Home / ವಾರ್ತೆಗಳು / ಸಿರಿಯಾಕ್ಕೆ 2000 ಮೆಟ್ರಿಕ್ ಟನ್ ಅಕ್ಕಿ ಉಡುಗೊರೆ ನೀಡಿದ ಭಾರತ ಸರಕಾರ ; ಉದ್ದೇಶವೇನು ಗೊತ್ತೇ

ಸಿರಿಯಾಕ್ಕೆ 2000 ಮೆಟ್ರಿಕ್ ಟನ್ ಅಕ್ಕಿ ಉಡುಗೊರೆ ನೀಡಿದ ಭಾರತ ಸರಕಾರ ; ಉದ್ದೇಶವೇನು ಗೊತ್ತೇ

ನವದೆಹಲಿ: ಮಧ್ಯಪ್ರಾಚ್ಯ ದೇಶದಲ್ಲಿ ಆಹಾರ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತವು ಸಿರಿಯಾಕ್ಕೆ 2000 ಮೆಟ್ರಿಕ್ ಟನ್ ಅಕ್ಕಿಯನ್ನು ಉಡುಗೊರೆಯಾಗಿ ನೀಡಿದೆ.

1000 ಮೆಟ್ರಿಕ್ ಟನ್ ಅಕ್ಕಿಯನ್ನು ಮೊದಲ ಬಾರಿಗೆ ಸಿರಿಯಾದ ಭಾರತ ರಾಯಭಾರಿ ಹಿಫ್ಜುರ್ ರಹಮಾನ್ ಅವರು ಸ್ಥಳೀಯ ಆಡಳಿತ ಸಚಿವರು ಮತ್ತು ಸುಪ್ರೀಂ ರಿಲೀಫ್ ಕಮಿಟಿ ಮುಖ್ಯಸ್ಥ ಹುಸೇನ್ ಮಖ್ಲೌಫ್ ಅವರಿಗೆ ಗುರುವಾರ ಹಸ್ತಾಂತರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಉಳಿದ 1000 ಮೆಟ್ರಿಕ್ ಟನ್ ಅಕ್ಕಿ ಫೆಬ್ರವರಿ 18 ರಂದು ಸಿರಿಯಾವನ್ನು ತಲುಪುವ ನಿರೀಕ್ಷೆಯಿದೆ. ತುರ್ತು ಮಾನವೀಯ ನೆರವುಗಾಗಿ ಸಿರಿಯನ್ ಸರ್ಕಾರದ ಮನವಿಗೆ ಸ್ಪಂದಿಸಿ ಅಕ್ಕಿ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

“ಭಾರತ ಮತ್ತು ಸಿರಿಯಾ ಐತಿಹಾಸಿಕವಾಗಿ ನಿಕಟ ಮತ್ತು ಸ್ನೇಹ ಸಂಬಂಧವನ್ನು ಹೊಂದಿವೆ. ಭಾರತೀಯ ಸರ್ಕಾರವು ಯಾವಾಗಲೂ ಸಿರಿಯಾದ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ, ಮತ್ತು ನಮ್ಮ ದ್ವಿಪಕ್ಷೀಯ ಸಹಕಾರವು ಹಲವಾರು ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಸುವ ಯೋಜನೆಗಳ ಮೂಲಕ ಆಂತರಿಕ ಸಂಘರ್ಷದ ವರ್ಷಗಳಲ್ಲಿಯೂ ಸಹ ಮುಂದುವರೆದಿದೆ” ಎಂದು ಸಚಿವಾಲಯ ಹೇಳಿದೆ.

SHARE THIS POST VIA

About editor

Check Also

ಉಪವಾಸನಿರತ ಗಾಝಾ ನಿವಾಸಿಗಳ ಹಸಿವಿನ ಸಂಕಷ್ಟವನ್ನು ಅಪಹಾಸ್ಯದ ವ್ಯಂಗ್ಯಚಿತ್ರವಾಗಿಸಿದ ಫ್ರೆಂಚ್ ಪತ್ರಿಕೆ

ರಮಝಾನಿನಲ್ಲಿ ಆಹಾರ ಇಲ್ಲದೆ ಕಷ್ಟ ಪಡುತ್ತಿರುವ ಗಾಝಾದ ಜನರ ಬಗ್ಗೆ ಫ್ರೆಂಚ್ ಪತ್ರಿಕೆ ಲಿಬರೇಷನ್ ಅಪಹಾಸ್ಯದ ಕಾರ್ಟೂನ್ ಪ್ರಕಟಿಸಿದೆ. ಗಾಝಾದಲ್ಲಿ …

Leave a Reply

Your email address will not be published. Required fields are marked *