Home / ವಾರ್ತೆಗಳು (page 10)

ವಾರ್ತೆಗಳು

ಮುಸ್ಲಿಂ ಸಮುದಾಯದ ಕಿರಿಯ ನರಶಸ್ತ್ರಚಿಕಿತ್ಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ. ಮರಿಯಮ್ ಅಫಿಫಾ ಅನ್ಸಾರಿ

ನವದೆಹಲಿ: ಮೂರು ವರ್ಷಗಳ ಹಿಂದೆ ಹೈದರಾಬಾದ್‌ನ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ನರಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆದಿದ್ದ ಡಾ. ಮರಿಯಮ್ ಅಫಿಫಾ ಅನ್ಸಾರಿ, ತಮ್ಮ ಪದವಿ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಈಗ ಅವರು ಭಾರತದ ಮುಸ್ಲಿಂ ಸಮುದಾಯದ ಕಿರಿಯ ನರಶಸ್ತ್ರಚಿಕಿತ್ಸಕರಾಗಲು ಸಜ್ಜಾಗಿದ್ದಾರೆ. ಅವರು, 2020 ರಲ್ಲಿ ನಡೆದ ಅಖಿಲ ಭಾರತ ನೀಟ್ ಎಸ್‌ಎಸ್ ಪರೀಕ್ಷೆಯಲ್ಲಿ ಅವರು 137 ನೇ ರ್ಯಾಂಕ್ ಪಡೆದಿದ್ದರು. ಮರಿಯಮ್ ಅಫೀಫಾ ಅನ್ಸಾರಿಯವರು, 10 ನೇ ತರಗತಿಯವರೆಗೆ ಉರ್ದು …

Read More »

‘ಜಿಹಾದ್’ ಪದದ ದುರುಪಯೋಗವನ್ನು ನಿಲ್ಲಿಸಿ: ಗುಜರಾತ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅಲ್ಪಸಂಖ್ಯಾತ ಸಮನ್ವಯ ಸಮಿತಿ

ನವದೆಹಲಿ: ‘ಜಿಹಾದ್’ ಪದದ ದುರುಪಯೋಗವನ್ನು ನಿಲ್ಲಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಸಮನ್ವಯ ಸಮಿತಿ ಸೋಮವಾರ ಗುಜರಾತ್ ರಾಜ್ಯಪಾಲ ಆಚಾರ್ಯ ದೇವರಾತ್ ಅವರಿಗೆ ಮನವಿ ಸಲ್ಲಿಸಿದೆ. ಮುಸ್ಲಿಂ ಸಮುದಾಯವನ್ನು ಕೆಣಕಲು ಮತ್ತು ವಿವಿಧ ಸಮುದಾಯಗಳಲ್ಲಿ ದ್ವೇಷವನ್ನು ಹರಡಲು ‘ಜಿಹಾದ್’ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜನರು ಮತ್ತು ರಾಜಕೀಯ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎನ್ಜಿಒ ಆಗ್ರಹಿಸಿದೆ. ಎನ್‌ಜಿಒದ ಕನ್ವೀನರ್ ಮುಜಾಹಿದ್ ನಫೀಸ್, ಮುಸ್ಲಿಂ ಮಿರರ್ ಜೊತೆ ಮಾತನಾಡುತ್ತಾ , ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ …

Read More »

ಈ ಕಾರಣಕ್ಕೆ ಅಯೋಧ್ಯೆಯ ರಾಮ್ ಮಂದಿರಕ್ಕೆ 1 ಲಕ್ಷ ದೇಣಿಗೆ ನೀಡಿದ ಮುಸ್ಲಿಂ ಉದ್ಯಮಿ

ಚೆನ್ನೈ : ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ನಗರದ ಮುಸ್ಲಿಂ ಉದ್ಯಮಿಯೊಬ್ಬರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹ 1 ಲಕ್ಷ ದೇಣಿಗೆ ನೀಡಿದ್ದಾರೆ, ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ತಮಿಳುನಾಡಿನ ಭಕ್ತರು ದಾನ ಮಾಡುತ್ತಿದ್ದಾರೆ. ದೇವಾಲಯ ನಿರ್ಮಾಣಕ್ಕಾಗಿ ಕೇಂದ್ರವು ಸ್ಥಾಪಿಸಿದ ಶ್ರೀ ರಾಮ್ ಜನಂಭೂಮಿ ತೀರ್ಥ ಕ್ಷೇತ್ರ (ಎಸ್‌ಆರ್‌ಜೆಟಿಕೆ) ಯೊಂದಿಗೆ ₹ 10, 100 ಮತ್ತು ₹ 1,000 ದೇಣಿಗೆ ಕೂಪನ್‌ಗಳೊಂದಿಗೆ ಹೊರಬರುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನರು ದೇಣಿಗೆ ನೀಡಲು …

Read More »

ಬಾಂಗ್ಲಾದೇಶದ ಕೆಲಸದಾಕೆಯನ್ನು ಥಳಿಸಿ ಕೊಂದ ಸೌದಿ ಮಹಿಳೆಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ರಿಯಾದ್: ಬಾಂಗ್ಲಾದೇಶದ ಕೆಲಸದಾಕೆಯನ್ನು ಥಳಿಸಿದ ಸೌದಿ ಮಹಿಳೆಯೊಬ್ಬರಿಗೆ ಭಾನುವಾರ ಮರಣದಂಡನೆ ವಿಧಿಸಲಾಗಿದೆ. ಆಯೆಷಾ ಅಲ್-ಜಿಜಾನಿ ಎಂದು ಗುರುತಿಸಲ್ಪಟ್ಟ ಆರೋಪಿಯು ತನ್ನ 40 ವರ್ಷದ ಬಾಂಗ್ಲಾದೇಶದ ಸೇವಕಿ ಅಬಿರಾನ್ ಬೇಗಂನನ್ನು 2019 ರ ಮಾರ್ಚ್‌ನಲ್ಲಿ ನಿರ್ದಯವಾಗಿ ಥಳಿಸಿ ಕೊಂದದ್ದಕ್ಕಾಗಿ ಸೌದಿ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಲಾಗಿದೆ. ಬಾಂಗ್ಲಾದೇಶದ ವಲಸಿಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೇಗಂರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ನೆರವು ನೀಡದ ಕಾರಣಕ್ಕೆ ಮತ್ತು ಆಕೆಯನ್ನು ಕಾನೂನು ಬಾಹಿರವಾಗಿ ಮನೆಯ …

Read More »

ಸಿರಿಯಾಕ್ಕೆ 2000 ಮೆಟ್ರಿಕ್ ಟನ್ ಅಕ್ಕಿ ಉಡುಗೊರೆ ನೀಡಿದ ಭಾರತ ಸರಕಾರ ; ಉದ್ದೇಶವೇನು ಗೊತ್ತೇ

ನವದೆಹಲಿ: ಮಧ್ಯಪ್ರಾಚ್ಯ ದೇಶದಲ್ಲಿ ಆಹಾರ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತವು ಸಿರಿಯಾಕ್ಕೆ 2000 ಮೆಟ್ರಿಕ್ ಟನ್ ಅಕ್ಕಿಯನ್ನು ಉಡುಗೊರೆಯಾಗಿ ನೀಡಿದೆ. 1000 ಮೆಟ್ರಿಕ್ ಟನ್ ಅಕ್ಕಿಯನ್ನು ಮೊದಲ ಬಾರಿಗೆ ಸಿರಿಯಾದ ಭಾರತ ರಾಯಭಾರಿ ಹಿಫ್ಜುರ್ ರಹಮಾನ್ ಅವರು ಸ್ಥಳೀಯ ಆಡಳಿತ ಸಚಿವರು ಮತ್ತು ಸುಪ್ರೀಂ ರಿಲೀಫ್ ಕಮಿಟಿ ಮುಖ್ಯಸ್ಥ ಹುಸೇನ್ ಮಖ್ಲೌಫ್ ಅವರಿಗೆ ಗುರುವಾರ ಹಸ್ತಾಂತರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ಉಳಿದ 1000 ಮೆಟ್ರಿಕ್ ಟನ್ …

Read More »

“ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆ

ಮಂಗಳೂರು: “ಸದೃಢ ಕುಟುಂಬ, ಸುಭದ್ರ ಸಮಾಜ” ಎಂಬ ಧ್ಯೇಯ ವಾಕ್ಯದಡಿ ಜಮಾಅತೇ ಇಸ್ಲಾಮೀ ಹಿಂದ್ ವತಿಯಿಂದ ದೇಶದಾದ್ಯಂತ ಫೆಬ್ರವರಿ19 ರಿಂದ 28/2021 ರ ವರೆಗೆ ಅಭಿಯಾನ ನಡೆಯಲಿದೆ. ಈ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಫೆಬ್ರವರಿ 28 ರಂದು 30 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. “ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದಲ್ಲಿ ಕನ್ನಡ, ಇಂಗ್ಲಿಷ್, ಬ್ಯಾರಿ, ಉರ್ದು ಈ …

Read More »

ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷ ಹರಡಲು ಕಪಿಲ್ ಮಿಶ್ರ ಗ್ರೂಪ್ ರಚಿಸಿದ್ದಾರೆ ; ನ್ಯೂಸ್ ಲಾಂಡ್ರಿ ವರದಿ

ನವದೆಹಲಿ : ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಗಲಭೆಗಳ ಮಾಸ್ಟರ್ ಮೈಂಡ್ ಎಂದು ಪರಿಗಣಿಸಲ್ಪಟ್ಟ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನಡೆಸುತ್ತಿರುವ ಆನ್‌ಲೈನ್ ಗ್ರೂಪ್ ಗಳ ತನಿಖೆಯನ್ನು ನ್ಯೂಸ್ ಲಾಂಡ್ರಿ ನಡೆಸಿದ್ದು, ಕೋಮು ದ್ವೇಷವನ್ನು ಸೃಷ್ಟಿಸಲು ಸುಮಾರು 20,000 ಸಮರ್ಪಿತ ಜನರ ಜಾಲವನ್ನು ನಡೆಸುತ್ತಿದ್ದಾನೆ ಎಂಬ ತೀರ್ಮಾನಕ್ಕೆ ಸ್ವತಂತ್ರ ಮೀಡಿಯಾ ಹೌಸ್ ನ್ಯೂಸ್ ಲಾಂಡ್ರಿ ಬಂದಿದೆ. ಮಿಶ್ರಾ ಅವರ ಆನ್‌ಲೈನ್ ನೆಟ್‌ವರ್ಕ್‌ನ ಟೆಲಿಗ್ರಾಮ್ ಗ್ರೂಪ್ ಗಳು ಅದು ಹೇಗೆ ಕಾರ್ಯನಿರ್ವಹಿಸುತ್ತದೆ …

Read More »

ಗ್ವಾಂಟನಾಮೊ ಬೇ ಜೈಲನ್ನು ಮುಚ್ಚುತ್ತೇವೆ ; ಶ್ವೇತ ಭವನ

ವಾಷಿಂಗ್ಟನ್: ವಿಶ್ವದಾದ್ಯಂತ ಮಾನವ ಹಕ್ಕು ಉಲ್ಲಂಘನೆ ಚರ್ಚೆಗೆ ಗ್ರಾಸವಾಗಿದ್ದ ಕುಪ್ರಸಿದ್ಧ ಗ್ವಾಂಟನಾಮೊ ಜೈಲನ್ನು ಮುಚ್ಚುವ ಗುರಿ ಹೊಂದಿದೆ ಎಂದು ಇದೀಗ ಎಂದು ಶ್ವೇತಭವನ ಹೇಳಿದೆ. ಯು.ಎಸ್. ಮಿಲಿಟರಿ ಜೈಲಿನ ಗ್ವಾಂಟನಾಮೊ ಬೇ ಈ ಅವಧಿ ಮುಗಿಯುವ ಮೊದಲು ಮುಚ್ಚಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಜಾಕಿ ಸುದ್ದಿಗಾರರಿಗೆ ತಿಳಿಸಿದರು. “ಖಂಡಿತ, ಇದು ನಮ್ಮ ಉದ್ದೇಶಗಳಲ್ಲಿ ಒಂದಾಗಿದೆ, ”ಎಂದು ಅವರು ಹೇಳಿದರು. ಒಬಾಮಾ-ಬಿಡೆನ್ ಆಡಳಿತವು ಗ್ವಾಂಟನಾಮೊವನ್ನು ಎರಡೂ ಅಧ್ಯಕ್ಷೀಯ ಪ್ರಚಾರಗಳಲ್ಲಿ …

Read More »

ಶಾಂತಿ, ಸಹಬಾಳ್ವೆ ಇಂದಿನ ಅಗತ್ಯ: ಶಾಂತಿ ಪ್ರಕಾಶನದ ನೂತನ ಕಚೇರಿ ಉದ್ಘಾಟಿಸಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್

ಮಂಗಳೂರು: “ಈಗ ನಮ್ಮೆಲ್ಲರಿಗೂ ಬೇಕಾಗಿರುವುದು ಶಾಂತಿ, ಸಹಬಾಳ್ವೆ. ದ್ವೇಷ ತುಂಬಿದ ಇಂದಿನ ವಾತಾವರಣದಲ್ಲಿ ಇದರ ಅಗತ್ಯ ಬಹಳವಿದೆ. ಈಗಿನ ಕಾಲಮಾನಕ್ಕೆ ಬೇಕಾದಷ್ಟು ಅಂಶಗಳು ಎಲ್ಲ ಧರ್ಮಗ್ರಂಥಗಳಲ್ಲಿವೆ. ಧರ್ಮಗಳೆಲ್ಲ ಕಲಿಸುವುದು ನೀತಿ, ಚಾರಿತ್ರ್ಯ, ಸುಂದರ ಮತ್ತು ಶಾಂತಿಯುತ ಜೀವನ ವಿಧಾನವನ್ನಾಗಿದೆ. ಅವುಗಳನ್ನೇ ನಾವು ಪಾಲಿಸಿಕೊಂಡು ಬಂದರೆ ಜೀವನ ಸಾರ್ಥಕವಾಗುತ್ತದೆ” ಎಂದು ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಇದರ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಹೇಳಿದರು. ಅವರು ನಗರದ ಸಹಕಾರಿ ಸದನದಲ್ಲಿ …

Read More »

ಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ

ಪುಸ್ತಕ ಪರಿಚಯ ಇಸ್ಲಾಂ, ಕುರಾನ್ ಮತ್ತು ಪ್ರವಾದಿ ಮಹಮದ್; ಈ ಮೂರರ ಬಗ್ಗೆ ಮುಸಲ್ಮಾನೇತರ ಜನರು ಅನೇಕಾನೇಕ ತಪ್ಪು ಅಭಿಪ್ರಾಯಗಳನ್ನು ಹೊಂದಿರುವುದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಇಸ್ಲಾಮೋಫೋಭಿಯಾವನ್ನು ಹುಟ್ಟುಹಾಕಲು ಒಂದಷ್ಟು ರಾಷ್ಟ್ರಗಳು ಯಶಸ್ವಿ ಪ್ರಯತ್ನವನ್ನು ಮಾಡಿವೆ. ಸಾಮಾನ್ಯ ಜನರು ಹರಡುವ ಸಾಮಾನ್ಯ ತಪ್ಪು ಮಾಹಿತಿಯೆಂದರೆ ಇಸ್ಲಾಂ ಎಂಬ ಧರ್ಮವನ್ನು ಪ್ರವಾದಿ ಮಹಮದರು ಸ್ಥಾಪಿಸಿದರು ಎಂಬುದು. ಇಸ್ಲಾಂ ಮಹಮದರ ಪೂರ್ವದಲ್ಲಿಯೇ ಅರಬರಲ್ಲಿ ಇದ್ದಂತಹ ಒಂದು ಧಾರ್ಮಿಕತೆ. ಅದಕ್ಕೊಂದು ಅಚ್ಚುಕಟ್ಟಾದ ಕ್ರಮವನ್ನು ಒದಗಿಸುವ …

Read More »