Home / ಲೇಖನಗಳು / ನಾಲಗೆಯ ಉಪವಾಸ

ನಾಲಗೆಯ ಉಪವಾಸ

@ ಟಿ. ಮುಹಮ್ಮದ್ ವೇಳಂ

ರುಚಿ ಹಾಗೂ ರತಿಯ ಬಳಿಕ ಅತ್ಯಂತ ಹೆಚ್ಚು ಉಪವಾಸವಿರುವುದು ನಾಲಗೆಗಾಗಿದೆ. ನಂತರ ಎಲ್ಲಾ ಕಾರ್ಯಗಳಿಗೆ ಅನ್ವಯವಾಗುತ್ತದೆ. ಮಾತನ್ನು ನಿಯಂತ್ರಿಸುವುದು ಆತ್ಮಸಂಸ್ಕರಣೆಯ ಮುಖ್ಯ ಭಾಗವಾಗಿದೆ. ಆತ್ಮಸಂಸ್ಕರಣೆಯು ತೀವ್ರ ರೂಪವಾದ ಸನ್ಯಾಸದಲ್ಲಿ ಇವೆಲ್ಲವೂ ಮಿತಿ ಮೇರೆಗಳನ್ನು ದಾಟಿರುವುದು ಕಂಡು ಬರುತ್ತದೆ. ಕ್ರೈಸ್ತ ಸನ್ಯಾಸತ್ವವನ್ನು ಸ್ವೀಕರಿಸಿ, ಉಪೇಕ್ಷಿಸಿದ ಪ್ರಸಿದ್ಧ ಬ್ರಿಟಿಷ್ ಬರಹಗಾರ್ತಿ ಕಾಸು ಆರ್ಮ್‍ಸ್ಟ್ರಾಂಗ್‍ರು ತಮ್ಮ ಗೋವನಿ ಎಂಬ ಆತ್ಮ ಕಥೆಯಲ್ಲಿ ಚರ್ಚ್ ಸನ್ಯಾಸಿಗಳಲ್ಲಿ  ಯಾವ ರೀತಿಯ ನಿಶ್ಶಬ್ದತೆಯನ್ನು ತರಬೇತಿಗೊಳಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಆತ್ಮಸಂಸ್ಕರಣೆಗೆ ಇಸ್ಲಾಮ್ ಆದೇಶಿಸಿರುವ ಹಾದಿ ಮಾತನಾಡದೆ ಇರುವುದಲ್ಲ, ಉತ್ತಮವಾದುದನ್ನು ಮಾತನಾಡುವುದಾಗಿದೆ. ಇಲ್ಲದಿದ್ದರೆ ಮೌನವಾಗಿರಬೇಕು ಎಂಬುದು ಉಪವಾಸವು ನಾಲಗೆಗೆ ಕಡಿವಾಣವಾಗಿದೆ. ಕೆಟ್ಟ ಮಾತುಗಳು, ಅಸಭ್ಯ ವರ್ತನೆಗಳನ್ನು ಬಿಡದೆ ಆಹಾರ ಪಾನೀಯಗಳನ್ನು ವರ್ಜಿಸಬೇಕೆಂಬ ಅಗತ್ಯ ಅಲ್ಲಾಹನಿಗಿಲ್ಲವೆಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಇಲ್ಲಿ ಮೊದಲು ಮಾತನ್ನು  ಬಳಿಕ ಕರ್ಮದ ಕುರಿತು ಪ್ರವಾದಿಗಳು ವಿಮರ್ಶಿಸಿದ್ದಾರೆ.

ಮಾತು ಎಂಬುದು ನಮ್ಮ ಅಂತರಾಳದ ಪ್ರತಿಬಿಂಬವಾಗಿದೆ. ತನ್ನೊಳಗೆ ಇಲ್ಲದ್ದನ್ನು ಓರ್ವರಿಗೆ ಹೇಳಲು ಸಾಧ್ಯ ವಿದೆ. ಅದು ಒಳಗಿರುವ ಕಾಪಟ್ಯದ ಪ್ರತಿಬಿಂಬವಾಗಿರಬಹುದು. ಮಾತನ್ನು ಸಂಸ್ಕರಿಸಬೇಕು ಎಂಬುದರ ಸರಿಯಾದ ಅರ್ಥ ಮನಸ್ಸನ್ನು  ಸಂಸ್ಕರಣೆ ಮಾಡುವುದಾಗಿದೆ. ಉಪವಾಸವು ಕರ್ಮಗಳಿಂದ ನಮ್ಮನ್ನು ಜಾಗೃತಗೊಳಿಸುವ ತರಬೇತಿಯಾದುದರಿಂದ ಮಾತನಾಡುವ ಸದಾಚಾರದ ಕುರಿತು ಪ್ರವಾದಿವರ್ಯರು(ಸ) ಒತ್ತಿ ಹೇಳಿದ್ದಾರೆ. ಇದು ಮಾತನ್ನು ಸಂಸ್ಕರಿಸಿ ನಮ್ಮ ಒಳಗನ್ನು ಸಂಸ್ಕರಿಸುವ ರೀತಿಯಾಗಿದೆ.

ಮನಸ್ಸಿನಲ್ಲಿ ಇರುವುದನ್ನು ಹೇಳಿದರೆ ಏನಾಗುತ್ತದೆ? ಎಂದು ನಾವು ಯೋಚಿಸುತ್ತೇವೆ. ಇದರ ಕುರಿತು ಇಮಾಮ್ ಗಝ್ಝಾಲಿ ಹೇಳುತ್ತಾರೆ, ನಾವು ಹೇಳುವ ಮಾತು ನಮ್ಮ ಮನಸ್ಸನ್ನು ಸ್ವಾದೀನಗೊಳಿಸುತ್ತದೆ. ಆಗ ಮಾತು ಮನದ ಪ್ರತಿಫಲನ  ಮಾತ್ರವಲ್ಲ, ಮನಸ್ಸನ್ನು ಸ್ವಾಧೀನಪಡಿಸುವ ಕರ್ಮವೂ ಆಗಿದೆ. ಆಗ ಮನದ ಸಂಸ್ಕರಣೆಯೊಂದಿಗೆ ಮಾತಿನ ಸಂಸ್ಕರಣೆಯು ಸಾಧ್ಯವಾಗುತ್ತದೆ ಎಂದು ಮಾತ್ರವಲ್ಲ ಮಾತಿನ ಸಂಸ್ಕರಣೆಯಿಂದ ಮನಸ್ಸಿನ ಸಂಸ್ಕರಣೆಯೂ ಉಂಟಾಗುತ್ತದೆ ಎಂಬುದು  ತಿಳಿದು ಬರುತ್ತದೆ. ಉಪವಾಸವು ಮಾತನ್ನು ಸ್ಪರ್ಶಿಸುವುದರ ಕಾರಣವೂ ಅದುವೇ. ಮನಸ್ಸು ಒಳ್ಳೆಯದಾದರೆ ನಾಲಗೆಯು ಉತ್ತಮವಾಗುತ್ತದೆ. ಮಾತ್ರವಲ್ಲ, ನಾಲಗೆ ಉತ್ತಮವಾದರೆ ಮನಸ್ಸು ಉತ್ತಮವಾಗುತ್ತದೆ. ನಾಲಗೆಯಿಂದ ಬಾಣದಂತೆ  ಹೊರಬೀಳುವ ಮಾತುಗಳು ಇತರರನ್ನು ಭಾದಿಸುತ್ತದೆ ಎಂಬುದು ಮಾತ್ರ ಸಮಸ್ಯೆಯಲ್ಲ, ಅದು ಹೇಳುವವರನ್ನೂ ಕಾಡುತ್ತದೆ. ಅಲ್ಲಾಹನು ಹೇಳುತ್ತಾನೆ, “ಸತ್ಯವಿಶ್ವಾಸಿಗಳೇ, ಅಲ್ಲಾಹನನ್ನು ಭಯಪಡಿರಿ. ಸತ್ಯವನ್ನೇ ನುಡಿಯಿರಿ. ಅಲ್ಲಾಹನು ನಿಮ್ಮ  ಕರ್ಮವನ್ನು ಸಂಸ್ಕರಿಸುತ್ತಾನೆ. ಪಾಪಗಳನ್ನು ಮನ್ನಿಸುತ್ತಾನೆ” (ಕುರ್‍ಆನ್).

ಹೃದಯವು ನಾಲಗೆಯನ್ನು ಮಾತ್ರವಲ್ಲ ನಾಲಗೆಯು ಹೃದಯವನ್ನೂ ಆಕರ್ಷಿಸುತ್ತದೆ ಎಂಬ ಕಾರಣದಿಂದ ಅಲ್ಲಾಹನು ಮಾತನಾಡುವುದನ್ನು ಆರಾಧನೆಯ ಭಾಗ ವಾಗಿ ನಿಶ್ಚಯಿಸಿದ್ದಾನೆ. ನಮಾಝ್ ಹಾಗೂ ದಿಕ್ರ್‍ಗಳಲ್ಲಿ ನಮಗೆ ಅದನ್ನು ಕಾಣಲು ಸಾಧ್ಯವಿದೆ. ಇದನ್ನು ಆಧುನಿಕ ಮನೋಶಾಸ್ತ್ರ ಅತ್ಯಂತ ಪ್ರಾಮುಖ್ಯತೆಯಿಂದ ಅಂಗೀಕರಿಸಿದೆ. ಪ್ರತಿಯೊಂದು ಮಾತು ಮೆದುಳಿಗೂ, ಹೃದಯಕ್ಕೂ ಸಂದೇಶವನ್ನು ನೀಡುತ್ತದೆ. ನಮ್ಮ ಮೌನವೂ ಕೂಡ.

ಮಾನವ ಸಮೂಹವು ಮಾನವನ ಮಾತಿನಿಂದ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಮಾತುಗಳ ಇಟ್ಟಿಗೆಯಿಂದ ಸಮೂಹವನ್ನು ನಿರ್ಮಿಸಲಾಗಿದೆ. ಕೆಟ್ಟ ಮಾತುಗಳಿಂದ ಕೆಟ್ಟ ಸಮೂಹವೂ ಉತ್ತಮ ಮಾತುಗಳಿಂದ ಉತ್ತಮ ಸಮೂಹವೂ  ನಿರ್ಮಿಸಲ್ಪಡುತ್ತದೆ. ಉತ್ತಮ ಮಾತು ಒಳ್ಳೆಯ ಮರವೆಂದು ಅಲ್ಲಾಹನು ಹೇಳುತ್ತಾನೆ. ಉತ್ತಮ ಮಾತುಗಳು ಒಳಿತಿನ ಸ್ತ್ರೋತಸ್ಸನ್ನು ಕೆಟ್ಟ ಮಾತುಗಳು ಕೆಡುಕಿನ ಪ್ರವಾಹವನ್ನು ಹರಿಸುತ್ತದೆ. ಪರನಿಂದೆ, ಚಾಡಿ, ಅಪಹಾಸ್ಯ, ಅಪ ಪ್ರಚಾರ, ಅಪವಾದ,  ಚುಚ್ಚು ಮಾತು, ಮಾಡಿದ ಉಪಕಾರವನ್ನು ಪುನಃ ಹೇಳುತ್ತಿರುವುದು ಹೀಗೆ ಮಾತಿಗೆ ಸಂಬಂಧಿಸಿದ ಎಲ್ಲಾ ಕೆಟ್ಟ ವಿಚಾರಗಳನ್ನು ಅಲ್ಲಾಹನು ನಿಷಿದ್ಧಗೊಳಿಸಿದ್ದಾನೆ. ಅದೆಲ್ಲಾ ಉತ್ಪಾದಿಸುವ ಶಕ್ತಿಯು ನಿಷೇಧಾತ್ಮಕವಾಗಿರುವುದರಿಂದ ಅದರಿಂದ ಯಾವುದೇ ಸಕಾರಾತ್ಮಕ ಶಕ್ತಿಯು ಉತ್ಪಾದನೆಯಾಗುವುದಿಲ್ಲ.

ಓರ್ವ ವ್ಯಕ್ತಿಯ ಕುರಿತು ವ್ಯಭಿಚಾರದ ಆರೋಪ ಹೊರಿಸಿದರೆ ವ್ಯಕ್ತಿಯು ನಾಲ್ಕು ಸಾಕ್ಷಿಗಳನ್ನು ತರಬೇಕು. ಆಗ ವ್ಯಭಿಚಾರಿಯು ವಿವಾಹಿತರಾದವರಾದರೆ ಕಲ್ಲೆ ಸೆದು ಕೊಲ್ಲುವ ಶಿಕ್ಷೆ, ಅವಿವಾಹಿತರಾದರೆ ನೂರು ಛಡಿಯೇಟು ಜಾರಿಗೊಳಿಸಬೇಕು.  ಆರೋಪಿಸುವವನಿಗೆ ನಾಲ್ಕು ಸಾಕ್ಷಿಗಳನ್ನು ತರಲು ಸಾಧ್ಯವಾಗದಿದ್ದರೆ ಅವನಿಗೆ 80 ಛಡಿಯೇಟು ನೀಡಬೇಕು ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಅವನ ಮಾತು ಚಲಾವಣೆಯಿಲ್ಲದ ನಾಣ್ಯವಾಗುವುದು.

ಸುದ್ದಿಯು ಸಮೂಹವನ್ನು ನಿರ್ಣಯಿಸುವ ಮುಖ್ಯ ಶಕ್ತಿಯಾಗಿದೆ. ಯಾರು ವಾರ್ತಾ ವಿವರಗಳನ್ನು ನಿಯಂತ್ರಿಸುತ್ತಾರೋ ಅವರು ಸಮಾಜವನ್ನು ನಿಯಂತ್ರಿ ಸುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಯಾರೂ ಬೇಜವಾಬ್ದಾರಿಯಿಂದ ವಾರ್ತೆಗಳನ್ನು ಹರಡಬಾರದೆಂದು ಅಲ್ಲಾಹನು ಹೇಳಿದ್ದಾನೆ: “ಇವರು ಯಾವು ದಾದರೂ ಶಾಂತಿ ಅಥವಾ ಭೀತಿಯ ವಾರ್ತೆ ಕೇಳಿದಾಗ ಅದನ್ನೆತ್ತಿಕೊಂಡು ಪ್ರಚಾರ ಮಾಡುತ್ತಾರೆ. ನಿಜವಾಗಿ ಅವರು ಅದನ್ನು ಸಂದೇಶವಾಹಕರಿಗೆ ಅಥವಾ ತಮ್ಮ  ಸಂಘಟನೆಯ ಹೊಣೆಗಾರ ವ್ಯಕ್ತಿಗಳಿಗೆ ತಲುಪಿಸುತ್ತಿದ್ದರೆ ಅದರ ಬಗ್ಗೆ ಸರಿಯಾದ ಫಲಿತಾಂಶ ಗ್ರಹಿಸುವ ಅರ್ಹತೆ ಹೊಂದಿದವರು ಅದನ್ನು ಗ್ರಹಿಸಿಕೊಳ್ಳುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ, ಕೃಪೆಯು ಇಲ್ಲದಿರುತ್ತಿದ್ದರೆ ಕೇವಲ ಕೆಲವೇ  ಮಂದಿ ಹೊರತು (ನಿಮ್ಮ ದೌರ್ಬಲ್ಯಗಳ ಕಾರಣದಿಂದ) ನೀವೆಲ್ಲಾ ಶೈತಾನನ್ನು ಅನುಸರಿಸುತ್ತಿದ್ದಿರಿ.” (ಅನ್ನಿಸಾ- 83) ವಾರ್ತೆಗಳನ್ನು ಸ್ವಯಂ ನಿಯಂತ್ರಿಸುವ ಸಮೂಹವು ವಿಜಯಿಯಾಗುತ್ತದೆ. ವಾರ್ತೆಯ ಅರಾಜಕತೆಯು ಸಮಾಜದ ಶಿಥಿಲತೆಯ ಲಕ್ಷಣವಾಗಿದೆ. ವಾರ್ತಾ ಶಕ್ತಿ ಸುಸಂಸ್ಕತ ರೂಪದಲ್ಲಿ ಪ್ರವಹಿಸಬೇಕು.

ಮರ್ದಿತನಿಗೆ ಈ ವಿಷಯದಲ್ಲಿ ರಿಯಾಯಿತಿಯಿದೆಯೆಂದು ಇದೇ ಸೂಕ್ತದಲ್ಲಿ ಅಲ್ಲಾಹನು ಹೇಳುತ್ತಾನೆ, “ಮನುಷ್ಯನು ಅವಾಚ್ಯ ಪದಗಳನ್ನು ಉಚ್ಚರಿಸುವುದನ್ನು ಅಲ್ಲಾಹನು ಮೆಚ್ಚುವುದಿಲ್ಲ. ಆದರೆ ಮರ್ದಿತನು ಇದಕ್ಕೆ ಹೊರತಾಗಿದ್ದಾನೆ. ಅಲ್ಲಾಹನು  ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ (ಅನ್ನಿಸಾ- 148).

ಸದಾಚಾರದ ಪಾಠವು ಅರಾಜಕತೆಗೆ ಸೌಕರ್ಯ ಒದಗಿಸಬಾರದೆಂಬುದು ದೇವನ ಬಯಕೆಯಾಗಿದೆ. ಓರ್ವನನ್ನು ಕೆಟ್ಟದಾಗಿ ಬೈಯ್ಯಬಾರದು ಎಂಬ ವಿಷಯ ನಿಜ. ಆದರೆ ಮರ್ದಿತನಾಗಿಯೇ ಜೀವಿಸಬೇಕೆಂಬ ಅರ್ಥದಲ್ಲಿ ಇದನ್ನು ಹೇಳಲಾಗಿಲ್ಲ. ಮರ್ದಿತನು ಅವರ ಮಾತಿಗೆ ಪ್ರತಿಕ್ರಿಯಿಸಬೇಕಾಗುತ್ತದೆ. ಆಡಳಿತ ವ್ಯವ ಸ್ಥೆಗೆ ವ್ಯಕ್ತಿಯ ಖಾಸಗಿತನವನ್ನು ಇಣುಕಿ ನೋಡುವ ಅವಕಾಶವನ್ನು ಇಸ್ಲಾಮ್ ನೀಡಿಲ್ಲ.

ಬಹಿರಂಗವಾಗುವುದರಿಂದ ಯಾವುದೇ ಉಪಯೋಗವಿಲ್ಲದ ವಿಷಯಗಳನ್ನು ಮರೆಸಿ ಇಡಬೇಕು. ಸತ್ಯ ವಿಶ್ವಾಸಿಗಳ ನ್ಯೂನ್ಯತೆಯನ್ನು ಅಡಗಿಸಿಡುವವನ ನ್ಯೂನ್ಯತೆಯನ್ನು ಅಲ್ಲಾಹನು ಪರಲೋಕದಲ್ಲಿ ಅಡಗಿಸುತ್ತಾನೆ ಎಂದು ಪ್ರವಾದಿ(ಸ) ಹೇಳಿರುವರು.

ಸಾಕ್ರಟಿಸ್‍ನ ಕುರಿತು ಒಂದು ಕಥೆಯಿದೆ. ಓರ್ವರು ಸಾಕ್ರಟಿಸ್‍ನೊಡನೆ ತನಗೆ ಓರ್ವನ ವಿಷಯದಲ್ಲಿ ಮಾತನಾಡಲಿಕ್ಕಿದೆ ಎಂದು ಹೇಳಿದ. ಆಗ ಸಾಕ್ರಟಿಸ್ ಕೇಳಿದ: “ಅದನ್ನು ಹೇಳುವುದರಿಂದ ನನಗೇನಾದರೂ ಪ್ರಯೋಜನವಿದೆಯಾ?” ಆಗಂತುಕ  ಹೇಳಿದ, “ಇಲ್ಲ.” “ಹಾಗಾದರೆ ಹೇಳುವ ನಿಮಗೇನಾದರೂ ಪ್ರಯೋಜನವಿದೆಯೇ?” “ಇಲ್ಲ”. “ಮತ್ತೆ ಆ ಮಾತು ಏಕೆ ಹೇಳಬೇಕು?” ಸಾಕ್ರಟಿಸ್ ತಿರುಗಿ ಪ್ರಶ್ನಿಸಿದರು. ಉತ್ತಮ ಮಾತುಗಳು ಸಮಾಜಕ್ಕೆ ಪ್ರಯೋಜನಕರವಾಗಿರುತ್ತದೆ. ಆಡಳಿತ-ಸಾಮಾಜಿಕ  ವಿಮರ್ಶೆಗಳು ಸಮಾಜಕ್ಕೆ ಫಲಪ್ರದವಾಗುವುದರಿಂದ ಅಗತ್ಯವೆನಿಸುತ್ತದೆ. ಅಂತಹ ವಿಮರ್ಶೆಗಳು ಕುರ್‍ಆನ್‍ನ ಒಳಾರ್ಥದಲ್ಲಿ ಸೇರಿದೆ. ಇಸ್ಲಾಮಿನ ಸದಾಚಾರ ಅರಾಜಕೀಯ ಹಾಗೂ ಸನ್ಯಾಸವಲ್ಲ.

ಬೈಯ್ಯುವುದು ಎಂಬುದು ಮರ್ದಿತನ ಸೇಫ್ಟಿ ವಾಲ್ಟ್ ಎಂದು ಹೇಳಲಾಗುತ್ತದೆ. ಪ್ರಥಮವಾಗಿ ಇದನ್ನು ಕಂಡು ಹಿಡಿದವನ ಮೇಲೆ ಮಾನವ ಕೋಟಿ ಆಭಾರಿ ಯಾಗಿರಬೇಕು ಎಂದು ಆಧುನಿಕ ಮನೋಶಾಸ್ತ್ರ ಪಿತಾಮಹ ಸಿಗ್‍ಮಂಡ್ ಫ್ರಾಯ್ಡ್  ಹೇಳುತ್ತಾರೆ. ಅಕ್ರಮಕ್ಕೆ ದಾರಿಯಾಗಬೇಕಾದ ವಿಕಾರಗಳು ಹೀಗೆ ಬಾಯಿ ಮಾತಿನಿಂದ, ಬೈಯುವುದರ ಮೂಲಕ ಪರಿಹಾರವಾಗುತ್ತದೆ ಎಂಬುದು ಇದರ ಅರ್ಥ. ಆದರೆ ಮರ್ದಿತನು ಅಂತಹ ಒಂದು ಪ್ರತೀಕಾರ ನಡೆಸಲಿ ಎಂದು ಮರ್ದಕನು ಅಥವಾ ಎದುರು ಕಕ್ಷಿ ತೀರ್ಮಾನಿಸಿದರೆ ಮಾತ್ರ ಸಾಧ್ಯವಾಗುವ ಪರಿಹಾರವಿದು. ಬೈಗುಳವು ಮರ್ದಿತನಿಗೆ ಸಾಂತ್ವನ ಮಾತ್ರವಲ್ಲ, ಪ್ರಬಲರ ಅಧಿಕಾರ ಚಲಾಯಿಸುವ ಭಾಷೆಯೂ ಆಗಿದೆ. ಮರ್ದಿತನ ಭಾಷೆ ಗೌರವಯುತವಾಗಿರಬೇಕು ಎಂಬುದು ಇಸ್ಲಾಮ್ ಕಲಿಸುತ್ತದೆ. ಹೇಳುವ ವಿಷಯವು ತೀಕ್ಷ್ಣವಾಗಿರಲಿ. ಆದರೆ ಭಾಷೆಯು ಮಾನ್ಯವಾಗಿರಲಿ ಎಂದು ಹೇಳಿ ಇಸ್ಲಾಂ ಮರ್ದಿತವನ್ನು ಸಂಸ್ಕರಣೆಯಿಂದ ಜಯಿಸುವಂತೆ ಮಾಡುತ್ತದೆ. ನ್ಯಾಯ ಹಾಗೂ ಸುಸಂಸ್ಕತ ರೀತಿಯಲ್ಲಿ ಹೋರಾಡಿ ಜಯಿಸಬೇಕೆಂದು ಇಸ್ಲಾಮ್ ಮರ್ದಿತನಿಗೆ ಕಲಿಸಿದೆ.

ಹಳೆಯ ಶರೀಅತ್‍ಗಳಲ್ಲಿ ಮೌನವೂ ಉಪವಾಸದ ಭಾಗವಾಗಿತ್ತು. ಆದರೆ ಪ್ರವಾದಿಯವರು(ಸ) ಅದನ್ನು ನಿಷೇಧಿಸಿದರು. ತಾನು ಭೇಟಿಯಾದ ಓರ್ವ ಮಹಿಳೆ ಮೌನವ್ರತದಲ್ಲಿದ್ದಾಳೆಂದು ಅಬೂಬಕರ್(ರ)ರಿಗೆ ತಿಳಿದಾಗ ಅವರು ಹೇಳಿದರು, “ಇಸ್ಲಾಮ್  ಈ ಆಚಾರವನ್ನು ನಿಷೇಧಿಸಿದೆ. ಆದ್ದರಿಂದ ನೀನು ಮಾತನಾಡಬೇಕು.” ಇಸ್ಲಾಮಿನ ಸದಾಚಾರ ಸಂಹಿತೆಯಲ್ಲಿ ಮೌನದ ವಿಭಾಗಗಳಿವೆ. ಉಪವಾಸದಲ್ಲಿ ಅದು ಬಹಳ ಶಕ್ತವಾಗಿದೆ. ಆದರೆ ಅದು ಸಂಪೂರ್ಣ ಪರಿತ್ಯಾಗಕ್ಕೆ ದಾರಿ ಕೊಡಬಾರದೆಂದು ಇಸ್ಲಾಮ್  ಬಹಳ ಜಾಗೃತೆ ಪಾಲಿಸಿದೆ. ವ್ರತದಲ್ಲಿ ಮೌನವಿದೆ. ಆದರೆ ಮೌನವೇ ವ್ರತವಾಗಬಾರದು. ಮನುಷ್ಯನ ಜೀವನವು ಮಾತಿನಿಂದಲೇ ಉಂಟಾಗುತ್ತದೆ. ಆದ್ದರಿಂದ ಇಸ್ಲಾಮ್ ಅದನ್ನು ನಿಶ್ಶಬ್ಧಗೊಳಿಸುವುದಿಲ್ಲ. ಸಂಸ್ಕರಿಸುತ್ತದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …