Home / ವಾರ್ತೆಗಳು (page 11)

ವಾರ್ತೆಗಳು

ತಂದೆಯ ಕೊನೆಯ ಆಸೆ ನೆರವೇರಿಸಲು 1.5 ಕೋಟಿ ರೂ. ಮೌಲ್ಯದ ಜಮೀನನ್ನು ‘ಈದ್ಗಾ’‌ಕ್ಕೆ ದಾನ ಮಾಡಿದ ಹಿಂದೂ ಸಹೋದರಿಯರು

ಕಾಶಿಪುರ: 20 ವರ್ಷಗಳ ಹಿಂದೆ ನಿಧನರಾದ ಬ್ರಜನಂದನ್ ಪ್ರಸಾದ್ ರಸ್ತೋಗಿ ಅವರು ತಮ್ಮ ಕೃಷಿ ಭೂಮಿಯಲ್ಲಿ ನಾಲ್ಕು ಬಿಘಾ (0.80 ಎಕರೆ) ಸ್ಥಳವನ್ನು ಈದ್ಗಾ ವಿಸ್ತರಣೆಗಾಗಿ ದಾನ ಮಾಡಲು ಬಯಸುವುದಾಗಿ ತಮ್ಮ ನಿಕಟ ಸಂಬಂಧಿಗಳಿಗೆ ತಿಳಿಸಿದ್ದರು. ಆದರೆ, ತಂದೆಯ ಕೊನೆಯ ಆಸೆಯನ್ನು 20 ವರ್ಷಗಳ ಬಳಿಕ ಮಕ್ಕಳು ಈಡೇರಿಸಿದ ಘಟನೆಯೊಂದು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ವರದಿಯಾಗಿದೆ. ತಮ್ಮ ತಂದೆಯ ಕೊನೆಯ ಆಸೆಯಂತೆ ಇಬ್ಬರು ಹಿಂದೂ ಸಹೋದರಿಯರು …

Read More »

ಈದುಲ್‌ ಫಿತ್ರ್ ಅಂಗವಾಗಿ ಮಸೀದಿಗೆ ಧ್ವನಿವರ್ಧಕ ಕೊಡುಗೆ ನೀಡಿದ ಗ್ರಾಮದ ಹಿಂದೂ ಕುಟುಂಬಗಳು

ನಾಗ್ಪುರ್: ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಕೇಲ್ವಾಡ್ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ವಾಸವಾಗಿಲ್ಲ. ಆದರೆ ಈ ಗ್ರಾಮದಲ್ಲಿ ವಾಸಿಸುವ ಎಲ್ಲಾ ಹಿಂದು ಕುಟುಂಬಗಳೂ  ಜತೆಯಾಗಿ ನೆರೆಯ ಕಿನ್ಹೋಲ ಗ್ರಾಮದ ಮಸೀದಿಗೆ ಈದ್ ಸಂದರ್ಭ ಧ್ವನಿವರ್ಧಕವೊಂದನ್ನು ಕೊಡುಗೆಯಾಗಿ ನೀಡುವ ಮೂಲಕ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಸೃಷ್ಟಿಸುತ್ತಿರುವವರಿಗೆ ಸ್ಪಷ್ಟ ಸಂದೇಶ ರವಾನಿಸಿವೆ. ಮಂಗಳವಾರ ಕೇಲ್ವಾಡ್ ಗ್ರಾಮದ ನಿವಾಸಿಗಳು ಕಿನ್ಹೋಲ ಗ್ರಾಮದ ಮುಸ್ಲಿಂ ಬಾಂಧವರನ್ನು ಆಹ್ವಾನಿಸಿ ನಂತರ ಅಲ್ಲಿನ …

Read More »

ಇಸ್ಲಾಂ ಧರ್ಮ ಸ್ವೀಕರಿಸಿದ ತಮಿಳುನಾಡಿನ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಶಬರಿಮಲ ಜಯಕಾಂತನ್‌

ಜಗತ್ತಿಗೆ ಕುರ್‌ಆನ್ ಸಂದೇಶ ತಲುಪಿಸುವಂತೆ ಮುಸ್ಲಿಮರಿಗೆ ಕರೆ ಚೆನ್ನೈ: ಖ್ಯಾತ ತಮಿಳು ಮೋಟಿವೇಷನಲ್‌ ಸ್ಪೀಕರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬರಿಮಲ ಜಯಕಾಂತನ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಅವರು ಮಕ್ಕಾದಲ್ಲಿನ ಹರಮ್ ಮಸೀದಿಯ ಕಾಬಾದ ಮುಂದೆ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಹಾಗೂ ತನ್ನ ಹೆಸರನ್ನು ಫಾತಿಮಾ ಶಬರಿಮಲ ಎಂದು ಬದಲಾಯಿಸಿಕೊಂಡಿದ್ದಾರೆ. “ಪ್ರಪಂಚದಾದ್ಯಂತ ಮುಸ್ಲಿಮರ ಮೇಲೆ ಯಾಕೆ ಇಷ್ಟೊಂದು ದ್ವೇಷವಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ನಂತರ ತಟಸ್ಥ …

Read More »

‘ರಮಝಾನ್’ ಹೊಸ ಕೃತಿ ……..

ಹೊಸ ಕೃತಿ …….. ಪವಿತ್ರ ರಮಝಾನಿನ ಋತುಗಳು ಸತ್ಯವಿಶ್ವಾಸಿಗಳ ಬದುಕಿನ ಬದಲಾವಣೆಗಾಗಿ ಆಗತವಾಗುತ್ತದೆ, ಈ ತಿಂಗಳಲ್ಲಿ ವ್ರತಾಚರಿಸುವವನ ಗತ ಪಾಪಗಳು ಕ್ಷಮಿಸಲ್ಪಡುತ್ತದೆ. ಅಂದರೆ ಈ ಕ್ಷಮೆ ಮತ್ತು ದೇವ ಸಂಪ್ರೀತಿಯು ಕೇವಲ ಉಪವಾಸ ವ್ರತಾಚಾರಣೆಯಿಂದ ಆಗಲಾರದು. ಅದರ ಹಿಂದೆ ತನ್ನ ಸಂಸ್ಕರಣೆಯ ಉದ್ದೇಶವೂ ಇರಬೇಕು ಎಂಬ ಶರ್ತವಿದೆ. ಇದುವೇ ಮಾನವ ಜೀವನ ಬದಲಿಸುವ ಮತ್ತು ಅವನ ಆಲೋಚನೆ-ವ್ಯವಹಾರಗಳಲ್ಲಿ ಕ್ರಾಂತಿ ತರುವ ಉಪಾಧಿಯಾಗಿದೆ. ಶಾಂತಿ ಪ್ರಕಾಶನ ಈ ವಿಶೇಷ ಹೊಸ ಆವೃತಿಯಲ್ಲಿ …

Read More »

‘ಹಿಜಾಬ್’ ಹೊಸ ಕೃತಿ …….

ಹೊಸ ಕೃತಿ ……. ಸಾಮಾನ್ಯವಾಗಿ ಮಹಿಳೆಯ ಕುರಿತು ಪ್ರಸ್ತಾಪ ಬಂದಾಗಲೆಲ್ಲಾ ಆಕೆಯ ಹಕ್ಕು-ಕರ್ತವ್ಯಗಳು, ಸ್ಥಾನಮಾನ, ಕಾರ್ಯಕ್ಷೇತ್ರ, ಇತ್ಯಾದಿ ಚರ್ಚೆಗೆ ಬಂದೇ ಬರುತ್ತದೆ. ಮುಸ್ಲಿಮ್ ಮಹಿಳೆಯ ಕುರಿತು ಬಂದಾಗ ಆಕೆಯ ಮೇಲಾಗುವ ದೌರ್ಜನ್ಯಗಳು ಮುತ್ತಲಾಕ್, ಬುರ್ಕಾ, ನಕಾಬ್, ಹಿಜಾಬ್’ಗಳೆಲ್ಲಾ ಚರ್ಚೆಗೆ ಬರುತ್ತದೆ. ಪಾಶ್ಚಾತ್ಯ ಪ್ರಭಾವಕ್ಕೊಳಗಾದ ಸಮೂಹ ಮಾಧ್ಯಮಗಳು ಮುಸ್ಲಿಮ್ ಮಹಿಳೆಯ ಬಗ್ಗೆ ಅಷ್ಟೊಂದು ತಪ್ಪು ಕಲ್ಪನೆಗಳನ್ನು ಹರಡಿವೆ. ಮುಸ್ಲಿಮ್ ಮಹಿಳೆಯ ಕುರಿತು ಹೆಚ್ಚಾಗಿ ಅವಳು ಧರಿಸುವ ಹಿಜಾಬನ್ನೇ ಸಮೂಹ ಮಾಧ್ಯಮಗಳು ಗುರಿಯಾಗಿರಿಸಿ …

Read More »

ಶೆಲ್‌ ದಾಳಿಗಳ ಮಧ್ಯೆ 2,500 ಭಾರತೀಯ ವಿದ್ಯಾರ್ಥಿಗಳನ್ನು ಬಸ್‌ ಮೂಲಕ ಸ್ಥಳಾಂತರಿಸಿದ ಪಾಕಿಸ್ತಾನದ ಮುಅಝ್ಝಂ ಖಾನ್

ಹೊಸದಿಲ್ಲಿ: ಟೀಮ್‌ ಎಸ್‌ಒಎಸ್‌ ಇಂಡಿಯಾದ ಸ್ಥಾಪಕ ನಿತೇಶ್‌ ಸಿಂಗ್‌ ಅವರಿಗೆ ಉಕ್ರೇನಿನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸಂಘರ್ಷಮಯ ನೆಲದಿಂದ ಹೊರಕ್ಕೆ ಹೇಗಾದರೂ ದಾಟಿಸಬೇಕೆಂದು ಚಿಂತೆ. ಆದರೆ, ಯುದ್ಧಗ್ರಸ್ತ ಭೂಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊರ ಕರೆದುಕೊಂಡು ಬರುವುದು ಸುಲಭದ ಮಾತಾಗಿರಲಿಲ್ಲ. ವಿದ್ಯಾರ್ಥಿಗಳನ್ನು ರೊಮಾನಿಯಾ, ಪೊಲೆಂಡ್‌, ಸ್ಲೊವಾಕಿಯಾ ಮೊದಲಾದ ಸುರಕ್ಷಿತ ಸ್ಥಳಗಳಿಗೆ ಕರೆತರಲು ಬೇಕಾದ ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇಲ್ಲದ್ದರಿಂದ, ನಿತೇಶ್‌ ಸಿಂಗ್‌, ಟೂರ್‌ ಆಪರೇಟರ್‌ಗಳನ್ನು ಸಂಪರ್ಕಿಸುತ್ತಾರೆ. ಸುರಿಯುತ್ತಿದ್ದ ಮದ್ದು ಗುಂಡುಗಳ ನಡುವೆ …

Read More »

‘ಸಹೀಹುಲ್ ಬುಖಾರಿ’ ಗ್ರಂಥ ಬಿಡುಗಡೆ

ಜಗತ್ತು ಕಂಡ ಮಹಾನ್ ವಿದ್ವಾಂಸರಾದ ಇಮಾಮ್ ಬುಖಾರಿಯವರು ಸತತ ಹದಿನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಕ್ರೋಢೀಕರಿಸಿದ ‘ಸಹೀಹುಲ್ ಬುಖಾರಿ’ ಗ್ರಂಥವು ಜಗತ್ತಿನ ಮುಸ್ಲಿಮರ ಪಾಲಿಗೆ ಪವಿತ್ರ ಕುರ್‌ಆನಿನ ನಂತರ ಹೆಚ್ಚು ಪ್ರಾಶಸ್ತ್ಯ ವಿರುವ ದಾಖಲೆಯಾಗಿದೆ. ಸಮುದಾಯದ ಬಹುಕಾಲದ ಬೇಡಿಕೆ ಮತ್ತು ಆಗ್ರಹವಾಗಿದ್ದ ‘ಸಹೀಹುಲ್ ಬುಖಾರಿ’ ಕನ್ನಡ ಅನುವಾದವನ್ನು ಶಾಂತಿ ಪ್ರಕಾಶನವು 2011ರಲ್ಲೇ ಪ್ರಕಟಿಸಿತ್ತು. ಇದೀಗ ಆ ಗ್ರಂಥದ ಪರಿಷ್ಕೃತ ಆವೃತ್ತಿಯನ್ನು ವಾಚಕರ ಮುಂದೆ ಸಮರ್ಪಿಸಲು ಸಂತೋಷ ಪಡುತ್ತೇವೆ. ‘ಸಹೀಹ್ ಬುಖಾರಿ’ …

Read More »

‘ಪರಲೋಕ ಚಿತ್ರಣ ಕುರ್‌ಆನ್ ನಲ್ಲಿ’ ಕೃತಿ ಪರಿಚಯ

ಮರಣೋತ್ತರ ಜೀವನದ ವಸ್ತುಸ್ಥಿತಿಯನ್ನು ವಿಜ್ಞಾನದ ಪರಿಧಿಯಲ್ಲಿ ಅರಿಯಲು ಸಾಧ್ಯವಿಲ್ಲ, , ವಿಜ್ಞಾನ ಯುಗದಲ್ಲಿ ಎಲ್ಲವೂ ವೈಜ್ಞಾನಿಕವಾಗಿರಬೇಕೆಂಬುದು ಒಂದು ಅಭಿಲಾಷೆ. ಆದರೆ ವಿಜ್ಞಾನದ ಈ ವರೆಗಿನ ಸಾಧನೆಯು ಇನ್ನೂ ಸಾಧಿಸಲಿಕ್ಕಿರುವುದರ ಶತಕೋಟಿಯ ಒಂದಂಶವನ್ನೂ ದಾಟಿಲ್ಲ. ನಭೋಮಂಡಲದ ರಹಸ್ಯ ಕವಾಟಗಳನ್ನು ತೆರೆದಷ್ಟು ಅವು ಮತ್ತಷ್ಟು ವಿಸ್ತೀರ್ಣಗೊಂಡಾಗ ವಿಜ್ಞಾನವೇ ಪ್ರಕೃತಿಯೊಳಗಿನ ರಹಸ್ಯಕ್ಕೆ ವಿಸ್ಮಿತಗೊಂಡಿದೆ. ಹೀಗಿರುವಾಗ ಅಗೋಚರ ವಿಷಯಗಳಿಗೆ ವಿಜ್ಞಾನದ ಬೆನ್ನುಹತ್ತಿ ಪ್ರಯೋಜವಿಲ್ಲ. “ಪರಲೋಕ”ದ ವಸ್ತುಸ್ಥಿತಿಗೆ ಆಧ್ಯಾತ್ಮಿಕ ಶಿಕ್ಷಣದಲ್ಲಿ ಧಾರಾಳ ಪಾಠವಿದೆ. ಜಗತ್ತಿಗೆ ಪ್ರವಾದಿಗಳ ಮೂಲಕ …

Read More »

ರೈಲು ದುರಂತ ಸಂತ್ರಸ್ತನನ್ನು ಕುಟುಂಬದ ಜತೆ ಸೇರಿಸಿದ ಮಸೀದಿ ಧ್ವನಿವರ್ಧಕ!

ಗುವಾಹತಿ: ಮಸೀದಿಯಲ್ಲಿ ನಮಾಝ್ ಸಂದರ್ಭದಲ್ಲಿ ಬಳಸುವ ಧ್ವನಿವರ್ಧಕ, ಪಶ್ಚಿಮ ಬಂಗಾಳ ರೈಲು ದುರಂತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂನ ತನ್ನ ಕುಟುಂಬದ ಜತೆ ಸೇರಿಸಲು ನೆರವಾದ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಗಾಯಗೊಂಡವರಲ್ಲಿ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸೈಫಿಕುಲ್ ಅಲಿ ಕೂಡಾ ಒಬ್ಬರು. ಒಂಬತ್ತು ಜೀವಗಳನ್ನು ಬಲಿ ಪಡೆದ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ …

Read More »

ಥಾಂಕ್ಯೂ ಎಸ್ ಐ ಓ

ಅಪ್ಪನನ್ನು ಕಳಕೊಳ್ಳುವುದೆಂದರೆ ಯಾವುದೇ ಮಕ್ಕಳ ಪಾಲಿಗೆ ಆಲದಮರ ಉರುಳಿದಂತೆ. ಅಪ್ಪನನ್ನು ಸಾಮಾನ್ಯವಾಗಿ ಮಕ್ಕಳು ನೋಡುವುದು ಸಂಜೆ ಅಥವಾ ಕತ್ತಲಾದ ಮೇಲೆ. ಅದರಲ್ಲೂ ಕೂಲಿ ಕಾರ್ಮಿಕ ಅಪ್ಪ ಸಂಜೆ ಮನೆ ಪ್ರವೇಶಿಸುವಾಗ ದಣಿವಿನ ಪರ್ವತವನ್ನೇ ಹೊತ್ತು ಕೊಂಡಿರುತ್ತಾನೆ. ಮಕ್ಕಳ ಜೊತೆ ಧಾರಾಳವಾಗಿ ಮಾತಾಡುವಷ್ಟು ಅನೇಕ ಬಾರಿ ಆತನ ದಣಿದ ದೇಹ ಬಿಡುವುದೂ ಇಲ್ಲ. ಬಿಟ್ಟರೂ, ಆತ ತನ್ನನ್ನು ಹೊರತುಪಡಿಸಿ ಇತರೆಲ್ಲ ವಿಚಾರಗಳ ಬಗ್ಗೆ ಮಕ್ಕಳೊಂದಿಗೆ ಮಾತಾಡುವುದೇ ಹೆಚ್ಚು ಮತ್ತು ತನ್ನ ಕಷ್ಟಗಳನ್ನು …

Read More »