Home / ಪ್ರವಾದಿ ವಚನಗಳು (page 5)

ಪ್ರವಾದಿ ವಚನಗಳು

ದಾನವೆನಿಸುವುದು

ಒಬ್ಬ ವಿಶ್ವಾಸಿಯು ಒಂದು ಗಿಡ ನೆಟ್ಟರೆ ಮತ್ತು ಅದರಿಂದ ಪಕ್ಷಿ, ಮನುಷ್ಯ ಅಥವಾ ಪ್ರಾಣಿ ತಿಂದರೆ ಅದು ಖಂಡಿತವಾಗಿಯೂ ಅವನ ಪಾಲಿನ ದಾನವೆನಿಸುವುದು. -ಪ್ರವಾದಿ ಮುಹಮ್ಮದ್(ಸ)

Read More »

ಗುರುವಿನ ಆದರ

“ಧರ್ಮ ಜ್ಞಾನವನ್ನು ಸಂಪಾದಿಸಿರಿ. ಜ್ಞಾನಕ್ಕಾಗಿ ಘನತೆ ಮತ್ತು ಗಾಂಭೀರ್ಯವನ್ನು ಕಲಿಯಿರಿ. ಯಾರಿಂದ ಜ್ಞಾನ ಕಲಿಯುವಿರೋ ಅವರೊಂದಿಗೆ ವಿನಯದಿಂದ ವರ್ತಿಸಿರಿ.” (ಪ್ರವಾದಿ ಮುಹಮ್ಮದ್(ಸ))

Read More »

ದಾರಿಯಲ್ಲಿರುವ ತೊಂದರೆಯನ್ನು ನೀಗಿಸುವುದು

ಪ್ರವಾದಿವರ್ಯ(ಸ)ರು ಹೀಗೆಂದಿರುವರು: “ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ, ಮುಳ್ಳಿನ ಗೆಲ್ಲೊಂದು ದಾರಿಯಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ಅಲ್ಲಿಂದ ದೂರ ಸರಿಸಿದನೆಂದಾದರೆ ಅಲ್ಲಾಹನು ಅವನ ಕೃತ್ಯವನ್ನು ಗೌರವಿಸಿದನು ಮತ್ತು ಅವನನ್ನು ಕ್ಷಮಿಸಿಬಿಟ್ಟನು.” (ಹ.ಅಬೂ ಹುರೈರಃ(ರ)-ಮುಸ್ಲಿಮ್)

Read More »

ಪ್ರಾಮಾಣಿಕತೆಯ ಅಮೂಲ್ಯ ಫಲಗಳು

ಅನುವಾದ: ಮುಆದ್ ಬಿನ್ ಜಬಲ್ ರ ಹೇಳುತ್ತಾರೆ, ಅಲ್ಲಾಹನ ಪ್ರವಾದಿ (ಸ) ನನ್ನನ್ನು ಯೆಮನ್‌ಗೆ ನಿಯೋಜಿಸುತ್ತಿದ್ದಾಗ, “ಅಲ್ಲಾಹನ ಪ್ರವಾದಿಯೇ (ಸ) ! ದಯವಿಟ್ಟು ನನಗೆ ಸ್ವಲ್ಪ ಉಪದೇಶ ನೀಡಿ” ಎಂದು ವಿನಂತಿಸಿದೆ. ಅಲ್ಲಾಹನ ಪ್ರವಾದಿ (ಸ) ನನಗೆ ಕೆಲವು ಉಪದೇಶ ಮಾಡಿದರು. ಅವರು (ಸ) ಹೇಳಿದರು, “ನಿಮ್ಮ ಸಂಕಲ್ಪವನ್ನು ಎಲ್ಲಾ ರೀತಿಯ ಕಲ್ಮಶಗಳಿಂದ ಸ್ವಚ್ಛವಾಗಿರಿಸಿ. ನೀವು ಯಾವ ಕೆಲಸ ಮಾಡಿದರೂ ಅದನ್ನು ಅಲ್ಲಾಹನ ಸಂತೋಷಕ್ಕಾಗಿ ಮಾಡಿ. ಹಾಗಾದರೆ ಅಂತಹ ಸ್ವಲ್ಪ …

Read More »

ನಿಷ್ಕಳಂಕ ಸಂಕಲ್ಪ (ಸಂಕಲ್ಪ ಶುದ್ಧಿ) ಮತ್ತು ಪರಲೋಕದ ಪ್ರತಿಫಲ

ಅನುವಾದ: ಅನಸ್ ಇಬ್ನ್ ಮಾಲಿಕ್ (ರ) ಹೇಳುತ್ತಾರೆ, ತಬೂಕ್ ಯುದ್ಧ ಮುಗಿದು ನಾವು ಅಲ್ಲಾಹನ ಪ್ರವಾದಿಯವರೊಂದಿಗೆ ಹಿಂದಿರುಗುವಾಗ (ಪ್ರಯಾಣದಲ್ಲಿ) ಪ್ರವಾದಿ (ಸ) ಹೇಳಿದರು, ಕೆಲವರು ನಮ್ಮ ಹಿಂದೆ ಮದೀನದಲ್ಲಿ ಉಳಿದುಕೊಂಡಿದ್ದಾರೆ. ವಾಸ್ತವದಲ್ಲಿ ಅವರು ಈ ಪ್ರಯಾಣದಲ್ಲಿ ನಮ್ಮ ಜೊತೆಗಿದ್ದಾರೆ. ಈ ಪ್ರಯಾಣದಾದ್ಯಂತ ನಾವು ದಾಟಿದ ಪ್ರತಿಯೊಂದು ಕಣಿವೆಯಲ್ಲಿ ಮತ್ತು ಪ್ರತಿ ಪರ್ವತದ ಹಾದಿಯಲ್ಲಿ ಅವರು ನಿರಂತರವಾಗಿ ನಮ್ಮೊಂದಿಗೆ ಇದ್ದಾರೆ. ಸಮರ್ಥ ಕಾರಣವು ಅವರನ್ನು ತಡೆದಿತ್ತು. [ಬುಖಾರಿ ಮತ್ತು ಅಬು ದಾವೂದ್] …

Read More »

ಪರಲೋಕ ಗಳಿಸುವ ಬಯಕೆಯ ಪುರಸ್ಕಾರ

ಅನುವಾದ: ಝೈದ್ ಬಿನ್ ಸಾಬಿತ್ ಹೇಳುತ್ತಾರೆ, ನಾನು ಅಲ್ಲಾಹನ ಪ್ರವಾದಿ(ಸ) ಹೀಗೆ ಹೇಳುವುದನ್ನು ಕೇಳಿದ್ದೇನೆ : ಯಾವ ವ್ಯಕ್ತಿ ಲೋಕವನ್ನು ತನ್ನ ಜೀವನದ ಪರಮೋದ್ದೇಶವನ್ನಾಗಿ ಮಾಡುತ್ತಾನೆ, ಅಲ್ಲಾಹನು ಅವನ ಹೃದಯದ ಶಾಂತಿ ಮತ್ತು ಸಂತೃಪ್ತಿಯನ್ನು ಕಸಿದುಕೊಳ್ಳುತ್ತಾನೆ ಮತ್ತು ಅವನು ಯಾವಾಗಲೂ ಸಂಪತ್ತನ್ನು ಸಂಗ್ರಹಿಸುವ ದುರಾಶೆ ಮತ್ತು ಅಗತ್ಯದಲ್ಲಿ ಮುಳುಗಿರುತ್ತಾನೆ. ಆದರೆ ಅಲ್ಲಾಹನು ಅವನಿಗೆ ನಿಗದಿಪಡಿಸಿದ ಭಾಗವನ್ನು ಮಾತ್ರ ಅವನು ಪಡೆಯುತ್ತಾನೆ. ಮತ್ತು ಯಾರ ಜೀವನದ ಪರಮೋದ್ದೇಶ ಪರಲೋಕ ಆಗಿರುವುದು ಅಲ್ಲಾಹನು …

Read More »