ನವದೆಹಲಿ: ‘ಜಿಹಾದ್’ ಪದದ ದುರುಪಯೋಗವನ್ನು ನಿಲ್ಲಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಸಮನ್ವಯ ಸಮಿತಿ ಸೋಮವಾರ ಗುಜರಾತ್ ರಾಜ್ಯಪಾಲ ಆಚಾರ್ಯ ದೇವರಾತ್ ಅವರಿಗೆ ಮನವಿ ಸಲ್ಲಿಸಿದೆ. ಮುಸ್ಲಿಂ ಸಮುದಾಯವನ್ನು ಕೆಣಕಲು ಮತ್ತು ವಿವಿಧ ಸಮುದಾಯಗಳಲ್ಲಿ ದ್ವೇಷವನ್ನು ಹರಡಲು ‘ಜಿಹಾದ್’ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜನರು ಮತ್ತು ರಾಜಕೀಯ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎನ್ಜಿಒ ಆಗ್ರಹಿಸಿದೆ.
ಎನ್‌ಜಿಒದ ಕನ್ವೀನರ್ ಮುಜಾಹಿದ್ ನಫೀಸ್, ಮುಸ್ಲಿಂ ಮಿರರ್ ಜೊತೆ ಮಾತನಾಡುತ್ತಾ , ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಭಾನುವಾರ ವಡೋದರಾದಲ್ಲಿ ಮಾಡಿದ ಭಾಷಣದ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಲವ್ ಜಿಹಾದ್ ಮುಂದಿಟ್ಟುಕೊಂಡು ಎಲ್ಲಾ ಚಟುವಟಿಕೆಗಳನ್ನು ಅನುಮತಿಸದಿರಲು ಸರ್ಕಾರ ಕಾನೂನು ತರಲಿದೆ ಎಂದು ಹೇಳಿದ್ದಾರೆ.
”ರಾಜ್ಯದ ಓರ್ವ ಮುಖ್ಯಮಂತ್ರಿಯಾಗಿ ಜಿಹಾದ್‌ನ ಅರ್ಥವನ್ನು ತಿಳಿಯಲು ಅವರು ಯಾವುದೇ ಮದರಸಾವನ್ನು ಸಂಪರ್ಕಿಸಬಹುದಿತ್ತು. ಆಗ ಅವರಿಗೆ ಇಸ್ಲಾಮಿನಲ್ಲಿ‘ ಹೋರಾಟ’ಕ್ಕೆ ಇರುವ ಸ್ಪಷ್ಟ ಉದ್ದೇಶ ಮತ್ತು ಜಿಹಾದನ್ನು ಕೆಟ್ಟ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂಬುದನ್ನು ಅವರು ತಿಳಿಯುತ್ತಿದ್ದರು ಎಂದು ಹೇಳಿದರು.
“ಜಿಹಾದ್’ ಪದವನ್ನು ಉದ್ದೇಶಪೂರ್ವಕವಾಗಿ ಬಳಸುವುದು ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದೆ ಮತ್ತು ಇದು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ನಿಯೋಗವು ಹೇಳಿದೆ.
IslamKannada News Portal
