Home / ವಾರ್ತೆಗಳು / ಮುಸ್ಲಿಂ ಸಮುದಾಯದ ಕಿರಿಯ ನರಶಸ್ತ್ರಚಿಕಿತ್ಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ. ಮರಿಯಮ್ ಅಫಿಫಾ ಅನ್ಸಾರಿ

ಮುಸ್ಲಿಂ ಸಮುದಾಯದ ಕಿರಿಯ ನರಶಸ್ತ್ರಚಿಕಿತ್ಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ. ಮರಿಯಮ್ ಅಫಿಫಾ ಅನ್ಸಾರಿ

ನವದೆಹಲಿ: ಮೂರು ವರ್ಷಗಳ ಹಿಂದೆ ಹೈದರಾಬಾದ್‌ನ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ನರಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆದಿದ್ದ ಡಾ. ಮರಿಯಮ್ ಅಫಿಫಾ ಅನ್ಸಾರಿ, ತಮ್ಮ ಪದವಿ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಈಗ ಅವರು ಭಾರತದ ಮುಸ್ಲಿಂ ಸಮುದಾಯದ ಕಿರಿಯ ನರಶಸ್ತ್ರಚಿಕಿತ್ಸಕರಾಗಲು ಸಜ್ಜಾಗಿದ್ದಾರೆ. ಅವರು, 2020 ರಲ್ಲಿ ನಡೆದ ಅಖಿಲ ಭಾರತ ನೀಟ್ ಎಸ್‌ಎಸ್ ಪರೀಕ್ಷೆಯಲ್ಲಿ ಅವರು 137 ನೇ ರ್ಯಾಂಕ್ ಪಡೆದಿದ್ದರು.

ಮರಿಯಮ್ ಅಫೀಫಾ ಅನ್ಸಾರಿಯವರು, 10 ನೇ ತರಗತಿಯವರೆಗೆ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ.

ಅವರು ಮಹಾರಾಷ್ಟ್ರದ ಮಾಲೆಗಾಂವ್‌ನ ತಹಸೀನ್ ಶಾಲೆಯಲ್ಲಿ ಏಳನೇ ತರಗತಿವರೆಗೆ ಕಲಿತರು. ಬಳಿಕ ಹೈದರಾಬಾದ್ಗೆ ತೆರಳಿ ರಾಜಕುಮಾರಿ ದುರುಶಾವರ್ ಬಾಲಕಿಯರ ಶಾಲೆಗೆ ಪ್ರವೇಶ ಪಡೆದರು. ಅವರು 10 ನೇ ತರಗತಿ ಪರೀಕ್ಷೆಯಲ್ಲಿ ತನ್ನ ಶಾಲೆಯಲ್ಲಿ ಅಗ್ರಸ್ಥಾನ ಪಡೆದರು ಮತ್ತು ಚಿನ್ನದ ಪದಕ ವಿಜೇತರಾಗಿದ್ದರು.

ಉನ್ನತ ಶ್ರೇಣಿಯೊಂದಿಗೆ ಹೈದರಾಬಾದ್‌ನ ಎಂಎಸ್ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ನಂತರ, ಅಫೀಫಾ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ನಲ್ಲಿ ಉಚಿತವಾಗಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು.

ತನ್ನ ಎಂಬಿಬಿಎಸ್ ಕೋರ್ಸ್ನಲ್ಲಿ ಐದು ಚಿನ್ನದ ಪದಕಗಳನ್ನು ಪಡೆದರು. 2017 ರಲ್ಲಿ ಕೋರ್ಸ್ ಮುಗಿಸಿದ ನಂತರ, ಅದೇ ಕಾಲೇಜಿನಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಉಚಿತವಾಗಿ ಪ್ರವೇಶ ಪಡೆಯಲು ಯಶಸ್ವಿಯಾದರು. 2019 ರಲ್ಲಿ, ಅವರು ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್‌ನಿಂದ ಎಂಆರ್‌ಸಿಎಸ್ ಎಂಬ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.

2020 ರಲ್ಲಿ ಅವರು ಡಿಪ್ಲೊಮೇಟ್ ಆಫ್ ನ್ಯಾಷನಲ್ ಬೋರ್ಡ್ ಕೋರ್ಸ್ ಮಾಡಿದರು. ಇದು ಭಾರತದ ವಿಶೇಷ ವೈದ್ಯರಿಗೆ ನೀಡಲಾಗುವ ವಿಶೇಷ ಸ್ನಾತಕೋತ್ತರ ಪದವಿ. 2020 ರ ನೀಟ್ ಎಸ್‌ಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ನಂತರ, ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ಎಂಸಿಎಚ್‌ನಲ್ಲಿ ಉಚಿತ ಪ್ರವೇಶ ಪಡೆದರು.

ಮುಸ್ಲಿಂ ಮಿರರ್ ಜೊತೆ ಮಾತನಾಡಿದ ಅವರು, “ನನ್ನ ಯಶಸ್ಸು ಅಲ್ಲಾಹನ ಕೊಡುಗೆ ಮತ್ತು ಜವಾಬ್ದಾರಿಯಾಗಿದೆ. ಈ ವೃತ್ತಿಯ ಮೂಲಕ ಸಮಾಜ ಸಮುದಾಯದ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ. ನಿರಂತರ ಪರಿಶ್ರಮ ಮತ್ತು ಪ್ರಯತ್ನದಿಂದ ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು” ಎಂದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …