Home / ಪ್ರಶ್ನೋತ್ತರ / ಹಜ್ಜ್ ಯಾತ್ರಿಗೆ ಹೂಹಾರ?

ಹಜ್ಜ್ ಯಾತ್ರಿಗೆ ಹೂಹಾರ?

ಪ್ರಶ್ನೆ: ಹಜ್ಜ್ ಮಾಡುವವರಿಗೆ ಗುಲ್‍ಪೋಶ್ ಮಾಡಬಹುದೇ?

ಉತ್ತರ: ಹಜ್ಜ್ ಇಸ್ಲಾಮಿನ ಒಂದು ಪ್ರಮುಖ ಆರಾಧನಾ ಕರ್ಮವಾಗಿದೆ. ಅದಕ್ಕೆ ಹೋಗುವಾಗ ಬಹಳ ಭಕ್ತಿ, ಗೌರವ ಮತ್ತು ಶಿಷ್ಟಾಚಾರದೊಂದಿಗೆ ಹೋಗಬೇಕಾಗಿದೆ.  ಹಜ್ಜ್ ಗೆ ಹೋಗುವವರ ಅತ್ಯುತ್ತಮ ದಾರಿ ವೆಚ್ಚವು ‘ತಕ್ವಾ’ (ದೇವಭಯದಿಂದ ಸಕಲ ಕೆಡುಕುಗಳಿಂದಲೂ ದೂರವಿರುವುದು) ಆಗಿದೆಯೆಂದು ಕುರ್‍ಆನ್ ಹೇಳುತ್ತದೆ.

ಹಜ್ಜ್ ಯಾತ್ರೆಯೆಂಬುದು ಯಾವುದೇ ಆಡಂಬರ ಪ್ರದರ್ಶನವಲ್ಲ. ಅದು ತುಂಬಾ ಸರಳವಾಗಿರಬೇಕು. ಆದ್ದರಿಂದ ಎಲ್ಲರ ಹಜ್ಜ್ ನ ಇಹ್ರಾಮನ್ನು ಒಂದೇ ರೀತಿಯಾಗಿ  ಮಾಡಲಾಗಿದೆ. ಅಂದರೆ ಒಂದು ಬಿಳಿ ಬಟ್ಟೆ ಉಡಲು, ಇನ್ನೊಂದು ಹೊದ್ದುಕೊಳ್ಳಲು. ಆದ್ದರಿಂದ ಗುಲ್‍ಪೋಶ್ ಅಥವಾ ಹಜ್ಜ್ ಯಾತ್ರಿಕನಿಗೆ ಹೂವಿನ ಹಾರ ಹಾಕಿ  ಬೀಳ್ಕೊಡುವುದು ಸರಿಯಲ್ಲ. ಅವರನ್ನು ಹರಸಿ, ಪ್ರಾರ್ಥಿಸಿ ಬಿಳ್ಕೊಡಬೇಕಾಗಿದೆ. ಯಾವುದೋ ಪಂದ್ಯದಲ್ಲಿ ಗೆದ್ದುಕೊಂಡು ಹೋಗುವಾಗ ಹೂವಿನಹಾರ ಹಾಕುವಂತೆ  ಹಾಕಿ ಕಳಿಸುವುದಲ್ಲ. ಅದೊಂದು ನವೀನ ಸಂಪ್ರದಾಯವಾಗಿದೆ.

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …