Home / ಲೇಖನಗಳು / ಪ್ರೀತಿ ಬೆಳೆಸಬೇಕಾದ ಸತ್ಯ ಬೋಧಕರು

ಪ್ರೀತಿ ಬೆಳೆಸಬೇಕಾದ ಸತ್ಯ ಬೋಧಕರು

ಶೈಕ್ ಮುಹಮ್ಮದ್ ಕಾರಕುನ್ನು

ಇಂದು ನಮ್ಮ ನಾಡಲ್ಲಿ ಅತಿ ಪ್ರಬಲವಾಗಿ ದ್ವೇಷ ಭಾವನೆಯನ್ನು ಉತ್ಪಾದಿಸಲಾಗುತ್ತಿದೆ. ವೈರಿಗಳನ್ನು ಬೆಳೆಸಲಾಗುತ್ತಿದೆ. ನಿಜವಾದ ದೇವನ ದಾಸರು ದ್ವೇಷವನ್ನು ಪ್ರೀತಿಯಿಂದ ಎದುರಿಸಬೇಕಿದೆ. ಶತ್ರುತ್ವವವನ್ನು ಸೌಹಾರ್ದದಿಂದಲೂ.

ವಿಶ್ವಾಸಿಗಳ ಹೃದಯ ವಿಶ್ವದಷ್ಟು ವಿಶಾಲವಾಗಿರಬೇಕು. ಅದರಲ್ಲಿ ಪ್ರಾಮಾಣಿಕ ಪ್ರೀತಿ ತುಂಬಿರಬೇಕು. ಮನುಷ್ಯರನ್ನು ಮಾತ್ರವಲ್ಲ. ವಿಶ್ವದಲ್ಲಿರುವುದೆಲ್ಲವನ್ನೂ ಪ್ರೀತಿಸುವುದು ವಿಶ್ವಾಸಿಗಳ ಹೊಣೆಯಾಗಿದೆ. ಅವೆಲ್ಲವೂ ನಮಗೆ ಜೀವ ಕೊಟ್ಟ ಅಲ್ಲಾಹನ ಸೃಷ್ಟಿಗಳೆಂಬುದು ನಮ್ಮ ಮನಸ್ಸಿನಲ್ಲಿರಬೇಕು.

ಪ್ರೀತಿ ಪನ್ನೀರ ಹೂವಂತೆ. ಅದನ್ನು ಎಷ್ಟು ಮೆಟ್ಟಿದರೂ ಅದರ ಸುವಾಸನೆ ಹೋಗುವುದಿಲ್ಲ. ಆ ರೀತಿ ಎಂತಃ ಕಷ್ಟ, ಸಮಸ್ಯೆ, ಕೀಟಲೆ ಕೋಟಲೆಗಳು ಬಂದರೂ ಪ್ರೀತಿ ಸೋಲುವುದಿಲ್ಲ. ಕೊಳಕ್ಕೆ ಕಲ್ಲು ಹಾಕಿದರೆ ನೀರು ಅಲ್ಲಾಡುವಂತೆ ಪ್ರೀತಿಸುವವರ ಹೃದಯಲ್ಲಿ ಪ್ರೀತಿ ಆನಂದಗಳು ಅಲ್ಲಾಡುತ್ತವೆ.

ಪ್ರೀತಿ ಶತ್ರುವನ್ನು ಮಿತ್ರನಾಗಿಸುವುದು. ವಿರೋಧಿಗಳನ್ನು ಬೆಂಬಲಿಗರನ್ನಾಗಿಸುವುದು. ದೂರಾದವರನ್ನು ಹತ್ತಿರಕ್ಕೆ ತರುವುದು. ಆದ್ದರಿಂದ ಸತ್ಯ ಬೋಧಕರು ಮಿತಿಯಿಲ್ಲದ, ಗಡಿಯಿಲ್ಲದ, ಪರಿಧಿಯಿಲ್ಲದ ಪ್ರೀತಿಯ ವ್ಯಕ್ತಿತ್ವದ ರೂಪವಾಗಿರಲು ಬಯಸಬೇಕಿದೆ. ಅದಕ್ಕೆ ಶ್ರಮಿಸಬೇಕಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …