Home / ಲೇಖನಗಳು / ಅನಗತ್ಯ ಚಿಂತೆ ಮಾಡಬಾರದು

ಅನಗತ್ಯ ಚಿಂತೆ ಮಾಡಬಾರದು

@ ಎಮ್ಮೆಸ್ಕೆ

ಮಾನವರಲ್ಲಿ ಹೆಚ್ಚಿನವರಿಗೆ ಒಂದಲ್ಲೊಂದು ರೀತಿಯ ಚಿಂತೆ ಕಾಡುತ್ತಿರುತ್ತದೆ. ಪರಿಸ್ಥಿತಿ ಹದಗೆಡುತ್ತಿದೆಯೆಂದು ಅವರು ಭಾವಿಸುತ್ತಾರೆ. ಅದೊಂದು ಮಾನಸಿಕ ತೊಳಲಾಟವಾಗಿದೆ. ಇಂದಿನ ಕಾಲದಲ್ಲಿ ಜನಸಾಮಾನ್ಯರು ಈ ಅಸ್ವಸ್ಥತೆಗೆ ಸಿಲುಕಿರುವುದು ಕಂಡು ಬರುತ್ತದೆ.

ಈ ಚಿಂತೆಯು ಮನುಷ್ಯನಲ್ಲಿ ಅನೇಕ ರೀತಿಯ ಮಾನಸಿಕ ಮತ್ತು ಶಾರೀರಿಕ ಲಕ್ಷಣಗಳನ್ನು ಪ್ರಕಟಪಡಿಸುತ್ತದೆ. ಇದರಿಂದ ಮನಸ್ಸಿನಲ್ಲಿ ಒಂದು ರೀತಿಯ ಭಯವೂ ಉಂಟಾಗುತ್ತದೆ. ಇದು ತೀವ್ರ ಕಳವಳಕ್ಕೆ ಕಾರಣವಾಗುತ್ತದೆ.

ಮನುಷ್ಯನ ಕೆಟ್ಟ ಅಭ್ಯಾಸವೇನೆಂದರೆ ತನ್ನಲ್ಲೇಳುವ ಭಾವನೆಗಳನ್ನು ಸ್ವಯಂ ದಮನಿಸ ಬಯಸುತ್ತಾನೆ. ಅದಕ್ಕಾಗಿ ಪ್ರಯತ್ನಿಸುತ್ತಾನೆ. ತಾನು ಸಮಾಧಾನಚಿತ್ತನಾಗಿದ್ದೇನೆಂದು ತೋರ್ಪಡಿಸುತ್ತಾನೆ. ಆದರೆ ಒಳಗಿಂದೊಳಗೇ ಭಯ ಕಳವಳ ಹೆಚ್ಚುತ್ತಿರುತ್ತದೆ. ಈ  ಚಿಂತೆಯನ್ನು ಹೋಗಲಾಡಿಸಲು ಕೆಲವು ಸಲಹೆಗಳಿವೆ.

ಮೊತ್ತ ಮೊದಲಾಗಿ ಮನುಷ್ಯ ತನ್ನ ಭಯ, ಆಗ್ರಹಗಳು ಮತ್ತು ಸುಪ್ತ ಆವಶ್ಯಕತೆಗಳನ್ನು ಒಪ್ಪಿಕೊಳ್ಳಬೇಕು. ಅದನ್ನು ಮರೆಮಾಚಬಾರದು. ತಾನು ಈ ಬಗ್ಗೆ ತಲೆಕೆರೆದುಕೊಳ್ಳುವ ಅಗತ್ಯವಿಲ್ಲವೆಂದು ತನ್ನನ್ನು ವಂಚಿಸಬಾರದು. ಆಗ್ರಹಗಳನ್ನೂ ಭಾವನೆಗಳನ್ನೂ ದಮನಿಸುವುದರಿಂದ ದೈಹಿಕ ಶಕ್ತಿಯ ಮೇಲೆ ಪರಿಣಾಮವುಂಟಾಗುತ್ತದೆ.

ತನ್ನ ಚಿಂತೆ ವ್ಯರ್ಥ ಮತ್ತು ಅರ್ಥಹೀನವಲ್ಲ ತಾನೆ, ಇದು ಒಂಟಿತನದ ಭಾವನೆ ಅಲ್ಲ ತಾನೆ ಎಂದು ಅವಲೋಕಿಸಬೇಕು. ತನ್ನ ಕಳವಳವನ್ನು ನೀಗಿಸುವ ಸಾಮಥ್ರ್ಯವಿಲ್ಲದಂತಹ ಕಾರ್ಯಗಳಲ್ಲಿ ತನ್ನನ್ನು ದುಡಿಸಿಕೊಳ್ಳುವ ಅಗತ್ಯವಿಲ್ಲ. ಕಾರ್ಯ ನಿಬಿಡತೆಯು ಸ್ವಲ್ಪ ಸಮಯದ ಮಟ್ಟಿಗೆ ಕಳವಳವನ್ನು ತಡೆಯಬಲ್ಲುದು. ಆದರೆ ಶಾಶ್ವತವಾಗಿ ಹೋಗಲಾಡಿಸದು. ಕಳವಳ-ಚಿಂತೆಯನ್ನು  ದೂರಮಾಡಲು ವಾಸ್ತವಿಕ ಪ್ರಜ್ಞೆ ಅತ್ಯಗತ್ಯವಾಗಿದೆ. ಅದನ್ನು ಸಂಪೂರ್ಣ ಅಳಿಸಿ ಹಾಕುವ ಪ್ರಯತ್ನ ಮಾಡಬಾರದು.

ಬದುಕಿನಲ್ಲಿ ಸದಾ ಅಸ್ಥಿರತೆ ಮತ್ತು ಅಪಾಯಗಳು ಎದುರಾಗುತ್ತಲೇ ಇರುತ್ತದೆ. ವಾಸ್ತವಿಕ ಅಪಾಯಗಳ ಕಡೆಗೆ ಮಾತ್ರ ಗಮ ನಕೊಡಬೇಕು. ಸ್ವಲ್ಪಂಶ ಕಳವಳವು ತಮ್ಮನ್ನು ಜೀವಂತವಾಗಿರಿಸಲು ಸಹಾಯಕವಾಗುತ್ತದೆ. ವ್ಯಾಯಾಮದಿಂದ ಕಳವಳವು ಕಡಿಮೆಯಾಗುತ್ತದೆ. ದಿನಂಪ್ರತಿ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ ಮಾಡಬೇಕು.  ಶರೀರವನ್ನು ಸದಾ  ಚಟುವಟಿಕೆಯಲ್ಲಿರಿಸುವಂತಹ ಕೆಲಸಗಳನ್ನು ಮಾಡಬೇಕು. ಒಂದು ವಿಷಯವನ್ನು ಕಲ್ಪಿಸಿಕೊಳ್ಳುವುದು ಮತ್ತು ಕಾರ್ಯತಃ ಮಾಡುವುದು ಬೇರೆ ಬೇರೆಯಾಗಿದೆ. ಆದ್ದರಿಂದ ಇಲ್ಲ ಸಲ್ಲದ ಅಲೋಚನೆಗಳನ್ನು ತನ್ನ ಮೇಲೆ ಹೇರಬಾರದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …