Home / ಲೇಖನಗಳು / ಉಪವಾಸ ಹೇಗೆ?

ಉಪವಾಸ ಹೇಗೆ?

– ಇಸ್ಲಾಮಿನ ಬುನಾದಿಯಲ್ಲಿ ಪ್ರಮುಖವಾದ ಒಂದು ಆರಾಧನಾ ಕರ್ಮವಾಗಿದೆ ‘ಉಪವಾಸ’
– ಇಚ್ಛಾ ನಿಯಂತ್ರಣ ಎಂದಾಗಿದೆ. ಉಪವಾಸದ ಅರ್ಥ.
– ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ತನ್ನ ಬಯಕೆಗಳನ್ನು ತಡೆದಿರಿಸುವುದು ಇಚ್ಛೆಗಳನ್ನು ನಿಯಂತ್ರಿಸುವುದು ಇದರ ಉದ್ದೇಶ.
– ಉಪವಾಸದಲ್ಲಿ ಎರಡು ವಿಧವಿದೆ. ಕಡ್ಡಾಯ ವ್ರತ:- ರಮಝಾನ್‌ನ ವ್ರತ, ಹರಕೆಯ ವ್ರತ ಐಚ್ಛಿಕ ವ್ರತ:- ಅರಫಾ ದಿನದ ವ್ರತ ಆಶುರಾ, ಶವ್ವಾಲ್, 2 ರಿಂದ 7ರ ತನಕ ಹಾಗೂ ವಾರದಲ್ಲೂ ತಿಂಗಳಲ್ಲೂ  ಹಿಡಿಯುವ ಉಪವಾಸಗಳು.
– ಹಿಜರಿ 2ನೇ ವರ್ಷ ರಮಝಾನಿನ ಉಪವಾಸ ಕಡ್ಡಾಯವಾಯಿತು.
– ಒಂದು ತಿಂಗಳು ಪೂರ್ತಿ ಕಡ್ಡಾಯವಾಗಿ ಎಲ್ಲಾ ಮುಸ್ಲಿಮ್ ಸ್ತ್ರೀ ಮತ್ತು ಪುರುಷರು ಉಪವಾಸ ಆಚರಿಸಬೇಕು.

ಉಪವಾಸದ ಪ್ರಮುಖ ಘಟಕಗಳು
– ನಿಯ್ಯತ್ (ಸಂಕಲ್ಪ)
–  ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು ದುರ್ಬಲಗೊಳಿಸುವ ಕಾರ್ಯವನ್ನು ವರ್ಜಿಸುವುದು. (ತಿನ್ನುವುದು, ಕುಡಿಯುವುದು, ಅಶ್ಲೀಲ ಕಾರ್ಯವೆಸಗುವುದು. ಸಂಸರ್ಗ ಮಾಡುವುದು ಇತ್ಯಾದಿ)

ಉಪವಾಸ ಕಡ್ಡಾಯವಾಗುವವರು
– ಮುಸ್ಲಿಮ್ ಆಗಿರಬೇಕು.
– ಪ್ರಾಯಕ್ಕೆ ಬಂದಿರಬೇಕು. (ಸಾಧ್ಯವಾಗುವುದಾದರೆ ಆಚರಿಸುವುದು)
– ಬುದ್ಧಿ ಸ್ಥಿರತೆಯಲ್ಲಿರಬೇಕು.
– ರೋಗ ಮುಕ್ತರಾಗಿರಬೇಕು.
– ಪ್ರಯಾಣಿಕನಾಗಿರಬಾರದು.
– ಸ್ತ್ರೀ ಪ್ರಸವ ರಕ್ತ, ಆರ್ತವ ರಕ್ತಗಳಿಂದ ಶುದ್ಧವಾಗಿರಬೇಕು.

ವ್ರತ ಕಡ್ಡಾಯವಿಲ್ಲದವರು
– ವಾರ್ಧಕ್ಯವಿರುವವರು, ವೃದ್ಧರು.
– ಗುಣಮುಖವಾಗದ ರೋಗಿಗಳು. (ಶಾಶ್ವತ ರೋಗಿಗಳು)
– ಕಠಿಣ ಶ್ರಮದಿಂದ ಉಪಜೀವನ ಮಾರ್ಗ ಹುಡುಕುವವರು. (ಈ ವಿಭಾಗಗಳಿಗೆ ತಮಗೆ ನಷ್ಟಹೊಂದಿದ ಪ್ರತಿಯೊಂದು ಉಪವಾಸಕ್ಕೂ ಒಂದು `ಮುದ್ದು’ (ಸುಮಾರು 823 ಗ್ರಾಂ) ಆಹಾರ ಪದಾರ್ಥಗಳನ್ನು ನೀಡಬೇಕು.

ವ್ರತಾನುಷ್ಠಾನಿಸಲು ನಿಷಿದ್ಧವಾದ ಸಂದರ್ಭ
– ಎರಡು ಹಬ್ಬದ ದಿನ (ಈದುಲ್ ಫಿತ್ರ್, ಈದುಲ್  ಅಝ್‌ಹಾ)
– ದುಲ್ ಹಜ್ 11, 12, 13,ನೇ ದಿನಗಳು  (ಅಯ್ಯಾಮುತ್ತಶ್ರೀಕ್)
– ವರ್ಷ ಪೂರ್ತಿ ಉಪವಾಸ ಹಿಡಿಯುವುದು.

ಉಪವಾಸ ದುರ್ಬಲವಾಗುವ ಕಾರ್ಯಗಳು
– ಉದ್ದೇಶ ಪೂರ್ವಕವಾಗಿ ತಿನ್ನುವುದು ಕುಡಿಯುವುದು.
– ಉದ್ದೇಶ ಪೂರ್ವಕವಾಗಿ ವಾಂತಿ ಮಾಡುವುದು.
– ಆರ್ತವ ರಕ್ತ, ಪ್ರಸವ ರಕ್ತ ಹೊರಡುವುದು.
– ಶುಕ್ಲ ಹೊರಡುವುದು (ಉದ್ದೇಶ ಪೂರ್ವಕವಾಗಿ)

ಉಪವಾಸಗನಿಂದ ತಪ್ಪು ಸಂಭವಿಸಿದರೆ
– ತಿಳಿಯದೆ ಉಪವಾಸಿಗನಿಂದ ತಪ್ಪು ಸಂಭವಿಸಿದರೆ ಉಪವಾಸ ಮುರಿಯುವುದಿಲ್ಲ. (ಅಹ್‌ಝಾಬ್: 5)
– ಸಂಯೋಗದಲ್ಲಿ ಏರ್ಪಟ್ಟರೆ ಉಪವಾಸ ದುರ್ಬಲವಾಗುತ್ತದೆ ಮತ್ತು ಪ್ರಾಯಶ್ಚಿತ ನೀಡಬೇಕು. ದಾಸಿಯನ್ನು ವಿಮೋಚಿಸಬೇಕು. ಅಥವಾ 2 ತಿಂಗಳು ಪೂರ್ತಿ ಉಪವಾಸ  ಹಿಡಿಯಬೇಕು, 60 ಜನರಿಗೆ ಊಟ ಕೊಡಬೇಕು.
– ಸುರುಮ ಹಾಕುವುದು, ಎಣ್ಣೆ ಹಚ್ಚುವುದು, ಇಂಜಕ್ಷನ್ ಕೊಡುವುದರಿಂದ ಉಪವಾಸ ಮುರಿಯುವುದಿಲ್ಲ.

ಉಪವಾಸದ ಮರ್ಯಾದೆಗಳು
– ಸಹರಿ ಮಾಡಬೇಕು. (ಒಂದು ಖರ್ಜೂರದ ತುಂಡಾದರೂ ಸರಿ ಸಹರಿ ಮಾಡಬೇಕು. ಇದು ಪ್ರಬಲ ಸುನ್ನತ್ ಆಗಿದೆ.)
– ಉಪವಾಸ ತೊರೆಯುವ ಸಮಯವಾದರೆ, ತಕ್ಷಣ ತೊರೆಯಬೇಕು. (ಖರ್ಜೂರ ಮತ್ತು ನೀರಿನಿಂದ ಉತ್ತಮ)
– ವ್ರತ ಅನುಷ್ಠಾನಿಸುವಾಗಲೂ ತೊರೆಯುವಾಗಲೂ ಅದರದೇ ಆದ ದುಆಗಳನ್ನು ಮಾಡಬೇಕು.
– ಹೆಚ್ಚೆಚ್ಚು ಪುಣ್ಯಕರ್ಮಗಳನ್ನು ಹಗಲು ಮತ್ತು ರಾತ್ರಿ ಹೊತ್ತು ಮಾಡುತ್ತಲಿರಬೇಕು.
– ವಿರುದ್ಧ ಕಾರ್ಯಮಾಡಬಾರದು.
– ದಂತ ಶುದ್ಧಿ ಮಾಡಬೇಕು.
– ಕೊನೆಯ ಹತ್ತರಲ್ಲಿ ಹೆಚ್ಚಾಗಿ ಪ್ರಾರ್ಥನೆಯಲ್ಲಿ ಮುಳುಗಬೇಕು.

@ ಅಶೀರುದ್ದೀನ್ ಆಲಿಯಾ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …