ಮಂಗಳೂರು: “ಸದೃಢ ಕುಟುಂಬ, ಸುಭದ್ರ ಸಮಾಜ” ಎಂಬ ಧ್ಯೇಯ ವಾಕ್ಯದಡಿ ಜಮಾಅತೇ ಇಸ್ಲಾಮೀ ಹಿಂದ್ ವತಿಯಿಂದ ದೇಶದಾದ್ಯಂತ ಫೆಬ್ರವರಿ19 ರಿಂದ 28/2021 ರ ವರೆಗೆ ಅಭಿಯಾನ ನಡೆಯಲಿದೆ. ಈ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಫೆಬ್ರವರಿ 28 ರಂದು 30 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
“ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದಲ್ಲಿ ಕನ್ನಡ, ಇಂಗ್ಲಿಷ್, ಬ್ಯಾರಿ, ಉರ್ದು ಈ ಯಾವುದಾದರೊಂದು ಭಾಷೆಯಲ್ಲಿ 5-7 ನಿಮಿಷ ಗಳಿಗೆ ಸೀಮಿತವಾಗಿ ಮಾತನಾಡಲು ಅವಕಾಶವಿದೆ. ಆಸಕ್ತರು ಫೆಬ್ರವರಿ 25 ರ ಒಳಗಾಗಿ ತಮ್ಮ ಹೆಸರನ್ನು 94801469807 ಮೊಬೈಲ್ ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ, ನೋಂದಾಯಿಸಬೇಕೆಂದು ಕೇಳಿಕೊಳ್ಳಲಾಗಿದೆ.
ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವಿರುವುದು. ಸ್ಪರ್ಧೆಯು, ದಿನಾಂಕ 28-2- 2021 ಆದಿತ್ಯವಾರ 10:30 ವರೆಗೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ( ಕಂಕನಾಡಿ- ಮಂಗಳೂರು) ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ವಲಯದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಹೊರತರಲು ಸುವರ್ಣ ಅವಕಾಶವಾಗಿದ್ದು, ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಜಮಾಅತೆ ಇಸ್ಲಾಮೀ ಮಂಗಳೂರು ಮಹಿಳಾ ವಿಭಾಗವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.
IslamKannada News Portal
