Home / ಪ್ರವಾದಿ ವಚನಗಳು / ನಿಷ್ಕಳಂಕ ಸಂಕಲ್ಪ (ಸಂಕಲ್ಪ ಶುದ್ಧಿ) ಮತ್ತು ಪರಲೋಕದ ಪ್ರತಿಫಲ

ನಿಷ್ಕಳಂಕ ಸಂಕಲ್ಪ (ಸಂಕಲ್ಪ ಶುದ್ಧಿ) ಮತ್ತು ಪರಲೋಕದ ಪ್ರತಿಫಲ

ಅನುವಾದ: ಅನಸ್ ಇಬ್ನ್ ಮಾಲಿಕ್ (ರ) ಹೇಳುತ್ತಾರೆ, ತಬೂಕ್ ಯುದ್ಧ ಮುಗಿದು ನಾವು ಅಲ್ಲಾಹನ ಪ್ರವಾದಿಯವರೊಂದಿಗೆ ಹಿಂದಿರುಗುವಾಗ (ಪ್ರಯಾಣದಲ್ಲಿ) ಪ್ರವಾದಿ (ಸ) ಹೇಳಿದರು, ಕೆಲವರು ನಮ್ಮ ಹಿಂದೆ ಮದೀನದಲ್ಲಿ ಉಳಿದುಕೊಂಡಿದ್ದಾರೆ. ವಾಸ್ತವದಲ್ಲಿ ಅವರು ಈ ಪ್ರಯಾಣದಲ್ಲಿ ನಮ್ಮ ಜೊತೆಗಿದ್ದಾರೆ. ಈ ಪ್ರಯಾಣದಾದ್ಯಂತ ನಾವು ದಾಟಿದ ಪ್ರತಿಯೊಂದು ಕಣಿವೆಯಲ್ಲಿ ಮತ್ತು ಪ್ರತಿ ಪರ್ವತದ ಹಾದಿಯಲ್ಲಿ ಅವರು ನಿರಂತರವಾಗಿ ನಮ್ಮೊಂದಿಗೆ ಇದ್ದಾರೆ. ಸಮರ್ಥ ಕಾರಣವು ಅವರನ್ನು ತಡೆದಿತ್ತು.
[ಬುಖಾರಿ ಮತ್ತು ಅಬು ದಾವೂದ್]

ವಿವರಣಾತ್ಮಕ ಟಿಪ್ಪಣಿ: ಯಾರಾದರೂ ಒಳ್ಳೆಯ ಕಾರ್ಯವನ್ನು ಮಾಡುವ ಉದ್ದೇಶವನ್ನು ಹೊಂದಿದ್ದು ಆದರೆ ನೈಜ ಕಾರಣದಿಂದ ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ಆಖಿರತ್ ನಲ್ಲಿ ಅಲ್ಲಾಹನು ಆ ಕರ್ಮದ ಪ್ರತಿಫಲದಿಂದ ಅವನನ್ನು ವಂಚಿಸುವುದಿಲ್ಲ ಎಂಬುದು ಈ ಹದೀಸ್ ನಿಂದ ತಿಳಿದು ಬರುತ್ತದೆ.

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *