- ಝಹೀರ್ ಲಲಿತ್ಪುರಿ
ಚಾರಿತ್ರ್ಯವಿಲ್ಲದಿರುವುದು ಮಾನವ ಸಮಾಜದಲ್ಲಿ ಕಳಂಕವಾಗಿದೆ. ಮಾನವತೆಗೆ ಚಾರಿತ್ರ್ಯವಂತ ಜನರ ಆವಶ್ಯಕತೆಯಿದೆ. ಪ್ರಚಲಿತ ಸಮಾಜದಲ್ಲಿ ಹೆಚ್ಚಳವಾಗಿರುವ ಅನೈತಿಕತೆ, ಭ್ರಷ್ಟಾಚಾರ, ಅನಾಚಾರ, ದುರಾಚಾರ ಮತ್ತು ವ್ಯಭಿಚಾರ ಚಾರಿತ್ರ್ಯಹೀನತೆಯ ತತ್ವವಾಗಿದೆ. ಇದಕ್ಕೆ ಮೂಲ ಕಾರಣ ಮನುಷ್ಯರಲ್ಲಿ ದೇವಭಯದ ಕೊರತೆ ಇರುವುದು. ಇಂದು ಸಾಮಾನ್ಯ ನೆಲೆಯಲ್ಲಿ ಎಲ್ಲರಲ್ಲಿಯೂ ಅವರ ಯಾವುದೇ ತಪ್ಪುಗಳಿಗೆ ಶಿಕ್ಷೆ ನೀಡುವವರಿಲ್ಲ ಎಂಬ ಅಭಿಪ್ರಾಯ ದಟ್ಟವಾಗಿದೆ. ಇವರ ಈ ಅಂಧವಿಶ್ವಾಸವು ಅವರನ್ನು ತಮ್ಮ ಪಾಪಗಳಿಂದ ತಡೆಯದೆ ಅದನ್ನೆಸಗಲು ಉತ್ತೇಜನ ಸಿಕ್ಕಿರುವಂತೆ ಆಗಿದೆ. ವಾಸ್ತವದಲ್ಲಿ ಅನಾಚಾರ, ಅನ್ಯಾಯ, ವ್ಯಭಿಚಾರ ಇಂತಹ ಕೆಡುಕಿಗಳಿಂದ ತಮ್ಮನನು ರಕ್ಷಿಸಿಕೊಳ್ಳುವ ಜನರು ದೇವ ಭಯ ಉಳ್ಳವರಾಗಿದ್ದಾರೆ. ಇಸ್ಲಾಮ್ ವಿಶ್ವಾಸಿಗೆ ಮುತ್ತಕಿ ಎಂದಿದೆ. ಅವನು ಸ್ವಯಂ ಕೆಟ್ಟ ಕಾರ್ಯ ಮತ್ತು ಅಪರಾಧಗಳಿಂದ ತನ್ನನ್ನು ರಕ್ಷಿಸಿಕೊಳ್ಳುವವನಾಗಿದ್ದಾನೆ.
ಚಾರಿತ್ರ್ಯರಾಹಿತ್ಯವನ್ನು ಸಮಾಜದ ಅಭಿಶಾಪವೆಂದು ಕರೆಯಬಹುದಾಗಿದೆ. ಅದು ಕೇವಲ ಹೆಂಗಸರೊಂದಿಗೆ ನಡೆಸುವ ಲೈಂಗಿಕ ಅಪರಾಧ ಮಾತ್ರವಲ್ಲ. ಎಲ್ಲ ರೀತಿಯ ಅನೈತಿಕತೆ ಸಮಾಜ ವಿರೋಧಿ ಕಾರ್ಯಗಳು ಮಾನವ ಚಾರಿತ್ರ್ಯಕ್ಕೆಸಗುವ ದೋಷವಾಗಿದೆ. ಆದರೂ ಮಹಿಳೆಯರ ಮೇಲೆ ನಡೆಸುವ ದುಷ್ಕರ್ಮ, ಬಲಾತ್ಕಾರ, ವ್ಯಭಿಚಾರ, ಪರಸ್ತ್ರೀ ಸಂಗ ವ್ಯೇಶ್ಯಾವೃತ್ತಿ ಮುಂತಾದುವು ಕ್ರೂರ ಪಾಪವಾಗಿದೆ. ಇದರ ಕಾರಣದಿಂದ ಮನುಷ್ಯ ಕೇವಲ ಸಮಾಜದ ದೃಷ್ಟಿಯಲ್ಲಿ ಕುಸಿಯುವುದು ಮಾತ್ರವಲ್ಲ, ಸ್ವಯಂ ತನ್ನ ದೃಷ್ಟಿಯಲ್ಲಿಯೂ ಕುಸಿಯುತ್ತಾನೆ. ಆದರೂ ಕೂಡಾ ಇದು ಸಮಾಜದಲ್ಲಿ ಎಷ್ಟು ನಿರ್ಲಜ್ಜವಾಗಿ ಮುಂದುವರಿಯುತ್ತಿದೆ ಎಂದರೆ ಇದನ್ನೆಸಗುವ ಮನುಷ್ಯ ತನ್ನನ್ನು ಸ್ವಲಪವೂ ತಪ್ಪಿಸ್ಥ ಎಂದು ತಿಳಿಯುವುದಿಲ್ಲ ಎಂದು ಅನಿಸುತ್ತದೆ. ಕೆಲವೊಮ್ಮ ಇಂತಹ ಅಪರಾಧವೆಸಗುವುದು ತನ್ನ ಪ್ರತಿಷ್ಠೆ ಎಂದು ತಿಳಿದಿರುವನೋ ಎಂದು ಭಾವಿಸುವಂತಿದೆ. ಇದಕ್ಕಿಂತ ಹೆಚ್ಚಾಗಿ ಅಪರಾಧ ಮಾಡಿದ ಮೇಲೆ ಸಾಮಾಜದಲ್ಲಿ ಆ ಮನುಷ್ಯನ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ ಅಂತಹ ಅಪರಾಧಗಳೂ ಇವೆ.
ಯಾವುದೇ ಅಪರಾಧ ಮಾನವ ಕಾನೂನಿನಲ್ಲಿ ಅಪರಾಧವೋ ಅದು ದೇವನ ಕಾನೂನಿನಲ್ಲಿಯೂ ಅಪರಾಧವೇ ಆಗಿದೆ. ಇಂದಿನ ಸಮಾಜದಲ್ಲಿ ಅದು ಅಪರಾಧದ ವ್ಯಾಪ್ತಿಯಿಂದ ಹೊರಗಿದ್ದರೂ ಅಪರಾಧ ಅಪರಾಧವೇ ಆಗಿರುತ್ತದೆ. ಆರ್ಥಿಕ ಅಪರಾಧವಾದ ಕಳ್ಳತನ, ದರೋಡೆ, ಕಳ್ಳ ಸಂತೆ, ಲಂಚ, ಮತ್ತು ಅಕ್ರಮ ಗಳಿಕೆ, ವಿದ್ಯುತ್ತ್ ಕಳ್ಳತನ, ನಕಲಿ ಔಷಧ, ಆಹಾರ ಪದಾರ್ಥಗಳಲ್ಲಿ ಕಲಬೆರೆಕೆ, ವಂಚನೆ, ವಿಶ್ವಸ್ಥ ವಸ್ತು ದುರ್ಬಳಕೆ ಮುಂತಾದವು ಕೂಡ ಚಾರಿತ್ರ್ಯ ದೋಷವಾಗಿದೆ. ಇವೆಲ್ಲ ಕಾನೂನಿನ ರಿತ್ಯಾ ಅಪರಾಧವಾಗಿದೆ. ದೇವನ ಮುಂದೆಯೂ ಅಪರಾಧವೇ ಆಗಿದೆ. ದೇವನ ಮೇಲೆ ವಿಶ್ವಾಸ ಇಲ್ಲದ ಕಾರಣ ಇಂದು ಅನೇಕ ಗೌರವಾನ್ವಿತರು ಎಂದು ಹೇಳುವವರೇ ಇದೆನ್ನೆಲ್ಲ ಬಹಿರಂಗವಾಗಿ ಮಾಡಿಯೇ ಜನಜೀವನವನ್ನು ಅಪಾಯದಲ್ಲಿ ಸಿಲುಕಿಸಿದ್ದಾರೆ.
ಬಲಿಷ್ಠ ಕಾನೂನು ಮತ್ತು ಸಮಾಜದ ಮುಂದೆ ಅವಮಾನಿತನಾಗುವೆ ಎಂಬ ಹೆದರಿಕೆ ಮೊದಲೆಲ್ಲ ಇಂತಹ ಅಪರಾಧ ಕೃತ್ಯಗಳನ್ನು ಮಾಡುವುದರಿಂದ ತಡೆಯತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಂದು ಮನುಷ್ಯನಿಗೆ ಸಮಾಜದ ಹೆದರಿಕೆಯೂ ಇಲ್ಲ ದೇವ ಭಯವೂ ಇಲ್ಲ ಎಂಬ ಪರಿಸ್ಥಿತಿ ಸಂಜಾತಗೊಂಡಿದೆ. ಒಂದು ವೇಳೆ ಪಾಪವೆಸಗಿ ಅಥವಾ ಅಪರಾಧವೆಸಿಗಿದರೂ ಸಾಮಾನ್ಯ ರೀತಿಯ ಶಿಕ್ಷೆ ಆಗಿಬಿಡುವುದರಿಂದ ಅದನ್ನೆಸಗುವುದರಿಂದ ಅಂತಹ ಜನರನ್ನು ತಡೆಯುವುದಿಲ್ಲ. ಕೆಲವು ಅಪರಾಧಗಳು ಇನ್ನು ಮುಂದುವರಿದು ಭಾರೀ ಅಪರಾಧವೆಸಗುವುದಕ್ಕೆ ಪ್ರೇರಣೆ ನೀಡುವಂತಹ ಅಪರಾಧಗಳು ಇವೆ. ಕೆಲವೊಮ್ಮೆ ಅಪರಾಧ ಜಗತ್ತು ಅಂಡರ್ವಲ್ರ್ಡ್ ಮತ್ತು ಮಾಫಿಯಾ ಕೂಟಕ್ಕೆ ಆಧಾರವಾಗುವ ಶರಾಬು, ಜೂಜು, ಇವುಗಳನ್ನು ಮಡುವುದಕ್ಕೆ ಸರಕಾರವೇ ಲೈಸೆನ್ಸ್ ನೀಡುತ್ತದೆ. ಕಾನೂನು ಬಾಹಿರವಾಗಿ ಇವುಗಳನ್ನು ಮಾಡಿದರೆ ಮಾಮೂಲಿ ಶಿಕ್ಷೆ ಮಾತ್ರ ಆಗುವುದು.
ಜಗತ್ತಿನಲ್ಲಿ ಅಪರಾಧ ಅಥವಾ ಸಮಾಜ ವಿರೋಧಿ ಕೆಲಸಗಳಲ್ಲಿ ಶಾಮೀಲಾದ ವ್ಯಕ್ತಿ ಕಾನೂನಿನ ಮುಷ್ಟಿಯಿಂದ ಪಾರಾದ ಉದಾಹರಣೆಗಳು ಕೂಡಾ ಸಾಕಷ್ಟು ದೊರೆಯುತ್ತವೆ.ಸಮಾಜದಲ್ಲಿ ಕೂಡಾ ಅಂತಹವರ ಗೌರವಾದಾರಗಳಿಗೆ ಯಾವುದೇ ಕೊರತೆ ಆಗಿರುವುದಿಲ್ಲ. ಮಾತ್ರವಲ್ಲ ಅಂತಹವರಿಗೆ ಸಮಾಜದಲ್ಲಿ ಅಧಿಕ ಮನ್ನಣೆ ಪ್ರತಿಷ್ಠೆಗಳು ಲಭಿಸುತ್ತವೆ. ವಾಸ್ತವದಲ್ಲಿ ಸಜ್ಜನರು ಚಾರಿತ್ರ್ಯವಂತರು ಪ್ರಮಾಣಿಕರಿಗೆ ಇಂದು ಅಂತಹ ಗೌರಗಳನ್ನು ಸಮಾಜ ನೀಡುವುದಿಲ್ಲ ಎಂದೇ ಹೇಳಬಹುದು. ಹಣವನ್ನು ಯಾವುದೇ ರೀತಿಯಲ್ಲಿ ಸಂಪಾದಿಸಿರಲಿ ಅಂತಹ ಹಣವಿದ್ದವರಿಗೆ ಮಾತ್ರ ಇಂದು ಸಮಾಜ ಗೌರವ ಕೊಡುವ ಕೆಟ್ಟ ಪದ್ಧತಿ ಸಮಾಜದಲ್ಲಿ ರೂಢಿಗೆ ಬಂದಿದೆ. ಇದು ಆಧುನಿಕ ಭೌತಿಕತೆಯ ದುರಂತವಾಗಿದೆ. ಸಮಾಜದಲ್ಲಿ ಅವಮಾನವಾಗಲಿ ಕಾನೂನಿನ ಭೀತಿಯಾಗಲಿ ಇಂದು ಜನರು ಪಾಪವೆಸಗುವುದರಿಂದ ಜನರನ್ನು ಹಿಂಜರಿಸುವುದಿಲ್ಲ!
ಆದರೆ ಧಾರ್ಮಿಕ ಪರಲೋಕ ಪರಿಕಲ್ಪನೆ ಮತ್ತು ಅಲ್ಲಿ ಇಲ್ಲೆಸಗಿದ ಎಲ್ಲ ಪಾಪ, ಅಪರಾಧಗಳಿಗೆ ಕಠಿಣ ಶಿಕ್ಷೆ ಇದೆ ಎಂಬ ಪರಿಜ್ಞಾನ ಗಟ್ಟಿಯಾದರೆ ಮಾತ್ರ ಮನುಷ್ಯನನ್ನು ಪಾಪ ಅಪರಾಧಗಳಿಂದ ತಡೆಯಲು ಸಾಧ್ಯವಿದೆ. ಧಾರ್ಮಿಕ ಸಿದ್ಧಾಂತಗಳು ಮನುಷ್ಯನೊಳಗೆ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಹುಟ್ಟು ಹಾಕುತ್ತವೆ. ಅದರ ಪ್ರಕಾರ ಜೀವನ ನಡೆಸುವವನು ಅಪರಾಧವನ್ನು ಎಸಗುವುದಿಲ್ಲ. ಮಾತ್ರವಲ್ಲ ಇಂತಹ ಧಾರ್ಮಿಕರು ದೇವನ ಕಾನೂನಿನಂತೆ ಜೀವಿಸಿ ದೇವನನ್ನು ಪ್ರಶಂಸಿಸಿ ಬದುಕುವ ಸಜ್ಜನರಾಗಿರುವರು. ಹಾಗಾಗಿ ಅವರು ಯಾವುದೇ ಕೆಟ್ಟ ಕಾರ್ಯವನ್ನು ಮಾಡಲು ಹಿಂಜರಿಯುವರು.
ಜಗತ್ತಿನ ವಿಭಿನ್ನ ಧರ್ಮಗ್ರಂಥಗಳು ತಮ್ಮ ಉಪದೇಶಗಳಲ್ಲಿ ವಿಭಿನ್ನ ಅಪರಾಧ ಕೃತ್ಯಗಳಿಗೆ ದೇವನ ಬಳಿ ಶಿಕ್ಷೆ ಇದೆ ಎಂದು ಸೂಚಿಸಿವೆ. ಮನುಷ್ಯ ಸತ್ತ ಮೇಲೆ ಇರುವ ಜೀವನದಲ್ಲಿ ಈ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಏಕದೇವವಾದ ಮತ್ತು ಬಹುದೇವವಾದ ಇವೆರಡರ ಪ್ರಕಾರವೂ ದೇವನಲ್ಲಿ ವಿಶ್ವಾಸವನ್ನು ಇಡುತ್ತಾರೆ. ಈ ಜಗತ್ತು ಮತ್ತು ಪರಲೋಕದ ಒಡೆಯ ದೇವನೇ ಎಂದು ನಂಬುತ್ತಾರೆ. ಅವನೇ ಮನುಷ್ಯನನ್ನು ಸೃಷ್ಟಿಸಿದನು ಮತ್ತು ಪರಿಪಾಲಿಸುವವನು. ಜಗತಿನ ಸೃಷ್ಟಿಕರ್ತ ಮತ್ತು ಸಂಚಾಲಕನಾದ ಆ ದೇವನೇ ಮನುಷ್ಯನ ಮಾರ್ಗದರ್ಶಕ ಕೂಡ ಆಗಿದ್ದಾನೆ. ಅವನು ಮನುಷ್ಯನನ್ನು ಸೃಷ್ಟಿಸಿ ಜಗತ್ತಿನಲ್ಲಿ ಜೀವಿಸುವ ಅವಕಾಶವನ್ನು ಕೊಟ್ಟಿದ್ದಾನೆ. ಜೀವನ ಸಂಪನ್ಮೂಲಗಳನ್ನೂ, ಸುಖ ಸೌಲಭ್ಯಗಳನ್ನೂ ಅವನೇ ನೀಡಿದನು. ಬದುಕುವ ರೀತಿಯನ್ನು ಕೂಡಾ ಅವನೇ ತಿಳಿಸಿದನು. ಆದ್ದರಿಂದ ಅವನು ತೋರಿಸಿದ ಮಾರ್ಗದಲ್ಲಿ ನಡೆಯುವುದು ಮನುಷ್ಯರ ಕರ್ತವ್ಯ ಆಗಿದೆ.
ಇಸ್ಲಾಮ್ ದೈವಿಕ ಗ್ರಂಥ ಪವಿತ್ರ ಕುರ್ಆನ್ ಮತ್ತು ದೇವ ಸಂದೇಶವಾಹಕರಾದ ಪ್ರವಾದಿ ಮುಹಮ್ಮದ್(ಸ)ರ ಶಿಕ್ಷಣಗಳು ಮಾನವರ ಚಾರಿತ್ರ್ಯ ನಿರ್ಮಾಣದತ್ತ ಹೆಚ್ಚಿನ ಒತ್ತು ನೀಡಿದೆ. ಇಸ್ಲಾಮ್ ಧರ್ಮದ ವಿಭಿನ್ನ ಆರಾಧನೆಗಳ ಉದ್ದೇಶವೇ ಮನುಷ್ಯ ಜೀವನದಲ್ಲಿ ಸುಧಾರಣೆ ತರುವುದು ಆಗಿದೆ. ದೇವನೊಡನೆ ವಿಶ್ವಾಸವಿರಿಸುವವನು ಮತ್ತು ಒಳಿತುಗಳನ್ನು ಮಾಡುವವನು, ತ್ಯಾಗದ ಮಾರ್ಗದೆಡೆಗೆ ಕರೆಯುವವನು ಮುಸಲ್ಮಾನರಲ್ಲಿ ಎಲ್ಲರಿಗಿಂತ ಉತ್ತಮ ಮುಸ್ಲಿಮ್ ಎನಿಸಿಕೊಳ್ಳುತ್ತಾನೆ. ಇಸ್ಲಾಮ್ನಲ್ಲಿ ಅಲ್ಲಾಹನೊಡನೆ ವಿಶ್ವಾಸವಿರಿಸುವುದೆಂದರೆ ಅರ್ಥ ದೇವನಲ್ಲಿ ನಂಬಿಕೆ ಇರಿಸುವುದು, ದೇವನನ್ನು ಸಂತುಷ್ಟಗೊಳಿಸಬಲ್ಲ ಏಕ ಮಾತ್ರ ಸಾಧ್ಯತೆ ಅದು. ಹೀಗೆ ದೇವನ ಸಂಪ್ರೀತಿಗಿರುವ ಮಾರ್ಗವೆಂದರೆ ಪಾಪಗಳಿಂದ ಸುರಕ್ಷಿತರಾಗಿ, ಸತ್ಯ ಮಾರ್ಗದಲ್ಲಿ ನಡೆಯುವುದು ಆಗಿದೆ.
ಇಸ್ಲಾಮ್ ನಿಮ್ಮ ನಮಾಝ್ ಕೆಡುಕುಗಳಿಂದ ನಿಮ್ಮನ್ನು ರಕ್ಷಿಸುವುದೆಂಬ ಶಿಕ್ಷಣವನ್ನೂ ನೀಡಿದೆ. ಉಪವಾಸ ವೃತದಿಂದ ನೀವು ಮುತ್ತಕಿ(ಧರ್ಮ ನಿಷ್ಠೆ)ಆಗುವಿರಿ, ಸಂಯಮ ಒಳಿತು ಚಾರಿತ್ರ್ಯವಂತರು ಮತ್ತು ಸಜ್ಜನರಾಗುವ ನಿರೀಕ್ಷೆ ಇರಿಸಬಹುದೆಂದೂ ಅದರ ಶಿಕ್ಷಣವಾಗಿದೆ. ಅದೇ ರೀತಿ ಝಕಾತ್ ಮತ್ತು ಹಜ್ಜ್ ನ ಉದ್ದೇಶವೂ ಮನುಷ್ಯನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುವುದು ಆಗಿದೆ.
ದೇವನ ಆದೇಶಗಳನ್ನು ಪಾಲಿಸುವ ಜನರು ಸಜ್ಜನರು, ಸದ್ವರ್ತನೆಯವರು, ಸಭ್ಯರು, ಸುಶೀಲರು, ಸಂಸ್ಕಾರವಂತರು ಆಗಿದ್ದಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ದೇವನ ಆದೇಶಗಳನ್ನು ಅವಹೇಳನಗೈದ ಜನರಲ್ಲಿ ಹೆಚ್ಚಿನವರು ಕೆಟ್ಟ ಚಾರಿತ್ರ್ಯವಿರುವವರು ಭ್ರಷ್ಟರು ಕೆಟ್ಟ ವರ್ತನೆಯವರು ಆಗಿರುತ್ತಾರೆ ಎಂಬುದಕ್ಕೆ ಸಾಕಷ್ಟು ಉದಾಹಣೆಗಳಿವೆ. ಆದ್ದರಿಂದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹೀಗೆ ಎಲ್ಲ ಮಟ್ಟದಲ್ಲಿ ದೇವಭಯ ಮತ್ತು ನೈತಿಕತೆಯ ಭಾವನೆ ಹುಟ್ಟು ಹಾಕಿ ವಾಸ್ತವಿಕ ದೈವಿಕ ಶಿಕ್ಷಣಗಳನ್ನು ಪ್ರಚಾರ ಮತ್ತು ಪ್ರಸಾರ ಮಾಡಿ ಮನುಷ್ಯರನ್ನು ಚಾರಿತ್ರ್ಯವಂತರನ್ನಾಗಿ ಮಾಡಬಹುದಾಗಿದೆ ಮತ್ತು ಸಮಾಜದಲ್ಲಿ ಹೆಚ್ಚಳಗೊಳ್ಳುತ್ತಿರುವ ಅಪರಾಧ ಪ್ರವೃತ್ತಿಗಳಿಗೆ ತಡೆ ಹಾಕಬಹುದಾಗಿದೆ.
IslamKannada News Portal

