತ್ಮಕ ಟಿಪ್ಪಣಿ: ಮನುಷ್ಯನು ಕೇವಲ ವಿಗ್ರಹದ ಮುಂದೆ ಸಾಷ್ಟಾಂಗ ಎರಗುವುದು ಮತ್ತು ವಿಗ್ರಹದ ಮುಂದೆ ಬಲಿಯರ್ಪಿಸುವುದು ಮಾತ್ರ ಶಿರ್ಕ್ ಅಲ್ಲ. ಬದಲಾಗಿ ಒಬ್ಬ ವ್ಯಕ್ತಿಯು ಇತರರ ಸಂತೋಷಕ್ಕಾಗಿ, ಅಥವಾ ಪ್ರದರ್ಶನಕ್ಕಾಗಿ ಅಥವಾ ಇತರರ ಮುಂದೆ ಒಳ್ಳೆಯವನಂತೆ ತೋರಲು ಮಾಡುವ ದೊಡ್ಡ ದೊಡ್ಡ ಕರ್ಮವೂ ವಾಸ್ತವದಲ್ಲಿ ಶಿರ್ಕ್ ಆಗಿದೆ. ನಿಜವಾಗಿ ಕೃತಜ್ಞತೆಯು ಅಲ್ಲಾಹನ ಹಕ್ಕಾಗಿದೆ. ಅವನು ಆ ಹಕ್ಕನ್ನು ಇತರರಿಗೆ ನೀಡಿದ್ದಾನೆ.
IslamKannada News Portal
