Home / ಲೇಖನಗಳು / ಪ್ರವಾದಿ ಲೂತ್‍ರ(ಅ) ಜನತೆಯಲ್ಲಿದ್ದ ಕೆಡುಕು

ಪ್ರವಾದಿ ಲೂತ್‍ರ(ಅ) ಜನತೆಯಲ್ಲಿದ್ದ ಕೆಡುಕು

@ ಎಸ್ಸೆಮ್ಕೆ , ಅನುವಾದ: ಎ.ಎಂ.

“ನಾವು ಲೂತರನ್ನು ಸಂದೇಶವಾಹಕರನ್ನಾಗಿ ಮಾಡಿ ಕಳುಹಿಸಿದೆವು. ಅವರು ತಮ್ಮ ಜನಾಂಗದವರನ್ನುದ್ದೇಶಿಸಿ ಹೇಳಿದ ಸಂದರ್ಭವನ್ನು ಸ್ಮರಿಸಿರಿ.   ನೀವು ನಿಮಗಿಂತ ಮುಂಚೆ ಜಗತ್ತಿನಲ್ಲಿ ಇನ್ನಾರೂ ಮಾಡದಿರುವಂಥ ಅಶ್ಲೀಲ ಕಾರ್ಯವನ್ನೆಸಗುವ ಲಜ್ಜಾಹೀನರಾಗಿ ಬಿಟ್ಟಿರಾ? ನೀವು ಸ್ತ್ರೀಯರನ್ನು ಬಿಟ್ಟು ಪುರುಷರೊಂದಿಗೆ ನಿಮ್ಮ ಕಾಮಾಭಿಲಾಷೆಯನ್ನು ನೀಗಿಸಿಕೊಳ್ಳುವಿರಾ? ವಾಸ್ತವದಲ್ಲಿ ನೀವು ಸ್ಪಷ್ಟವಾಗಿ ಹದಮೀರುವವರಾಗಿರುತ್ತೀರಿ.” (7:80-81)

“ನಾವು ಲೂತರನ್ನು ಕಳುಹಿಸಿದೆವು. ಅವರು ತಮ್ಮ ಜನಾಂಗದೊಡನೆ ಹೇಳಿದ ಆ ಸಂದರ್ಭವನ್ನು ಸ್ಮರಿಸಿರಿ; ಮುಂಚೆ ಲೋಕವಾಸಿಗಳಲ್ಲಿ ಯಾರೂ ಮಾಡಿರದಂತಹ ಅಶ್ಲೀಲ ಕಾರ್ಯವನ್ನು ನೀವು  ಮಾಡುತ್ತೀರಿ. ನೀವೇನು ಪುರುಷರ ಬಳಿಗೆ ಹೋಗುತ್ತೀರಾ? ದರೋಡೆ ಮಾಡುತ್ತೀರಾ? ಹಾಗೂ ನಿಮ್ಮ ಸಮಾರಂಭಗಳಲ್ಲಿ ದುಷ್ಕರ್ಮಗಳನ್ನು ಎಸಗುತ್ತೀರಾ? ಅದಕ್ಕೆ “ನೀನು ಸತ್ಯವಾದಿಯಾಗಿದ್ದರೆ ಅಲ್ಲಾಹನ ಯಾತನೆಯನ್ನು ತಾ” ಎನ್ನುವ ಹೊರತು ಅವರ ಜನಾಂಗದ ಬಳಿ ಬೇರೆ ಉತ್ತರವಿರಲಿಲ್ಲ.” (29: 28)

ಆದರೆ ಆ ಜನಾಂಗದ ಉತ್ತರ “ಇವರನ್ನು ನಮ್ಮ ನಾಡಿನಿಂದ ಹೊರಕ್ಕೆ ದಬ್ಬಿರಿ. ಭಾರೀ ಪರಿಶುದ್ಧರಾಗುತ್ತಾರಿವರು! ಎಂಬುದರ ವಿನಾ ಇನ್ನೇನೂ ಇರಲಿಲ್ಲ.”
(7:82)

“ಆಗ ಅವರು  ಲೂತ್, ನೀನು ಈ ಮಾತುಗಳನ್ನು ತೊರೆಯದಿದ್ದರೆ ನಮ್ಮ ನಾಡಿನಿಂದ ಹೊರಕ್ಕೆ ಅಟ್ಟಲ್ಪಟ್ಟವರ ಸಾಲಿಗೆ ನೀನೂ ಸೇರುವೆ” ಎಂದರು.” (26: 167)

“ಆದರೆ ಅವರ ಜನಾಂಗದ ಉತ್ತರವು-“ಲೂತರ ಮನೆಯವರನ್ನು ನಿಮ್ಮ ನಾಡಿನಿಂದ ಹೊರಕ್ಕಟ್ಟಿ ಬಿಡಿರಿ. ಮಹಾ ಪರಿಶುದ್ಧರಾಗ ಹೊರಟಿದ್ದಾರಿವರು!”
ಎಂದಿಷ್ಟೇ ಹೊರತು ಬೆರೇನೂ ಅಗಿರಲಿಲ್ಲ.” (27: 56).

ಅದರೊಂದಿಗೆ ಸದೂಂ ಸಮೂಹ ಪ್ರವಾದಿ ಲೂತರಿಗೆ ಅವರು ಎಚ್ಚರಿಕೆ ನೀಡಿದ ಶಿಕ್ಷೆಯನ್ನು ಕೊಂಡು ಬರಲು ಸವಾಲು ಹಾಕಿದರು.
“ನೀನು ಸತ್ಯವಾದಿಯಾಗಿದ್ದರೆ  ಅಲ್ಲಾಹನ ಯಾತನೆಯನ್ನು ತಾ.” (29:29)

ಆಗ ಪ್ರವಾದಿ ಲೂತರು ಅಲ್ಲಾಹನ ಸಹಾಯ ಯಾಚಿಸಿದರು.
“ಆಗ ಲೂತರು, ನನ್ನ ಪ್ರಭೂ, ಈ ಕಿಡಿಗೇಡಿಗಳ ವಿರುದ್ಧ ನನಗೆ ಸಹಾಯ ನೀಡು ಎಂದರು.” (29: 29)

“ಪ್ರಭೂ ನನ್ನನ್ನೂ ನನ್ನ ಕುಟುಂಬವನ್ನೂ ಇವರು ಮಾಡುತ್ತಿರುವ ದುರಾಚಾರಗಳಿಂದ ರಕ್ಷಿಸು.” (26-169)

ಅದರೊಂದಿಗೆ ಅಲ್ಲಾಹು ಸದೂಂ ಸಮುದಾಯವನ್ನು ನಾಶಗೊಳಿಸಲು ತೀರ್ಮಾನಿಸಿದನು. ಅದಕ್ಕಾಗಿ ದೇವಚರರನ್ನು ನಿಯೋಜಿಸಿದನು. ಅವರು ಪ್ರವಾದಿ ಇಬ್ರಾಹೀಮರಿಗೆ ಸಂತಾನಗಳ ಕುರಿತು ಶುಭವಾರ್ತೆ ತಿಳಿಸಲು ಮೊದಲು ಹೋದರು. ನಂತರ ತಮ್ಮ ದೌತ್ಯವನ್ನು ಪ್ರವಾದಿ ಇಬ್ರಾಹೀಂ(ಅ)ರಿಗೆ ವಿವರಿಸಿದರು. ಆಗ ಪ್ರವಾದಿ ಇಬ್ರಾಹೀಮರು ನಾಶವಾಗಲಿರುವ ಸದೂಂ ಸಮುದಾಯಕ್ಕಾಗಿ  ಅಲ್ಲಾಹನೊಡನೆ ತರ್ಕಿಸಿದರು. ಲೂತ್‍ರ ಜೊತೆ ಇರುವವರ ಅವಸ್ಥೇ ಏನಾಗುತ್ತದೆ ಎಂದು ಕೇಳಿದರು.

“ನಮ್ಮ ದೂತರು ಇಬ್ರಾಹೀಮರ ಬಳಿ ಸುವಾರ್ತೆಯಂದಿಗೆ ಬಂದು ತಲುಪಿದಾಗ ಅವರು ಇವರೊಡನೆ ನಾವು ಈ ನಾಡಿನ ಜನರನ್ನು ನಾಶಗೊಳಿಸುವವರಿದ್ದೇವೆ, ಇದರ ನಿವಾಸಿಗಳು ಮಹಾ ಅಕ್ರಮಿಗಳಾಗಿ ಬಿಟ್ಟಿದ್ದಾರೆ” ಎಂದರು.

“ಆಗ ಇಬ್ರಾಹೀಮರು ಅಲ್ಲಿ ಲೂತರಿದ್ದಾರಲ್ಲಾ! ಎಂದಾಗ ಅವರು,  ಅಲ್ಲಿ ಯಾರು ಯಾರಿದ್ದಾರೆಂಬುದನ್ನು ನಾವು ಚೆನ್ನಾಗಿ ಬಲ್ಲೆವು. ನಾವು ಅವರನ್ನೂ ಅವರ ಪತ್ನಿಯ ಹೊರತು ಅವರ ಮನೆಯವರೆಲ್ಲರನ್ನೂ ರಕ್ಷಿಸಿಕೊಳ್ಳುವೆವು ಎಂದರು. ಅವರ ಪತ್ನಿ ಹಿಂದೆ ಉಳಿಯುವವರಲ್ಲಾಗಿದ್ದಳು.” (29: 31-32)

” ಹೀಗೆ ಇಬ್ರಾಹೀಮ್‍ರ  ಭಯ ನೀಗಿದಾಗ ಮತ್ತು (ಸಂತತಿಯುಂಟಾಗ ಬಹುದೆಂಬ ಶುಭ ವಾರ್ತೆಯಿಂದ) ಅವರಿಗೆ ಸಂತೋಷವಾದಾಗ ಅವರು ನಮ್ಮೊಡನೆ ಲೂತ್ ಜನಾಂಗದ ಕುರಿತು ಜಗಳ  ಆರಂಭಿಸಿದರು.” (11: 74)

ಇಬ್ರಾಹೀಮರು ಕೇಳಿದರು,  “ಓ ದೇವ ದೂತರೇ, ನೀವು ಯಾವ ಕಾರ್ಯಾಚರಣೆಗಾಗಿ ಬಂದಿರುವಿರಿ?” ಎಂದು ಕೇಳಿದರು.”

“ಆಗ ಅವರು, ನಾವು ಒಂದು ಅಪರಾಧಿ ಜನಾಂಗದ ಕಡೆಗೆ ಕಳುಹಿಸಲ್ಪಟ್ಟಿದ್ದೇವೆ. ಆದರೆ ಲೂತ್‍ರ ಮನೆಯವರು ಇದಕ್ಕೆ ಹೊರತಾಗಿದ್ದಾರೆ. ಅವರ ಮನೆಯವರೆಲ್ಲರನ್ನೂ ನಾವು ರಕ್ಷಿಸುವೆವು ಲೂತರ ಪತ್ನಿಯ ಹೊರತು: ಆಕೆ ಹಿಂದೆ ಉಳಿಯುವವರಲ್ಲಿ ಸೇರಿದವಳೆಂದು ನಾವು ವಿಧಿಸಿದ್ದೇವೆ (ಎಂದು ಅಲ್ಲಾಹನು ಹೇಳುತ್ತಾನೆ) ಎಂದರು. (15: 57-60)

ಮನುಷ್ಯ ರೂಪದಲ್ಲಿ ದೇವಚರರು ಪ್ರವಾದಿ ಲೂತರ ಜನತೆಯೆಡೆಗೆ ಬಂದರು. ಪ್ರವಾದಿ ಲೂತರು ಅತಿಥಿಗಳೆಂದು ಭಾವಿಸಿ ಅವರನ್ನು ಕಾಮಪೂರ್ತಿಗೆ ಬಳಸಲು ಜನರು ಶ್ರಮಿಸಿದರು. ಲೂತರ ಆ  ಹೀನ ಶ್ರಮದಿಂದ ಜನರನ್ನು ಹಿಂದೆ ಸರಿಸಲು ನೋಡಿದರು. ಅವಸಾನವಾಗಿ ಆ ಜನರು ಅಲ್ಲಾಹನ ಕಠಿಣ ಶಿಕ್ಷೆಗೀಡಾದರು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …