ಸಿದ್ಧಾಪುರ: ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಹಾ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿ ಸುಮಾರು ಇನ್ನೂರರಷ್ಟು ಮನೆಗಳು ಕೊಚ್ಚಿ ಹೋಗಿ, ನೂರಾರು ಮನೆಗಳು ಹಾನಿಗೀಡಾಗಿದ್ದವು. ಸಾವಿರಾರು ಮಂದಿ ಸಂಕಷ್ಟಕ್ಕೀಡಾಗಿ ಅಪಾರ ನಾಶ-ನಷ್ಟಗಳು ಸಂಭವಿಸಿದ್ದವು. ಪ್ರಸ್ತುತ ಸಂದರ್ಭದಲ್ಲಿ ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್ ಹ್ಯೂಮೇನಿಟೇರಿಯನ್ ರಿಲೀಫ್ ಸೊಸೈಟಿಯ ಕಾರ್ಯಕರ್ತರು ಧಾವಿಸಿ ಸಂತ್ರಸ್ತರಿಗೆ ಹಲವು ರೀತಿಯ ಸಹಾಯ-ಸಹಕಾರಗಳನ್ನು ಮಾಡಿದ್ದರು. ಸಿದ್ಧಾಪುರ ಎಂ.ಜಿ. ರಸ್ತೆಯಲ್ಲಿ ಕೊಡಗು ರಿಲೀಫ್ ಸೆಲ್ನ್ನು ತೆರೆದು ಹಲವು …
Read More »ದೆಹಲಿ ಹಿಂಸಾಚಾರ: ಏಳು ಬೇಡಿಕೆಗಳನ್ನು ಮುಂದಿಟ್ಟ ಜಮಾಅತೆ ಇಸ್ಲಾಮೀ ಹಿಂದ್
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಾದ ಹಿಂಸಾಚಾರದ ಬಗ್ಗೆ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಪ ಸೈಯದ್ ಸಆದತುಲ್ಲಾ ಹುಸೇನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ ಮತ್ತು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಹಾಗೂ ತಕ್ಪಣವೇ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ತುರ್ತು ಅವಶ್ಯಕತೆಯಿದೆ. ರಾಜಕಾರಣಿಗಳು ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರಚೋದನೆ ನೀಡಿದ್ದನ್ನು ನೋಡಿದ್ದೇವೆ ಮತ್ತು ಅದನ್ನನುಸರಿಸಿ ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ದಾಳಿ ನಡೆದಿರುವುದನ್ನೂ ನೋಡಿದ್ದೇವೆ. ಹಿಂಸಾಚಾರವನ್ನು ನಿಯಂತ್ರಿಸಲು ದೆಹಲಿ ಪೊಲೀಸರಿಗೆ …
Read More »ರಕ್ತದಾನ ಮಾಡಿದ ಬೆಂಗರೆಯ ನೂರಾರು ಯುವಕರು: ಸ್ಫೂರ್ತಿಯಾದ ದೃಷ್ಟಿ ಹೀನ ಯುವಕ
ಕಸ್ಬಾ ಬೆಂಗರೆ: ರಕ್ತದಾನದ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಕೆಲಸ ಆಗಬೇಕು. ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಬೆಂಗ್ರೆ ಮಹಾಜನ ಸಭೆಯ ಅಧ್ಯಕ್ಷ ಚೇತನ್ ಬೆಂಗ್ರೆ ಇವರು ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಕಸ್ಬಾ ಬೆಂಗರೆ, ಹೆಚ್.ಆರ್.ಎಸ್. ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಆಯೋಜಿಸಿದ್ದ ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಸ್ಥಳೀಯ ಕಾರ್ಪೋರೇಟರ್ ಮುನೀಬ್ ಬೆಂಗ್ರೆ ಮಾತನಾಡುತ್ತಾ, ಮಂಗಳೂರು ಆಸ್ಪತ್ರೆಗಳ ನಗರ …
Read More »ದಿಲ್ಲಿ ಹಿಂಸಾಚಾರ : ಪ್ರಾಣದ ಹಂಗು ತೊರೆದು 40ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಮಹಿಳೆ ಮುಶ್ತಾರಿ ಖಾತೂನ್
ಹೊಸದಿಲ್ಲಿ,ಮಾ.1: ಈಶಾನ್ಯ ದಿಲ್ಲಿಯ ನಿವಾಸಿ ಮುಶ್ತಾರಿ ಖಾತೂನ್, ತನ್ನ ಪತಿಯ ಆದಾಯಕ್ಕೆ ಪೂರಕವಾಗಿ ಹೊಲಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಮಹಿಳೆ. ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಾಗ ಈ ದಿಟ್ಚ ಮಹಿಳೆ ತನ್ನ ಪ್ರಾಣದ ಹಂಗು ತೊರೆದು 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ. 42 ವರ್ಷ ವಯಸ್ಸಿನ ಖಾತೂನ್ ಮನೆ ಬಿಟ್ಟು ಹೋಗುವುದೇ ತುಂಬಾ ಕಡಿಮೆ. ಫೆಬ್ರವರಿ 25ರಂದು, ತನ್ನ ಬಂಧುಗಳಿರುವ ಖಾಜೂರಿ ಖಾಸ್ ಪ್ರದೇಶವನ್ನು ಗಲಭೆಕೋರರು ಸುತ್ತುವರಿದಾಗ …
Read More »ಸಿಖ್ಖರೊಂದಿಗಿನ ಸಹರಾಣ್ ಪುರ ಭೂ ವಿವಾದ ಕೊನೆಗೊಳಿಸಿದ ಮುಸ್ಲಿಮರು-ದೆಹಲಿ ಹಿಂಸಾಕಾಂಡದಲ್ಲಿ ಮಾಡಿದ ಉಪಕಾರಕ್ಕೆ ಪ್ರತಿಸ್ಪಂದನೆ
ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಸಹರಾಣ್ ಪುರದಲ್ಲಿ ಸಿಖ್ಖರು ಮತ್ತು ಮುಸ್ಲಿಮರ ನಡುವೆ ಹತ್ತು ವರ್ಷಗಳಿಂದ ಇದ್ದ ಭೂ ವಿವಾದ ಕೊನೆಗೊಂಡಿದೆ. ಸಹರಾಣ್ ಪುರ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿರುವ ಗುರುದ್ವಾರಕ್ಕೆ ಹೊಂದಿಕೊಂಡಿರುವ ಜಮೀನಿಗೆ ಸಂಬಂಧಿಸಿದಂತೆ ಈ ವಿವಾದ ಹತ್ತು ವರ್ಷಗಳಿಂದ ನಡೆದುಬಂದಿತ್ತು. ಗುರುದ್ವಾರ ಸಂಕೀರ್ಣವನ್ನು ವಿಸ್ತರಿಸುವ ಸಲುವಾಗಿ ಗುರುದ್ವಾರ ಸಮಿತಿ ಜಮೀನು ಖರೀದಿಸಿತ್ತು. ಆ ಸ್ಥಳದಲ್ಲಿದ್ದ ಹಳೆಯ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಇದರಲ್ಲಿ ಹಳೆಯ ಮಸೀದಿಯೊಂದಿತ್ತು ಎನ್ನಲಾಗಿದೆ. ಕೊನೆಗೆ ಈ …
Read More »ದಿಲ್ಲಿ ಹಿಂಸಾಚಾರ: ದ್ವಿಚಕ್ರ ವಾಹನದಲ್ಲಿ 80 ಮುಸ್ಲಿಮರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಮೊಹೀಂದರ್ ಸಿಂಗ್
ಹೊಸದಿಲ್ಲಿ: ಫೆಬ್ರವರಿ 24ರಂದು ಈಶಾನ್ಯ ದಿಲ್ಲಿಯ ಗೋಕಲ್ ಪುರಿಯಲ್ಲಿ ಭೀಕರ ಹಿಂಸಾಚಾರಕ್ಕೆ ಜನರು ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ತಮ್ಮ ಬುಲೆಟ್ ಮೋಟಾರ್ ಸೈಕಲ್ ಹಾಗೂ ಸ್ಕೂಟಿಯಲ್ಲಿ ಸುಮಾರು 60ರಿಂದ 80 ಮಂದಿ ನೆರೆಹೊರೆಯ ಮುಸ್ಲಿಮರನ್ನು ಸುರಕ್ಷಿತ ತಾಣಕ್ಕೆ ಕಳುಹಿಸಿ ಮಾನವೀಯತೆ ಮೆರೆದವರು ಮೊಹೀಂದರ್ ಸಿಂಗ್ ಹಾಗೂ ಅವರ ಪುತ್ರ ಇಂದರ್ ಜಿತ್ ಸಿಂಗ್. ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಲಿದೆ ಎಂದು ಅರಿತ ಅಪ್ಪ-ಮಗ ತಮ್ಮ ನೆರೆಯ ಮುಸ್ಲಿಮರನ್ನು ಹತ್ತಿರದ ಕರ್ದಂಪುರಿ …
Read More »ದಿಲ್ಲಿ ಹಿಂಸಾಚಾರ ‘ಮುಸ್ಲಿಂ ಸೋದರರು ನನ್ನ ರಕ್ಷಣೆಗೆ ನಿಂತಿದ್ದಾರೆ’: ಹಿಂಸಾಚಾರದ ನಡುವೆ ನಡೆದ ತನ್ನ ವಿವಾಹದ ಬಗ್ಗೆ ಸಾವಿತ್ರಿ
ಹೊಸದಿಲ್ಲಿ: ಈಶಾನ್ಯ ದಿಲ್ಲಿಯ ಹಲವೆಡೆ ಮಂಗಳವಾರ ನಡೆದ ಭೀಕರ ಹಿಂಸಾಚಾರದಿಂದ ಆ ದಿನ ನಡೆಯಬೇಕಿದ್ದ 23 ವರ್ಷದ ಸಾವಿತ್ರಿ ಪ್ರಸಾದ್ ವಿವಾಹವನ್ನು ಅನಿವಾರ್ಯವಾಗಿ ರದ್ದು ಪಡಿಸಬೇಕಾಯಿತು. ತನ್ನ ಮನೆಯ ಹೊರಗೆ ನಡೆಯುತ್ತಿದ್ದ ಹಿಂಸಾಚಾರ ಘಟನೆಗಳಿಂದ ಕಂಗಾಲಾಗಿದ್ದ ಸಾವಿತ್ರಿ ಕಣ್ಣೀರು ಹರಿಸಿದ್ದರು. ಆಕೆಯ ನೆರೆಹೊರೆಯ ಮುಸ್ಲಿಮರು ತಾವಿದ್ದೇವೆ ಎಂದು ಧೈರ್ಯ ತುಂಬಿದ ಕಾರಣ ಆಕೆಯ ತಂದೆ ವಿವಾಹವನ್ನು ಮರುದಿನಕ್ಕೆ ನಿಗದಿಪಡಿಸಿದ್ದರು. “ನನ್ನ ಮುಸ್ಲಿಂ ಸೋದರರು ಇಂದು ನನ್ನ ರಕ್ಷಣೆಗೆ ನಿಂತಿದ್ದಾರೆ” ಎಂದು …
Read More »ಮಂದಿರ ರಕ್ಷಿಸಿದ ಮುಸಲ್ಮಾನರು, ಮಸೀದಿಗೆ ಕಾವಲು ನಿಂತ ಹಿಂದೂಗಳು ; ದ್ವೇಷದ ಮೇಲೆ ಪ್ರೀತಿಗೆ ಜಯ
ನವದೆಹಲಿ: ಪೌರತ್ವ ಮಸೂದೆ ಪರ-ವಿರೋಧ ಗುಂಪುಗಳ ನಡುವೆ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ್ದ ಗಲಭೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕಳೆದ 4 ದಿನಗಳ ಕಾಲ ಘಟಿಸಿದ್ದ ಹಿಂಸಾಚಾರ ನಾಗರಿಕರ ದೃತಿಗೆಡಿಸಿದ್ದು, ಹಲವು ಕುಟುಂಬಗಳು ತಮ್ಮ ಲಗ್ಗೇಜು ಸಹಿತ ಪ್ರದೇಶ ತೊರೆಯುತ್ತಿರುವ ಸನ್ನಿವೇಶ ಕಂಡು ಬಂದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಶೇಷವೆಂದರೆ ಬುಧವಾರ ರಾತ್ರಿಯಿಂದ ಯಾವುದೇ ಹೊಸ ಗಲಭೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ದೆಹಲಿಯ …
Read More »ಮನುಷ್ಯರೆಲ್ಲರೂ ಒಂದೇ ತಂದೆ- ತಾಯಿಯ ಮಕ್ಕಳು: ಸಾರ್ವಜನಿಕ ಕುರ್ ಆನ್ ಪ್ರವಚನದಲ್ಲಿ ಮುಹಮ್ಮದ್ ಕುಂಞಿ
ಉಳ್ಳಾಲ: ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಡಾ| ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ‘ಮಾನವ ಏಕತೆ ಮತ್ತು ಘನತೆ’ ಎಂಬ ವಿಷಯದಲ್ಲಿ ಕನ್ನಡದಲ್ಲಿ ಸಾರ್ವಜನಿಕ ಕುರ್ಆನ್ ಪ್ರವಚನ ಕಾರ್ಯಕ್ರಮ ಜರಗಿತು. ಮುಖ್ಯ ಪ್ರವಚನಕಾರರಾಗಿ ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬರಾದ ಮುಹಮ್ಮದ್ ಕುಂಞಿ ಯವರು- ಮನುಷ್ಯನು ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಾ ಇದ್ದಾನೆ. ಆದರೆ ಮನುಷ್ಯನು ತನ್ನನ್ನು ಪೋಷಿಸಿ ಬೆಳೆಸಿದ ಮಾತಾಪಿತರನ್ನು ಆರೈಕೆ ಮಾಡುತ್ತಿಲ್ಲ. ಅವರನ್ನು ವೃದ್ಧಾಶ್ರಮಕ್ಕೆ …
Read More »ದಿಲ್ಲಿ ಹಿಂಸಾಚಾರ: ಹೊತ್ತಿ ಉರಿಯುತ್ತಿದ್ದ ನೆರೆಮನೆಯಿಂದ ಪ್ರಾಣ ಒತ್ತೆ ಇಟ್ಟು 6 ಜನರನ್ನು ರಕ್ಷಿಸಿದ ಪ್ರೇಮಕಾಂತ್; ಈಗ ಸಾವು ಬದುಕಿನ ಹೋರಾಟದಲ್ಲಿ
ಹೊಸದಿಲ್ಲಿ: ಹಿಂಸಾಚಾರದಿಂದ ನಲುಗಿರುವ ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತೆ ಶಾಂತಸ್ಥಿತಿಗೆ ಮರಳುತ್ತಿದೆ. ರವಿವಾರದಿಂದ ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೂ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೌಹಾರ್ದದಿಂದಿದ್ದ ರಾಜಧಾನಿ ಇದ್ದಕ್ಕಿದ್ದಂತೆ ಕೋಮು ಹಿಂಸಾಚಾರವನ್ನು ಎದುರಿಸಿದ್ದು, ನೂರಾರು ಮನೆಗಳು, ವಾಹನಗಳು, ಮಸೀದಿ, ದರ್ಗಾಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಎಲ್ಲಾ ಕೋಮು ಹಿಂಸೆಯ ಘಟನೆಗಳ ನಡುವೆ ದಿಲ್ಲಿಯು ಹಲವು ಸೌಹಾರ್ದದ ಸನ್ನಿವೇಶಗಳಿಗೂ ಸಾಕ್ಷಿಯಾಗಿದೆ. ಹಿಂಸಾಚಾರಕ್ಕೆ ಬೆದರಿ ಮನೆಗಳಿಂದ ಪರಾರಿಯಾದ …
Read More »
IslamKannada News Portal