Home / ಪ್ರಶ್ನೋತ್ತರ / ‘ಅಲ್ಲಾಹ್’ ಎಂದು ಕರೆಯಲು ಕಾರಣವೇನು?

‘ಅಲ್ಲಾಹ್’ ಎಂದು ಕರೆಯಲು ಕಾರಣವೇನು?

ಮುಸ್ಲಿಮರು ಸೃಷ್ಟಿಕರ್ತನನ್ನು ಅನ್ಯಭಾಷೆಯಾದ ಅರಬಿಯಲ್ಲಿ ‘ಅಲ್ಲಾಹ್’ ಎಂದು ಸಂಬೋಧಿಸುವುದು ಏಕೆ? ಪ್ರತಿಯೊಬ್ಬರೂ ಅವರ ಮಾತೃಭಾಷೆಯಲ್ಲಿ ಸೂಕ್ತ ಹೆಸರು ನೀಡಿದರೆ ಸಾಲದೆ ? (ಉದಾಹರಣೆಗೆ ನಾವು ದೇವರು, ಈಶ್ವರ ಎಂದು ಹೇಳುತ್ತೇವೆ.)

ಇಡೀ ಪ್ರಪಂಚವನ್ನೂ ಅದರಲ್ಲಿರುವ ಸಕಲವನ್ನೂ ಸೃಷ್ಟಿಸಿ, ಪರಿಪಾಲಿಸುತ್ತಿರುವ ಶಕ್ತಿಯ ಹೆಸರು ‘ಅಲ್ಲಾಹ್’ ಎಂದಾಗಿದೆ. ದೇವರು, ಈಶ್ವರ, ಗಾಡ್, ಸೃಷ್ಟಿಕರ್ತ, ಖುದಾ ಮೊದಲಾದ ಹೆಸರುಗಳನ್ನು ಸೃಷ್ಟಿಕರ್ತನನ್ನು ಪರಿಚಯಿಸಲು ಉಪಯೋಗಿಸಬಹುದು. ಆದರೆ ಏಕನೂ ನಿರಾಕಾರನೂ ಆದ ಶಕ್ತಿಯನ್ನು ಪ್ರತಿನಿಧಿಸಲು ಅತ್ಯಂತ ಸೂಕ್ತವಾದ ಪದ ಅಲ್ಲಾಹ್ ಎಂದಾಗಿದೆ.

ಅರಬಿ ಭಾಷೆಯಲ್ಲಿ ಈ ಪದಕ್ಕೆ ಬಹುವಚನವೋ, ಲಿಂಗಭೇದವೋ ಇಲ್ಲ ಆದ್ದರಿಂದ ಅಲ್ಲಾಹ್’ ಎಂಬ ಪದಕ್ಕೆ ಸರಿಸಮಾನವಾದ ಅನುವಾದ ವಿಶ್ವದ ಯಾವ ಭಾಷೆಯಲ್ಲೂ ಇಲ್ಲ. ದೇವರು, ಗಾಡ್, ಖುದಾ ಎಂಬವುಗಳೆಲ್ಲಾ ಅರಬಿಯ ಇಲಾಹ್ ಎಂಬ ಪದದ ಭಾವಾರ್ಥವಾಗಿದೆ. ಬದಲಾಗಿ ಅದು ಅಲ್ಲಾಹ್ ಎಂಬ ಪದದ ಭಾಷಾರ್ಥವಲ್ಲ.

ದೇವ ಎಂಬ ಪದಕ್ಕೆ ದೇವರು, ದೇವಿ ಎಂದೂ, ಗೋಡ್, ಗೋಡಸ್ ಎಂಬೆಲ್ಲಾ ಪ್ರಯೋಗ ಸಾಧ್ಯವಿದೆಯಲ್ಲವೇ? ದೇವ, ಈಶ್ವರ, ಗಾಡ್, ಖುದಾಗಳಿಗೆ ‘ಅಲ್ಲಾಹ್’ ಎಂಬ ಪದದಂತೆ ಗೌರವ ಖಂಡಿತ ಲಭಿಸುವುದಿಲ್ಲ. ಕೋಟಿಗಳ ಒಡೆಯನನ್ನು ಕೋಟೀಶ್ವರನೆಂದು ‘ಗಾಡ್ ಆಫ್ ಸ್ಮೋತ್ ಕಿಂಗ್ಸ್’ ಎಂದೆಲ್ಲಾ ನಾವು ಸುಲಭವಾಗಿ ಹೇಳಿ ಬಿಡುತ್ತೇವೆ. ಅಲ್ಲಾಹ್ ಎಂಬುದು ಇಂತಹ ಎಲ್ಲ ಪದ ಪ್ರಯೋಗಗಳಿಗೂ, ವಚನ, ಲಿಂಗ ಬದಲಾವಣೆಗೂ ಅತೀತವಾದ ನಾಮ ಪದವಾಗಿದೆ. ಆದ್ದರಿಂದ ಸೃಷ್ಟಿಕರ್ತನ ವಿಶೇಷತೆಗಳನ್ನು ನೇರವಾಗಿ ಪ್ರತಿನಿಧಿಸಲು ಅತ್ಯಂತ ಸೂಕ್ತ ಹೆಸರು ಇದುವೇ ಆಗಿದೆ.

ಆದ್ದರಿಂದ ವಿಶ್ವದ ಜನತೆಗೆ ಸೃಷ್ಟಿಕರ್ತನನ್ನು ಪರಿಚಯಿಸಲು ಅಲ್ಲಾಹ್ ಎಂಬ ಹೆಸರನ್ನು ಸೂಚಿಸಲಾಗಿದೆ. ಅಂತ್ಯ ಪ್ರವಾದಿಯ ಮೂಲಕ ಈ ಹೆಸರನ್ನು ನಿಶ್ಚಯಿಸಲಾಗಿದೆ. ಅದರೊಂದಿಗೆ ನಿಶ್ಚಿತ, ಆರಾಧನಾ ಕರ್ಮಗಳನ್ನು ಹೊರತು ಪಡಿಸಿ, ಸೃಷ್ಟಿಕರ್ತನನ್ನು ಪರಿಚಯಿಸಲು, ಅಭಿಸಂಬೋದಿಸಲು ‘ಅಲ್ಲಾಹ್’ ಎಂಬ ಪದವೇ ಆಗಬೇಕೆಂದಿಲ್ಲ. ಅದನ್ನು ಪ್ರಾದೇಶಿಕ ಭಾಷೆಯಲ್ಲೋ ಇತರ ಭಾಷೆಗಳಲ್ಲೋ ಪ್ರಯೋಗಿಸಬಹುದು.

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …