Home / ಪ್ರಶ್ನೋತ್ತರ / ಉಪವಾಸಕ್ಕೆ ನಿಯ್ಯತ್ ಇರಿಸುವುದು ಹೇಗೆ?

ಉಪವಾಸಕ್ಕೆ ನಿಯ್ಯತ್ ಇರಿಸುವುದು ಹೇಗೆ?

ಪ್ರಶ್ನೆ: ಉಪವಾಸಕ್ಕೆ ನಿಯ್ಯತ್ ಇರಿಸುವುದು ಹೇಗೆ? ಏನಾದರೂ ಹೇಳಿಯೇ ಉಪವಾಸ ಆರಂಭಿಸಬೇಕೇ? ಉಪವಾಸದ ನಿಯ್ಯತ್ ಬಾಯಿಯಿಂದ ಹೇಳುವುದು ಕಡ್ಡಾಯವೇ? ಹಾಗಾದರೆ ಅದರ ಸಮಯ ಯಾವುದು? ಪ್ರತಿಯೊಂದು ದಿನದ ಉಪವಾಸಕ್ಕೂ ಬೇರೆ ಬೇರೆ ನಿಯ್ಯತ್ ಬೇಕೇ?

ಉತ್ತರ: ನಿಯ್ಯತ್ ಎಂಬ ಪದದ ಅರ್ಥ ಸಂಕಲ್ಪ ಎಂದಾಗಿದೆ. ಸಂಕಲ್ಪವನ್ನು ಸಾಮಾನ್ಯವಾಗಿ ಮಾಡುವುದು ಹೃದಯ. ಅಂದರೆ ಸಂಕಲ್ಪದ ಸ್ಥಳ ಮನಸ್ಸು ಆಗಿದೆ. ಆದ್ದರಿಂದ ನಾವು ಹೃದಯದಿಂದಲೇ ಸಂಕಲ್ಪ ಮಾಡಬೇಕು. ಬಾಯಿಯಲ್ಲಿ ಕೇವಲ ನಿರ್ಲಕ್ಷ್ಯದಿಂದ ಉಚ್ಚರಿಸಿದರೆ ಅದು ನಿಯ್ಯತ್ ಆಗುವುದಿಲ್ಲ. ನಾಲಗೆಯಿಂದ ಹೇಳಬೇಕೆನ್ನುವುದು ನಿಯ್ಯತ್‌ನ ನಿಬಂಧನೆಯೂ ಅಲ್ಲ. ಅದು ಸುನ್ನತ್ ಆಗಿದೆ. ಅದು ಕೂಡ ಶಾಫೀ ಮತ್ತು ಹನಫೀ ಕರ್ಮಶಾಸ್ತ್ರದಲ್ಲಾಗಿದೆ. (ನಿಹಾಯ- 1:496) ಪ್ರವಾದಿಯವರೋ(ಸ) ಸಹಾಬಿಗಳೋ ನಿಯ್ಯತ್ ಅನ್ನು ಬಾಯಿಯಿಂದ ಉಚ್ಛರಿಸುತ್ತಿರಲಿಲ್ಲ. (ಝಾದುಲ್ ಮಆದ್: 1: 194)
ಹೃದಯಕ್ಕೆ ಸಹಾಯಕವಾಗಲು ನಾಲಗೆಯಿಂದ ಉಚ್ಛರಿಸಲಾಗುತ್ತದೆ. ಪ್ರಾಮಾಣಿಕತೆಯಿಲ್ಲದೆ ಕೇವಲ ನಾಲಗೆಯಿಂದ ನಿಯ್ಯತ್ ಹೇಳಿದರೆ ಉಪವಾಸ ಸ್ವಹೀಹ್ ಆಗುವುದಿಲ್ಲ. (ತುಹ್‌ಫ 3 / 424)

“ಫಜ್ರ್ ಗಿಂತ ಮೊದಲು ರಾತ್ರಿ ನಿಯ್ಯತ್ ಮಾಡದವನಿಗೆ ಉಪವಾಸವಿಲ್ಲ.” (ಅಬೂ ದಾವೂದ್- 8161) ಎಂದು ಅಧಿಕೃತ ಹದೀಸ್‌ನಲ್ಲಿದೆ. ಈ ಆಧಾರದಲ್ಲಿ ರಮಝಾನ್ ಉಪವಾಸಕ್ಕೆ ಪ್ರತಿದಿನವೂ ಸಂಕಲ್ಪ ಮಾಡಬೇಕೆಂದು ಹೇಳಲಾಗುತ್ತದೆ.

ರಮಝಾನ್‌ನ ಉಪವಾಸ, ಹರಕೆಯ ಉಪವಾಸ ಮೊದಲಾದ ಕಡ್ಡಾಯ ಉಪವಾಸಗಳಿಗೆ ಸಂಕಲ್ಪ ಮಾಡುವಾಗ ರಾತ್ರಿಯಲ್ಲಿ  (ಮಗ್ರಿಬ್-ಸುಬಹ್‌ನ ನಡುವೆ) ಇಂತಹ ಉಪವಾಸ ಹಿಡಿಯುತ್ತೇನೆ ಎಂದು ನಿರ್ಣಯಿಸುವುದು ಕಡ್ಡಾಯವಾಗಿದೆ. ರಮಝಾನ್ ಉಪವಾಸ ನಾನು ಆಚರಿಸುತ್ತೇನೆಂದು ರಾತ್ರಿಯಲ್ಲಿ ನಿಯ್ಯತ್ ಮಾಡಿದರೆ ಅದು ಕಡ್ಡಾಯವಾದ ಸಂಕಲ್ಪ ಆಗುತ್ತದೆ. ಎಲ್ಲಾ ಉಪವಾಸಗಳಿಗೂ ರಮಝಾನ್ ತಿಂಗಳ ಪ್ರಥಮ ದಿನ ರಾತ್ರಿ ಸಂಕಲ್ಪ ಮಾಡಿದರೆ  ಸಾಕಾಗುವುದಿಲ್ಲವೆಂದು ಶಾಫೀ ಕರ್ಮಶಾಸ್ತ್ರವು ಹೇಳುತ್ತದೆ. ಆದರೆ  ರಮಝಾನ್ ಉಪವಾಸವು ಒಂದೇ ಆರಾಧನೆಯೆಂದೂ, ಅದಕ್ಕೆ ಒಂದೇ ನಿಯ್ಯತ್ ಸಾಕಾಗುತ್ತದೆಯೆಂದೂ ಮಾಲಿಕಿ ಕರ್ಮಶಾಸ್ತ್ರ  ಹೇಳುತ್ತದೆ. (ಹಾಶಿಯತು ಬಿನ್
ಆಬಿದೀನ್: 2- 380)

ಮರುದಿನ ಉಪವಾಸ ಆಚರಿಸಲಿಕ್ಕಿದೆಯೆಂಬ ಉದ್ದೇಶದಿಂದ ನಿದ್ರಿಸುವುದೂ ಮತ್ತು ಆ ಉದ್ದೇಶಕ್ಕಾಗಿಯೇ ಸಹ್ರೀಗೆ ಏಳುವುದೆಲ್ಲವೂ ಸಂಕಲ್ಪ (ನಿಯ್ಯತ್) ಆಗಿ ಪರಿಗಣಿಸಲ್ಪಡುತ್ತದೆ.

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …