Home / ಲೇಖನಗಳು / ಮನೆಯೇ ಆರಾಧನಾಲಯವಾಗುವಾಗ…

ಮನೆಯೇ ಆರಾಧನಾಲಯವಾಗುವಾಗ…

“ಇಹಲೋಕದಲ್ಲಿ ಒಂದು ಸ್ವರ್ಗವಿದೆ. ಆ ಸ್ವರ್ಗದಲ್ಲಿ ಪ್ರವೇಶಿಸದವನು ಪರಲೋಕದ ಸ್ವರ್ಗದಲ್ಲೂ ಪ್ರವೇಶಿಸಲಾರ.” ಹಿಂದೆ ಓರ್ವ ಜ್ಞಾನಿಯು ಹೇಳಿದ ಮಾತಿದು. ಇಹಲೋಕದ ಸ್ವರ್ಗವೇನೆಂದು ಅವರು ವಿವರಿಸಿದರು. ವಿಶ್ವಾಸ ಮತ್ತು ಅಲ್ಲಾಹನ ಸಾಮಿಪ್ಯ ಪಡೆಯುವ ಅಲೌಕಿಕ ಮಾಧುರ್ಯವದು. ಹೇಳಲು ಸಾಧ್ಯವಾಗದಂತಹ ಆಧ್ಯಾತ್ಮಿಕ ಅನುಭವ. ಕುರ್‍ಆನ್‍ನ ಭಾಷೆಯಲ್ಲಿ ಹೇಳುವುದಾದರೆ ಆಗ ಮಾತ್ರ  ಹೃದಯವು ಶಾಂತವಾಗುತ್ತದೆ.

ಮಹಾನುಭಾವರಾದ ಓರ್ವ ವಿದ್ವಾಂಸರನ್ನು ಆಡಳಿತಗಾರರು ಅನ್ಯಾಯವಾಗಿ ಸೆರೆ ಮನೆಗೆ ತಳ್ಳಿದಾಗ ಆ ವ್ಯಕ್ತಿ ಕೇಳಿದ ಪ್ರಶ್ನೆಯೊಂದಿದೆ- ಸ್ವರ್ಗವು ನನ್ನ ಹೃದಯಕ್ಕೆ ಸೇರಿಕೊಂಡೇ ನಿಂತಿದೆ. ಅದನ್ನು ಬೇರ್ಪಡಿಸಲು ನಿಮ್ಮಿಂದ ಸಾಧ್ಯವೇ? ನನ್ನನ್ನು ಏಕಾಂತ ವಾಸದಲ್ಲಿರಿಸಿ, ನನ್ನ ಮಾನಸಿಕ ಅಸ್ವಸ್ಥತೆಯನ್ನು ಇಲ್ಲದಂತೆ ಮಾಡುತ್ತದೆಯೆಂದು ನೀವು ಭಾವಿಸಿದ್ದೀರಾ?  ಸೆರೆಮನೆಯೆಂಬುದು ನನಗೆ ನನ್ನ ದೇವನೊಂದಿಗೆ ಸಂಪರ್ಕ ಸಾಧಿಸಲು ಸಿಗುವ ಸುಲಭವಾದ ಅವಕಾಶವಾಗಿದೆ. ಅದೇ ರೀತಿ ತನ್ನ ಸೃಷ್ಟಿಕರ್ತನೊಂದಿಗೆ ಸಂಬಂಧ ಸ್ಥಾಪಿಸಲು ರಮಝಾನ್ ತಿಂಗಳು ವಿಶ್ವಾಸಿಗೆ ಅವಕಾಶ ನೀಡುತ್ತದೆ.

ಸಕಲ ಲೌಕಿಕ ಪ್ರಲೋಭನೆಗಳಿಂದ ಮುಕ್ತವಾದರೆ ಮಾತ್ರ ಮನಸ್ಸಿಗೆ ಆ ಸ್ಥಿತಿಗೆ ತಲುಪಲು ಸಾಧ್ಯ. ಮನುಷ್ಯನಿಗೆ ಆತ್ಮ ಮತ್ತು ಶರೀರವಿದೆ. ಆತ್ಮಕ್ಕೆ ಪರಲೋಕದಲ್ಲೂ ಲೋಕದಲ್ಲೂ ಸಂಬಂಧವಿದೆ. ನಮ್ಮ ಶರೀರಕ್ಕೆ ಈ ಭೂಮಿಯ ಮೇಲೆ. ಶರೀರದಿಂದ ಆತ್ಮವು ಬೇರ್ಪಟ್ಟಾಗ, ದೇಹವು ಮಣ್ಣಿನಲ್ಲಿ ಕರಗುತ್ತದೆ. ಮನುಷ್ಯರಲ್ಲಿ ಎರಡು ರೀತಿಯ ಜನರನ್ನು ನಮಗೆ ಇಲ್ಲಿ ಕಾಣಲು ಸಾಧ್ಯವಿದೆ. ಒಂದನೆಯವರ  ಚಿಂತನೆಗಳು, ಕಾರ್ಯಚಟುವಟಿಕೆಗಳೆಲ್ಲವೂ ಶರೀರಕ್ಕೆ ಸಂಬಂಧಿಸಿರುತ್ತದೆ. ಶರೀರ ಮತ್ತು ಅದರ ಶಕ್ತಿ ಸಾಮಥ್ರ್ಯಗಳನ್ನೆಲ್ಲಾ ಆತ್ಮದ ಪೋಷಣೆಗೆ, ಬೆಳವಣಿಗೆಗೆ ಉಪಯೋಗಿಸುವವರು ಎರಡನೇ ವಿಭಾಗದವರು. ದೇಹೇಚ್ಛೆಯ ವಿರುದ್ಧದ ಹೋರಾಟದ ವಿಜಯವು ಮನುಷ್ಯನನ್ನು ಭೂಮಿಯಲ್ಲಿ ದೇವನ ಪ್ರತಿನಿಧಿಯಾಗಿಸುತ್ತದೆ. ಉಪವಾಸದಿಂದ ಇಂತಹ ಆತ್ಮ ನಿಯಂತ್ರಣ ಸಾಧ್ಯವಾಗುವುದಿಲ್ಲವೆಂದಾದರೆ ಹಗಲಿನಲ್ಲಿ ಹಸಿವು ಬಾಯಾರಿಕೆಯಿಂದ ಏನೂ ಫಲವಿಲ್ಲವೆಂದು ಪ್ರವಾದಿಯವರು(ಸ) ಹೇಳಿರುವರು.

ಜೀವನವು ಕೇವಲ ದೇವಸ್ಮರಣೆ, ಆರಾಧನೆ, ಧ್ಯಾನಕ್ಕೆ ಮಾತ್ರ ಸೀಮಿತವಾಗಿರಿಸಬೇಕಾದ ದಿನಗಳು. ಆ ದಿನಗಳಲ್ಲಿ ಹೊರಗೆಲ್ಲೂ ಹೋಗದೆ ಮಸೀದಿಯಲ್ಲೇ ಉಳಿದುಕೊಳ್ಳುವುದು ಪ್ರವಾದಿಯವರ(ಸ)  ರೀತಿಯಾಗಿತ್ತು. ಆ ಧ್ಯಾನವೇ ಇಅïತಿಕಾಫ್ ಎಂದು ಹೇಳಲಾಗುತ್ತದೆ. ಸಾವಿರಾರು ವರ್ಷಗಳಿಂದ ಮುಸ್ಲಿಮ್ ಲೋಕವು ಅದನ್ನು ಮುಂದುವರಿಸುತ್ತಾ ಬಂದಿದೆ. ಆದರೆ ದೌರ್ಭಾಗ್ಯವಶಾತ್  ಕೋವಿಡ್-19 ಭೀತಿಯಿಂದ ಮಸೀದಿಗಳೆಲ್ಲವೂ ಮುಚ್ಚಲ್ಪಟ್ಟಿದೆ. ಇಅïತಿಕಾಫ್ ಮಸೀದಿಯಲ್ಲಿ ಸಾಧ್ಯವಾಗದ ಕಾರಣ ಮನೆಯಲ್ಲೇ ಆಚರಿಸಲಾಗಿದೆ.

ಫರೋವನ ದಬ್ಬಾಳಿಕೆಯಿಂದ ಆರಾಧನಾಲಯಗಳಿಗೆ ಹೋಗಲು ಅಸಾಧ್ಯವಾದ ಪರಿಸ್ಥಿತಿ ಬಂದಾಗ ಮನೆಯನ್ನೇ ಆರಾಧನಾಲಯಗಳಾಗಿ ಮಾಡಲು ಪ್ರವಾದಿ ಮೂಸಾ(ಅ) ಹೇಳಿದ್ದರಲ್ಲವೇ?  ಕೋವಿಡ್‍ನ ಭೀತಿ ತೊಲಗುವವರೆಗೂ ಮಸೀದಿಯಲ್ಲಿ ನಿರ್ವಹಿಸುವ ಕರ್ಮಗಳು ನಮ್ಮ ಮನೆಗಳಲ್ಲಿ ನಿರ್ವಹಿಸಲ್ಪಡುತ್ತದೆಂದು ಖಾತ್ರಿ ಪಡಿಸಲು ನಮಗೆ ಸಾಧ್ಯವಾಗಬೇಕು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …