– ಇಸ್ಲಾಮಿನ ಬುನಾದಿಯಲ್ಲಿ ಪ್ರಮುಖವಾದ ಒಂದು ಆರಾಧನಾ ಕರ್ಮವಾಗಿದೆ ‘ಉಪವಾಸ’
– ಇಚ್ಛಾ ನಿಯಂತ್ರಣ ಎಂದಾಗಿದೆ. ಉಪವಾಸದ ಅರ್ಥ.
– ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ತನ್ನ ಬಯಕೆಗಳನ್ನು ತಡೆದಿರಿಸುವುದು ಇಚ್ಛೆಗಳನ್ನು ನಿಯಂತ್ರಿಸುವುದು ಇದರ ಉದ್ದೇಶ.
– ಉಪವಾಸದಲ್ಲಿ ಎರಡು ವಿಧವಿದೆ. ಕಡ್ಡಾಯ ವ್ರತ:- ರಮಝಾನ್ನ ವ್ರತ, ಹರಕೆಯ ವ್ರತ ಐಚ್ಛಿಕ ವ್ರತ:- ಅರಫಾ ದಿನದ ವ್ರತ ಆಶುರಾ, ಶವ್ವಾಲ್, 2 ರಿಂದ 7ರ ತನಕ ಹಾಗೂ ವಾರದಲ್ಲೂ ತಿಂಗಳಲ್ಲೂ ಹಿಡಿಯುವ ಉಪವಾಸಗಳು.
– ಹಿಜರಿ 2ನೇ ವರ್ಷ ರಮಝಾನಿನ ಉಪವಾಸ ಕಡ್ಡಾಯವಾಯಿತು.
– ಒಂದು ತಿಂಗಳು ಪೂರ್ತಿ ಕಡ್ಡಾಯವಾಗಿ ಎಲ್ಲಾ ಮುಸ್ಲಿಮ್ ಸ್ತ್ರೀ ಮತ್ತು ಪುರುಷರು ಉಪವಾಸ ಆಚರಿಸಬೇಕು.
ಉಪವಾಸದ ಪ್ರಮುಖ ಘಟಕಗಳು
– ನಿಯ್ಯತ್ (ಸಂಕಲ್ಪ)
– ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು ದುರ್ಬಲಗೊಳಿಸುವ ಕಾರ್ಯವನ್ನು ವರ್ಜಿಸುವುದು. (ತಿನ್ನುವುದು, ಕುಡಿಯುವುದು, ಅಶ್ಲೀಲ ಕಾರ್ಯವೆಸಗುವುದು. ಸಂಸರ್ಗ ಮಾಡುವುದು ಇತ್ಯಾದಿ)
ಉಪವಾಸ ಕಡ್ಡಾಯವಾಗುವವರು
– ಮುಸ್ಲಿಮ್ ಆಗಿರಬೇಕು.
– ಪ್ರಾಯಕ್ಕೆ ಬಂದಿರಬೇಕು. (ಸಾಧ್ಯವಾಗುವುದಾದರೆ ಆಚರಿಸುವುದು)
– ಬುದ್ಧಿ ಸ್ಥಿರತೆಯಲ್ಲಿರಬೇಕು.
– ರೋಗ ಮುಕ್ತರಾಗಿರಬೇಕು.
– ಪ್ರಯಾಣಿಕನಾಗಿರಬಾರದು.
– ಸ್ತ್ರೀ ಪ್ರಸವ ರಕ್ತ, ಆರ್ತವ ರಕ್ತಗಳಿಂದ ಶುದ್ಧವಾಗಿರಬೇಕು.
ವ್ರತ ಕಡ್ಡಾಯವಿಲ್ಲದವರು
– ವಾರ್ಧಕ್ಯವಿರುವವರು, ವೃದ್ಧರು.
– ಗುಣಮುಖವಾಗದ ರೋಗಿಗಳು. (ಶಾಶ್ವತ ರೋಗಿಗಳು)
– ಕಠಿಣ ಶ್ರಮದಿಂದ ಉಪಜೀವನ ಮಾರ್ಗ ಹುಡುಕುವವರು. (ಈ ವಿಭಾಗಗಳಿಗೆ ತಮಗೆ ನಷ್ಟಹೊಂದಿದ ಪ್ರತಿಯೊಂದು ಉಪವಾಸಕ್ಕೂ ಒಂದು `ಮುದ್ದು’ (ಸುಮಾರು 823 ಗ್ರಾಂ) ಆಹಾರ ಪದಾರ್ಥಗಳನ್ನು ನೀಡಬೇಕು.
ವ್ರತಾನುಷ್ಠಾನಿಸಲು ನಿಷಿದ್ಧವಾದ ಸಂದರ್ಭ
– ಎರಡು ಹಬ್ಬದ ದಿನ (ಈದುಲ್ ಫಿತ್ರ್, ಈದುಲ್ ಅಝ್ಹಾ)
– ದುಲ್ ಹಜ್ 11, 12, 13,ನೇ ದಿನಗಳು (ಅಯ್ಯಾಮುತ್ತಶ್ರೀಕ್)
– ವರ್ಷ ಪೂರ್ತಿ ಉಪವಾಸ ಹಿಡಿಯುವುದು.
ಉಪವಾಸ ದುರ್ಬಲವಾಗುವ ಕಾರ್ಯಗಳು
– ಉದ್ದೇಶ ಪೂರ್ವಕವಾಗಿ ತಿನ್ನುವುದು ಕುಡಿಯುವುದು.
– ಉದ್ದೇಶ ಪೂರ್ವಕವಾಗಿ ವಾಂತಿ ಮಾಡುವುದು.
– ಆರ್ತವ ರಕ್ತ, ಪ್ರಸವ ರಕ್ತ ಹೊರಡುವುದು.
– ಶುಕ್ಲ ಹೊರಡುವುದು (ಉದ್ದೇಶ ಪೂರ್ವಕವಾಗಿ)
ಉಪವಾಸಗನಿಂದ ತಪ್ಪು ಸಂಭವಿಸಿದರೆ
– ತಿಳಿಯದೆ ಉಪವಾಸಿಗನಿಂದ ತಪ್ಪು ಸಂಭವಿಸಿದರೆ ಉಪವಾಸ ಮುರಿಯುವುದಿಲ್ಲ. (ಅಹ್ಝಾಬ್: 5)
– ಸಂಯೋಗದಲ್ಲಿ ಏರ್ಪಟ್ಟರೆ ಉಪವಾಸ ದುರ್ಬಲವಾಗುತ್ತದೆ ಮತ್ತು ಪ್ರಾಯಶ್ಚಿತ ನೀಡಬೇಕು. ದಾಸಿಯನ್ನು ವಿಮೋಚಿಸಬೇಕು. ಅಥವಾ 2 ತಿಂಗಳು ಪೂರ್ತಿ ಉಪವಾಸ ಹಿಡಿಯಬೇಕು, 60 ಜನರಿಗೆ ಊಟ ಕೊಡಬೇಕು.
– ಸುರುಮ ಹಾಕುವುದು, ಎಣ್ಣೆ ಹಚ್ಚುವುದು, ಇಂಜಕ್ಷನ್ ಕೊಡುವುದರಿಂದ ಉಪವಾಸ ಮುರಿಯುವುದಿಲ್ಲ.
ಉಪವಾಸದ ಮರ್ಯಾದೆಗಳು
– ಸಹರಿ ಮಾಡಬೇಕು. (ಒಂದು ಖರ್ಜೂರದ ತುಂಡಾದರೂ ಸರಿ ಸಹರಿ ಮಾಡಬೇಕು. ಇದು ಪ್ರಬಲ ಸುನ್ನತ್ ಆಗಿದೆ.)
– ಉಪವಾಸ ತೊರೆಯುವ ಸಮಯವಾದರೆ, ತಕ್ಷಣ ತೊರೆಯಬೇಕು. (ಖರ್ಜೂರ ಮತ್ತು ನೀರಿನಿಂದ ಉತ್ತಮ)
– ವ್ರತ ಅನುಷ್ಠಾನಿಸುವಾಗಲೂ ತೊರೆಯುವಾಗಲೂ ಅದರದೇ ಆದ ದುಆಗಳನ್ನು ಮಾಡಬೇಕು.
– ಹೆಚ್ಚೆಚ್ಚು ಪುಣ್ಯಕರ್ಮಗಳನ್ನು ಹಗಲು ಮತ್ತು ರಾತ್ರಿ ಹೊತ್ತು ಮಾಡುತ್ತಲಿರಬೇಕು.
– ವಿರುದ್ಧ ಕಾರ್ಯಮಾಡಬಾರದು.
– ದಂತ ಶುದ್ಧಿ ಮಾಡಬೇಕು.
– ಕೊನೆಯ ಹತ್ತರಲ್ಲಿ ಹೆಚ್ಚಾಗಿ ಪ್ರಾರ್ಥನೆಯಲ್ಲಿ ಮುಳುಗಬೇಕು.
@ ಅಶೀರುದ್ದೀನ್ ಆಲಿಯಾ
IslamKannada News Portal
