Home / ವಾರ್ತೆಗಳು (page 30)

ವಾರ್ತೆಗಳು

ಸುಪ್ರೀಂ ತೀರ್ಪು ಏನೇ ಇರಲಿ ಅಯೋಧ್ಯೆಯ ಸರ್ವಧರ್ಮೀಯರಿಂದ ಒಗ್ಗಟ್ಟಿನ ಸಂದೇಶ

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ಇದಕ್ಕೂ ಮುಂಚೆ ಸಾಥ್ ಸಾಥ್ ಹೈ ನಾವೆಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ಅಲ್ಲಿನ ಸ್ಥಳೀಯರು ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿಶಿಷ್ಟ ಸೌಹಾರ್ದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಚಂದ್ರಶೇಖರ್ ಆಜಾದ್ ಪಾರ್ಕಿನಲ್ಲಿ ಆಜಾದ್ ರವರ ಪ್ರತಿಮೆಯ ಮುಂದೆ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪುರೋಹಿತರು, ಚಿಂತಕರು, ಬುದ್ಧಿಜೀವಿಗಳು ಭಾಗವಹಿಸಿದ್ದರು. ಅಯೋಧ್ಯೆ ಪ್ರಕರಣದಲ್ಲಿ ಯಾವುದೇ ರೀತಿಯ ತೀರ್ಪು ಬಂದರೂ ನಾವೆಲ್ಲರೂ ಅದನ್ನು ಒಪ್ಪಿಕೊಳ್ಳುತ್ತೇವೆ. ತೀರ್ಪು ಏನೇ …

Read More »

ಇಂಡೊನೇಶಿಯದಲ್ಲಿ ಅನೈತಿಕ ಸಂಬಂಧಕ್ಕೆ ಛಡಿಯೇಟು ಶಿಕ್ಷೆ

ಇಂಡೊನೇಶಿಯ, ನ.6: ಅಕ್ರಮ ಸಂಬಂಧ ಇರಿಸಿದವರಿಗೆ ಇಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತಿದೆ. ಸಾರ್ವಜನಿಕವಾಗಿ ಛಡಿಯೇಟು ಶಿಕ್ಷೆ ವಿಧಿಸಲಾಗುತ್ತದೆ. ಮದುವೆಯಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಛಡಿಯೇಟು ಶಿಕ್ಷೆ ನೀಡಿ ತೀರ್ಪು ಹೊರಬಂದಿದೆ. ತಪ್ಪಿತಸ್ಥ ವ್ಯಕ್ತಿ ಉಲೇಮಾ ಕೌನ್ಸಿಲ್‌ನ ಸದಸ್ಯ ಕೂಡ ಆಗಿದ್ದ ಎನ್ನಲಾಗಿದೆ. ಮುಖ್ಲಿಸ್ ಬಿನ್ ಮುಹಮ್ಮದ್ ಎಂಬ ವ್ಯಕ್ತಿ ಮತ್ತು ಆತನ ಜೊತೆ ಕಾರಿನಲ್ಲಿದ್ದ ಮಹಿಳೆಗೆ ಸಾರ್ವಜನಿಕವಾಗಿ ಛಡಿಯೇಟು ಶಿಕ್ಷೆ ವಿಧಿಸಿ ಶರಿಯ ನ್ಯಾಯಾಲಯ ತೀರ್ಪು ನೀಡಿತ್ತು. ಅವರಿಬ್ಬರ …

Read More »

ಇನ್ನು ಕಾಶ್ಮೀರದ ಆಡಳಿತ ಭಾಷೆ ಉರ್ದುವಲ್ಲ, ಹಿಂದಿ

ಶ್ರೀನಗರ, ನ.1: ಇನ್ನು ಮುಂದೆ ಕಾಶ್ಮೀರದ ಆಡಳಿತ ಭಾಷೆ ಹಿಂದಿ ಆಗಲಿದೆ. ಈವರೆಗೂ ಅಲ್ಲಿ ಸರಕಾರಿ ವ್ಯವಹಾರಗಳೆಲ್ಲ ಉರ್ದು ಭಾಷೆಯಲ್ಲಿತ್ತು. ಜಮ್ಮು-ಕಾಶ್ಮೀರ, ಲಡಾಕ್ ಎರಡು ಬೇರೆ ಬೇರೆ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿದ್ದು ಕೇಂದ್ರ ಗೃಹ ಸಚಿವಾಲಯ ಈ ಕುರಿತು ಬುಧವಾರ ತಡರಾತ್ರೆ ಅಧಿಸೂಚನೆ ಹೊರಡಿಸಿತ್ತು. ಇನ್ನು ಮುಂದೆ 28 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳು ದೇಶದಲ್ಲಿ ಇರಲಿವೆ. ಮೊತ್ತ ಮೊದಲ ಬಾರಿ ಒಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ …

Read More »

ಮಸೀದಿ ಮೇಲೆ ದಾಳಿ: ಫ್ರಾನ್ಸ್ ಅಧ್ಯಕ್ಷರಿಂದ ಖಂಡನೆ

ಪ್ಯಾರಿಸ್, ಅ. 30: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೇಲ್ ಮೆಕ್ರೋನ್ ಮಸೀದಿಯ ಮೇಲೆ ದಾಳಿ ನಡೆಸಿದ ದುಷ್ಟ ಕೃತ್ಯವನ್ನು ಖಂಡಿಸಿದ್ದಾರೆ. ಫ್ರಾನ್ಸ್ ಗಣರಾಜ್ಯ ದ್ವೇಷವನ್ನು ಸಹಿಸದು ಎಂದು ಟ್ವೀಟ್ ಮಾಡಿದ್ದಾರೆ. ಈ ದುಷ್ಟ ಶಕ್ತಿಗಳನ್ನು ದಂಡಿಸುವುದು ಮತ್ತು ದೇಶದಲ್ಲಿನ ಮುಸ್ಲಿಮರ ರಕ್ಷಣೆಗೆ ಅಗತ್ಯ ಕ್ರಮ ಜರಗಿಸುವುದಾಗಿ ಅವರು ತಿಳಿಸಿದರು. ಇವರಂತೆ ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಿಣಿಗಳು ದಕ್ಷಿಣ ಬಯೋನ್ ನಗರದಲ್ಲಿ ಮಸೀದಿಯ ಮೇಲೆ ದಾಳಿ ನಡೆದ ಕೃತ್ಯವನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. …

Read More »

ಶವ ಕೊಳೆಸಿದ ಆಸ್ಪತ್ರೆ ನಿರ್ಲಕ್ಷ್ಯವನ್ನು ಖಂಡಿಸಿದ ಜಮಾಅತೆ ಇಸ್ಲಾಮಿ ಹಿಂದ್

ಇತ್ತೀಚಿಗೆ ವಿದ್ಯುತ್ ಆಘಾತಕ್ಕೆ ಬಲಿಯಾದ ಪಿಲಾರು,ದಾರಂದಬಾಗಿಲು ನಿವಾಸಿ ವಿಲ್ಸನ್ ಫೆರ್ನಾಂಡಿಸ್(26) ಅವರ ಶವವನ್ನು ಶವಾಗಾರದಲ್ಲಿರಿಸಿ ಕೊಳೆಸಿದ ಮಂಗಳೂರಿನ, ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ನಿರ್ಲಕ್ಷ್ಯ ಧೋರಣೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕವು ಖಂಡಿಸಿದೆ. ಮಂಗಳವಾರದಂದು ಮೃತ ವಿಲ್ಸನ್ ಅವರ ಮನೆಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ನ ಮುಖಂಡರು ವಿಲ್ಸನ್ ತಂದೆ ಅಬ್ರಹಾಂ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಮುಖಂಡರಾದ ಶರೀಫ್ ಅಹಮ್ಮದ್ ಅವರು ಮಾತನಾಡಿ ಒಂದು …

Read More »

ರಕ್ತದಾನವು ಅತೀ ಶ್ರೇಷ್ಟ ದಾನ – ಮೌ| ರಿಯಾಝ್ ಫೈಝಿ

ಮಂಗಳೂರು: ಜೂನಿಯರ್ ಫ್ರೆಂಡ್ಸ್ ಸರ್ಕಲ್ ಕುದ್ರೋಳಿ, ಕುದ್ರೋಳಿ ಯಂಗ್ ಬಾಯ್ಸ್ ಹಾಗೂ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಇದರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕುದ್ರೋಳಿಯ ಉರ್ದು ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಕುದ್ರೋಳಿ ನಡುಪಳ್ಳಿಯ ಖತೀಬರಾದ ರಿಯಾಝ್ ಫೈಝಿ ಕಕ್ಕಿಂಜೆಯವರು ಪಾರಿವಾಳವನ್ನು ಬಿಡುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತಾಡಿದ ಅವರು ರಕ್ತದಾನವು ಅತೀ ಶ್ರೇಷ್ಟ ದಾನವಾಗಿದೆ. ಒಬ್ಬನ ಜೀವ ರಕ್ಷಿಸುವುದು ಸಕಲ ಮಾನವಕುಲದ ಜೀವ ರಕ್ಷಿಸಿದಂತೆ ಎಂಬುದು ಇಸ್ಲಾಮಿನ ಶಿಕ್ಷಣವಾಗಿದೆ, …

Read More »

ಮೌಲಾನ ರಬೀಅ ಹಸನ್ ನದ್ವಿಯವರನ್ನು ಸಂದರ್ಶಿಸಿದ ಟಿ. ಆರಿಫಲಿ

ಹೊಸದಿಲ್ಲಿ,ಅ. 28: ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಅಧ್ಯಕ್ಷ ರಾಬಿ ಹಸನ್ ನದ್ವಿಯವರನ್ನು ಜಮಾಅತೆ ಇಸ್ಲಾಮೀ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಟಿ.ಆರಿಫಲಿ ಭೇಟಿಯಾಗಿದ್ದು ಬಾಬರಿ ಮಸೀದಿ ವಿಷಯದಲ್ಲಿ ಇಬ್ಬರೂ ಚರ್ಚಿಸಿದರು. ಅಲ್ಲಾಹನ ಭವನ ಬಾಬರಿ ಮಸೀದಿಯ ಸಂರಕ್ಷಣೆ ಮುಸ್ಲಿಂ ಸಮಾಜದ ಜವಾಬ್ದಾರಿಯಾಗಿದ್ದು, ನ್ಯಾಯ ವ್ಯವಸ್ಥೆಯ ಪರಿಮಿತಿಯಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ನಾವೇನು ಮಾಡಬಹುದು ಎಂದು ಇಬ್ಬರು ಚರ್ಚಿಸಿದರು. ನಾವು ನೇಮಿಸಿದ ವಕೀಲರು ಅವರ ಕೆಲಸವನ್ನು ಉತ್ತಮವಾಗಿ ಮಾಡಿದರು. …

Read More »

ಅಮೆರಿಕದ ವಾಶಿಂಗ್ಟನ್‍ನಲ್ಲಿ ಫೆಲೆಸ್ತೀನ್ ಮ್ಯೂಸಿಯಂ ಆರಂಭ

ವಾಶಿಂಗ್ಟನ್, ಅ. 28: ಫೆಲೆಸ್ತೀನ್ ಮ್ಯೂಝಿಯಂ ಒಂದು ಅಮೆರಿಕದ ವಾಶಿಂಗ್ಟನ್‍ನಲ್ಲಿ ಆರಂಭಗೊಂಡಿದೆ ಎಂದು ಪಾರ್ಸ್ ಟುಡೆ ಡಾಟ್‍ಕಾಮ್ ವರದಿ ಮಾಡಿದೆ. ಫೆಲಸ್ತೀನಿಯರ ದುಃಖ ಭರಿತ ಕತೆಯನ್ನು ಇಲ್ಲಿ ಅರಿತುಕೊಳ್ಳಬಹುದಾಗಿದೆ. ಕಲಾವಿದ ಇಲ್ಲಿ ಜನರನ್ನು ನಿರ್ವಸಿತ ಗೊಳಿಸಿದ್ದು, ದೊಡ್ಡ ಗೋಡೆ ಎಬ್ಬಿಸಿ ಜನರನ್ನು ಹರಿಹಂಚಿದ್ದು ಇವೆಲ್ಲವೂ ಚಿತ್ರದ ಮೂಲಕ ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಬಸಾರಾ ನಝ್ಝಾರ್(31) ಮ್ಯೂಸಿಯಂ ಸಂಸ್ಥಾಪಕರಾಗಿದ್ದು ಹಾಲೊಕಾಸ್ಟ್ ಮ್ಯೂಝಿಯಂ ರೀತಿಯಲ್ಲಿಯೇ ಇದೆ. The first Palestinian museum in Washington …

Read More »

ಡಿಸೆಂಬರ್ 6 ಮೊದಲು ರಾಮ ಮಂದಿರ ನಿರ್ಮಾಣ ಶುರುವಾಗಲಿದೆ-ಸಾಕ್ಷಿ ಮಹಾರಾಜ್

ಹೊಸದಿಲ್ಲಿ, ಅ.28: ಇಂಡಿಯ ಟಿವಿ ನ್ಯೂಸ್ ಡಾಟ್ ಕಾಮ್ ಸಾಕ್ಷಿ ಮಹಾರಾಜ್ ಸುಪ್ರೀಂಕೋರ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿ ಮಾಡಿದೆ. 150 ವರ್ಷಗಳಷ್ಟು ಹಳೆಯ ಪ್ರಕರಣ ನಲ್ವತ್ತು ದಿವಸಗಳ ನಿರಂತರ ವಿಚಾರಣೆಯ ಬಳಿಕ ತೀರ್ಪು ಬರಲಿದೆ ಎಂದು ಅವರು ಹೇಳಿದರು. ಪತ್ರಕರ್ತರೊಂದಿಗೆ ಮಾತಾಡುತ್ತಿದ್ದ ಅವರು ಪುರಾತತ್ವ ವಿಭಾಗ ಪುರಾವೆ ನೀಡಿದೆ. ಶಿಯ ವಕ್ಫ್ ಬೋರ್ಡು ಮಂದಿರ ಕಟ್ಟಿ ಎಂದು ಬರೆದು ಕೊಟ್ಟಿದೆ. ಸುನ್ನಿ ವಕ್ಫ್ ಬೋರ್ಡು ಕೂಡ ಮಂದಿರದ ಪರವಿದೆ. …

Read More »

ಮುಸ್ಲಿಂ ಆಡಳಿತಗಾರರಿದ್ದಾಗ ಭಾರತ ಅತ್ಯಂತ ಶ್ರೀಮಂತ ದೇಶವಾಗಿತ್ತು-ಶಶಿ ತರೂರ್ (ವೀಡಿಯೊ)

ಹೊಸದಿಲ್ಲಿ, ಅ. 28: ಮುಸ್ಲಿಮ್ ದೊರೆಗಳಿದ್ದಾಗ ಭಾರತ ಅತ್ಯಂತ ಶ್ರೀಮಂತ ದೇಶಗಳ ಸಾಲಿಗೆ ಸೇರಿತ್ತು. ಬ್ರಿಟಿಷರು ಭಾರತಕ್ಕೆ ಬರುವ ಮೊದಲು ವಿಶ್ವ ಜಿಡಿಪಿಯಲ್ಲಿ ಭಾರತ ಶೇ. 27 ಭಾಗೀದಾರಿಕೆ ಹೊಂದಿತ್ತು. ಮುಸ್ಲಿಮ್ ಆಳರಸರು ಈ ದೇಶವನ್ನು ಒಂದು ಪ್ರಾಂತದಂತೆ ಒಗ್ಗೂಡಿಸಿ ದೇಶದ ಗುರುತು ಮೂಡಿಸಿದರು ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಆಸ್ಟ್ರೇಲಿಯದ ರಾಷ್ಟೀಯ ಚ್ಯಾನೆಲ್ ಎಬಿಸಿಯೊಂದಿಗಿನ ಸಂದರ್ಶನದಲ್ಲಿ ಹೇಳಿದರು. ಭಾರತ ಬಟ್ಟೆ ಉದ್ಯಮದಲ್ಲಿ ಮುಸ್ಲಿಮರು ಭಾರಿ ದೊಡ್ಡ …

Read More »