Home / ಲೇಖನಗಳು / ರಾಮ ರಹೀಮ್,ಕಿರಣ್ ಹಾರೂನ್, ಅನಂತ ಅನಸ್, ರಾಜ್ ಸರ್ಫರಾಜ್ ಎಲ್ಲಿ ? ಎಲ್ಲಿ ಅವರೆಲ್ಲಿ ?

ರಾಮ ರಹೀಮ್,ಕಿರಣ್ ಹಾರೂನ್, ಅನಂತ ಅನಸ್, ರಾಜ್ ಸರ್ಫರಾಜ್ ಎಲ್ಲಿ ? ಎಲ್ಲಿ ಅವರೆಲ್ಲಿ ?

  • ಜಲೀಲ್ ಮುಕ್ರಿ

ಅಮ್ಮ ಕೊಟ್ಟ
ನಾಣ್ಯಗಳೊಂದಿಗೆ
ಜಾತ್ರೆಗೆ ಹೋದ ಖುಷಿ ಇಂದೆಲ್ಲಿ ?

ಪಕ್ಕದ್ಮನೆ ಸುರೇಶ
ರಾಬರ್ಟ್ ಅನೀಸ್ ಜೊತೆಗೂಡಿ
ಜಾತ್ರೆಯಲ್ಲಿ ಆಡಿದ ಆಟ ಇಂದೆಲ್ಲಿ ?

ಕೃಷ್ಣಪ್ಪರ ಚುರುಮುರಿ,
ಉಮರಾಕನ ಕಲ್ಲಂಗಡಿ
ಡೊಂಬಯ್ಯರ ಸೋಡಾ ಶರಬತ್ತು ಇಂದೆಲ್ಲಿ ?

ಜಾತಿ ಧರ್ಮದ
ರಥದ ಚಕ್ರದಡಿ ಸಿಲುಕಿ
ಅಪ್ಪಚ್ಚಿಯಾದ ದಿನಗಳ ನಡುವೆ
ಅಂದಿನ ಮಖೆ, ಜಾತ್ರೆ ,ಉತ್ಸವವೆಲ್ಲಿ ?

ಯಾಂತ್ರಿಕ ತಿರುಗುವ
ಜಾತ್ರೆ ತೊಟ್ಟಿಲುಗಳ ಆರ್ಭಟದ ನಡುವೆ
ಕೈಯಿಂದ ದೂಡುತ್ತಿದ್ದ ಸಂಭ್ರಮ ಸಂತಸದ
ಜಾತ್ರಾ ತೊಟ್ಟಿಲೆಲ್ಲಿ….

ಯಾಂತ್ರಿಕ ಬದುಕಿನ ನಡುವೆ
ಅಂದು ಏಕೋದರ ಸಹೋದರರಾಗಿ
ಧರ್ಮ,ಜಾತಿ ಸೋಂಕು ತಗಲದೆ
ಬಾಳಿ ಬದುಕುತ್ತಿದ್ದ

ರಾಮ ರಹೀಮ್,ಕಿರಣ್ ಹಾರೂನ್,
ಅನಂತ ಅನಸ್, ರಾಜ್ ಸರ್ಫರಾಜ್ ಎಲ್ಲಿ ?
ಎಲ್ಲಿ ಅವರೆಲ್ಲಿ ?

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …