ನಿಮ್ಮ ಪ್ರಭು(ಹೀಗೆ) ವಿಧಿಸಿ ಬಿಟ್ಟಿದ್ದಾನೆ, ನೀವು ಅವನೊಬ್ಬ ನ ಹೊರತು ಇನ್ನಾರ ದಾಸ್ಯ ಆರಾಧನೆಯನ್ನು ಮಾಡಬಾರದು.
ಮಾತಾಪಿತರೊಡ ನೆ ಸೌಜನ್ಯದಿಂದ ವರ್ತಿಸಿರಿ.
ಕುರ್ ಆನ್ 17-23
***************************************
ದೇವರು- ತಂದೆ- ತಾಯಿ ಈ ಮೂರು ವಿಷಯವನ್ನು ಒಂದೇ ವಾಕ್ಯದಲ್ಲಿ ಏಕೆ ಇರಿಸಲಾಗಿದೆ ಎಂಬುದರ ಬಗ್ಗೆ
ನಾವೆಲ್ಲಾ ಚಿಂತಿಸಬೇಕಾಗಿದೆ.
ಈ ಮೂರಕ್ಕೆ ಬದಲಿ ಇಲ್ಲ,
ದೇವರು ಒಂದೇ
ತಂದೆ ಒಂದೇ
ತಾಯಿ ಒಂದೇ
ತಂದೆ ಅಂದರೆ ನಮ್ಮ ಜನ್ಮಕ್ಕೆ ಕಾರಣರಾದವರು, ನಮ್ಮ ಆರೋಗ್ಯ, ಶಿಕ್ಷಣ, ಬೆಳವಣಿಗೆಯ ಬಗ್ಗೆ ತಮ್ಮೆಲ್ಲವನ್ನೂ ಅರ್ಪಿಸಿದವರು.
ನಮಗೆ ದೊಡ್ಡಪ್ಪ ತುಂಬಾ ಇರಬಹುದು
ಚಿಕ್ಕಪ್ಪ ತುಂಬಾ ಇರಬಹುದು
ಆದರೆ ತಂದೆ ಒಬ್ಬನು ಮಾತ್ರ, ಸರಿ ತಾನೇ?
ಇನ್ನು
ನಮ್ಮ ತಾಯಿ, ನಮ್ಮನ್ನು ಗರ್ಭದಲ್ಲಿ ಹೊತ್ತು, ಹೆತ್ತು, ಜನ್ಮ ನೀಡಿ, ಎರಡು ವರ್ಷ ಎದೆ ಹಾಲುಣಿಸಿ, ರಾತ್ರಿ ಹಗಲು ನಿದ್ದೆಗೆಟ್ಟು ನಮ್ಮ ಚಾಕರಿ ಮಾಡಿ, ಕಷ್ಟಪಟ್ಟು ನಮ್ಮನ್ನು ಬೆಳೆಸಿದವಳು. ಈ ಎಲ್ಲ ಕಾರಣಕ್ಕೆ ನಮಗೆ ತಾಯಿ.
ನಮಗೆ ದೊಡ್ಡಮ್ಮ ತುಂಬಾ ಇರಬಹುದು.
ಚಿಕ್ಕಮ್ಮ ತುಂಬಾ ಇರಬಹುದು, ಆದರೆ,
ತಾಯಿ ಒಂದೇ, ಸರಿ ತಾನೇ?
ಇನ್ನು ಪ್ರಶ್ನೆ?
ನಾವು ನಮ್ಮ ತಂದೆಯನ್ನು ತಂದೆ ಎಂದು ಕರೆಯದೆ ಬೇರೆ ಪುರುಷನನ್ನು (ತಂದೆಯ ಸಮಕ್ಷಮ) ತಂದೆ ಎಂದು ಕರೆದರೆ ನಿಜವಾದ ತಂದೆಗೆ ಏನಾಗಬಹುದು?
ಅವರು ನಮ್ಮನ್ನು ಹೇಗೆ ಕರೆಯಬಹುದು?
ನಮ್ಮ ತಾಯಿಯನ್ನು ತಾಯಿ ಎಂದು ಕರೆಯದೆ ಬೇರೆ ಮಹಿಳೆಯನ್ನು (ತಾಯಿಯ ಸಮಕ್ಷಮ) ತಾಯಿ ಎಂದು ಕರೆದರೆ ತಾಯಿಯ ಮನಸ್ಸು ಹೇಗಿರಬಹುದು?
ತಂದೆ, ತಾಯಿಯ, ಮನಸ್ಸಿನ ಅಂತರಾಳದ ಮಾತು
ಮಹಾ ದ್ರೋಹಿ ಎಂದಾಗಿದೆ.
ಇದನ್ನು ಓದುವವರಿಗೆ ಮಕ್ಕಳು ಇದೆಯೆಂದಾದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಬಿಟ್ಟು ಬೇರೆಯವರನ್ನು ತಂದೆ, ತಾಯಿ ಎಂದು ಕರೆದರೆ, ನಿಮ್ಮನ್ನು ಒಮ್ಮೆಯೂ ತಂದೆ,ತಾಯಿ ಎಂದು ಕರೆಯದಿದ್ದರೆ ನಿಮಗೇನಾಗಬಹುದು?
ಇನ್ನು ನಿಮ್ಮ ಮಕ್ಕಳು ದೊಡ್ಡವರಾಗಿ ಯಾವುದಾದರೂ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರೆ, ತಂದೆ, ತಾಯಿ ನೆನಪಿಗಾಗಿ ಅವರ ಫೋಟೋ ಇಟ್ಟು
ಕಚೇರಿಗೆ ಆಗಮಿಸಿದವರು ಅದು ಯಾರ ಫೋಟೋ?
ಎಂದು ಕೇಳಿದರೆ?
ಅದು ನಮ್ಮ ತಂದೆ ತಾಯಿ ಎಂದು ಹೇಳಿದರೆ?
ಅವನ/ಳ ತಂದೆ ತಾಯಿ ಅಲ್ಲಿ ಹಾಜರಿದ್ದರೆ?
ಎಷ್ಟು ಸಂತೋಷವಾಗಲಿಕ್ಕಿಲ್ಲ.?
ಅದೇ ಸಂದರ್ಭದಲ್ಲಿ ತಂದೆ ತಾಯಿಯ ಫೋಟೋ ಬದಲು ಎರಡು ಪ್ರಾಣಿಗಳ ಫೋಟೋ ಇಟ್ಟು
ಕಚೇರಿಗೆ ಆಗಮಿಸಿದವರೊಂದೀಗೆ, ಅದು ನನ್ನ ತಂದೆ ತಾಯಿ ಎಂದು ಅವರ ಸಮ್ಮುಖದಲ್ಲೇ ಹೇಳಿದರೆ ತಂದೆ ತಾಯಿಯ ಮನಸ್ಸಿಗೆ ಏನಾಗಹುದು?
ಈಗ ಚಿಂತಿಸಿ
ನಾವು ನಮ್ಮ ತಂದೆ ತಾಯಿಯನ್ನು ತಂದೆ, ತಾಯಿ ಎಂದು ಕರೆಯದೆ ಹೋದರೆ, ಅವರ ಫೋಟೋ ಬದಲಿಗೆ ಪ್ರಾಣಿಗಳ ಫೋಟೋ ಇಟ್ಟರೆ ಅವರ ಮನಸ್ಸಿಗೆ ನೋವಾ ಗಿ, ನಮ್ಮನ್ನು ಮಹಾ ದ್ರೋಹಿ ಎಂದು ಕರೆಯುತ್ತಾರೆ ಎಂದಾದರೆ?
ನಮ್ಮನ್ನು ಸೃಷ್ಟಿಸಿದ, ನಮಗೆ ಜೀವಾತ್ಮ ವನ್ನೂ ನೀಡಿದ
ನಮಗೆ ಆಯುಷ್ಯವನ್ನು ನೀಡಿದ, ಈ ಜಗತ್ತಿನಲ್ಲಿ ಉಸಿರಾಡಲು ಉಚಿತ ಗಾಳಿ, ನೀರು, ನಡೆದಾಡಲು ಭೂಮಿ ಒದಗಿಸಿದ, ನಮಗೆ ಬೇಕಾಗುವ ಆಹಾರ ಪದಾರ್ಥಗಳನ್ನು ನೀಡಿದ ಸೃಷ್ಟಿಕರ್ತನಾದ, ನಿರಾಕಾರ ನಾದ ದೇವನನ್ನು ಬಿಟ್ಟು ನಮಗೆ ತೋಚಿದ್ದನ್ನೆಲ್ಲ ದೇವರು ಎಂದು ಕರೆದರೆ, ದೇವನಲ್ಲದುವುಗಳಿಗೆ ಆರಾಧನೆ ಸಲ್ಲಿಸಿದರೆ ನೈಜ ದೇವರಿಗೆ ಏನಾಗಬಹುದು?
ಇದು ನಮ್ಮ ಸೃಷ್ಟಿಕರ್ತನಾದ ದೇವನಿಗೆ ಸಲ್ಲಿಸುವ ಕೃತಘ್ನತೆಯಲ್ಲವೇ?
ಆದುದರಿಂದಲೇ ದೇವನಿಗೆ ಸಹಭಾಗಿತ್ವ ಕಲ್ಪಿಸು ವವರನ್ನ, ಆಕ್ರಮಿಗಳು ಅವರು ಮಹಾ ಪಾಪಿಗಳು, ಮಹಾ ದ್ರೋಹಿಗಳು ಎಂದೆಲ್ಲಾ ಗ್ರಂಥಗಳಲ್ಲಿ ಅಭಿಸಂಭೋಧಿಸಿರುವುದು.
ದೇವನು ಕ್ಷಮಿಸಲು ಇಚ್ಚಿಸುವ ಎಲ್ಲವನ್ನು ಕ್ಷಮಿಸುವನು, ಆದರೆ ದೇವನೊಂದಿಗೆ ಇತರರನ್ನು ಭಾಗೀದಾರರನ್ನಾಗಿ ಮಾಡುವುದನ್ನು ಎಂದೆಂದಿಗೂ ಕ್ಷಮಿಸುವುದಿಲ್ಲ.
ಕಾರಣ ದೇವನು ಒಬ್ಬನೇ., ದೇವನು
ಅನೇಕ ಇಲ್ಲ,
ಯಾವ ರೀತಿ ತಂದೆ, ತಾಯಿ ಅನೇಕ ಇಲ್ಲವೋ.
ಹೇಳಿರಿ, ಅವನು ಅಲ್ಲಾಹನು.
ಏಕೈಕನು
ಅಲ್ಲಾಹನು ಸಕಲರಿಂದಲೂ
ನಿರಪೇಕ್ಷನು,
ಮತ್ತು
ಸರ್ವರೂ ಅವನ ಅವಲಂಬಿತರು,
ಅವನಿಗೆ, ಯಾವುದೇ ಸಂತಾನವಿಲ್ಲ.
ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಸರಿ ಸಮಾನ ಯಾರೂ ಇಲ್ಲ. (ಕುರ್ ಆನ್ 112- 1;;4.)
ಸಯೀದ್ ಇಸ್ಮಾಯಿಲ್
ಮಲ್ಲೂರು, ಮಂಗಳೂರು.
IslamKannada News Portal




