Home / ಲೇಖನಗಳು / ಮೀನು ತಿನ್ನುವುದರಲ್ಲಿ ಯಾಕೋ ಮುಂದೆ!! ಮೀನಿನ ಅಧ್ಯಯನದಲ್ಲಿ ಯಾಕೆ ಹಿಂದೆ!!

ಮೀನು ತಿನ್ನುವುದರಲ್ಲಿ ಯಾಕೋ ಮುಂದೆ!! ಮೀನಿನ ಅಧ್ಯಯನದಲ್ಲಿ ಯಾಕೆ ಹಿಂದೆ!!

  • ರಫೀಕ್ ಮಾಸ್ಟರ್

ನಾವು ಮೀನು ಪ್ರಿಯರು. ಬಗೆ ಬಗೆಯ ಮೀನುಗಳನ್ನು ತಿನ್ನುವುದೆಂದರೆ ನಮಗೆ ಬಹಳ ಇಷ್ಟ. ಮೀನು ವ್ಯಾಪಾರದಲ್ಲೂ ನಮ್ಮದು ಎತ್ತಿದ ಕೈ. ದೊಡ್ಡ ದೊಡ್ಡ ಮೀನಿನ ಫ್ಯಾಕ್ಟರಿಗಳು ನಮ್ಮವರಿಗಿದೆ. ಮೀನನ್ನು ರಫ್ತು ಮಾಡುವ ಹೆಸರಾಂತ ಯಶಸ್ವಿ ಉದ್ಯಮಿಗಳು ನಮ್ಮವರಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ಆದರೆ ಮೀನಿನ ಬಗ್ಗೆ ಎಷ್ಟು ಅಧ್ಯಯನ, ಸಂಶೋಧನೆ ನಾವು ಮಾಡುತ್ತೇವೆ ಎಂದು ತಿಳಿಯಬೇಕಾದರೆ ನಮ್ಮ ಪಕ್ಕದಲ್ಲೇ ಇರುವ ಮೀನುಗಾರಿಕಾ ಕಾಲೇಜಿಗೆ ಭೇಟಿ ಕೊಡಬೇಕು.

ಇಡೀ ಕರ್ನಾಟಕಕ್ಕೆ ಇರುವ ಒಂದೇ ಒಂದು Fisheries College ನಮ್ಮ ಮಂಗಳೂರಿನ ಎಕ್ಕೂರಿನಲ್ಲಿದೆ. ಇಲ್ಲಿ ಮೀನಿನ ಬಗ್ಗೆ ವಿಶೇಷ ಅಧ್ಯಯನ, ಸಂಶೋಧನೆ, ತರಬೇತಿ ನೀಡಲಾಗುತ್ತದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳ ಪೈಕಿ ನಮ್ಮ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ತೀರಾ ವಿರಳ. ಬೆರಳೆಣಿಕೆಯಷ್ಟೂ ಇಲ್ಲ. ಕಾರಣ ನಮ್ಮವರಿಗೆ ಇದರ ಮಹತ್ವ ಗೊತ್ತಿಲ್ಲ. ನಮಗೆ ಬೇಕಾಗಿರುವುದು ಕೇವಲ ಡಾಕ್ಟರ್, ಇಂಜಿನಿಯರ್.

ಮೀನುಗಾರಿಕಾ ವಿಜ್ಞಾನದ ಕೋರ್ಸನ್ನು ಕಲಿತು ಮುಂದೆ ಸರಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ಪಡೆಯಬಹುದು. ಖಾಸಗಿಯಾಗಿ ಬಹಳಷ್ಟು ಉದ್ಯೋಗ ಅವಕಾಶಗಳಿವೆ. ಸಂಶೋಧಕರಾಗಿ ಸೇವೆ ಸಲ್ಲಿಸಬಹುದು. ಸ್ವಂತ ಉದ್ದಿಮೆಯನ್ನು ಸಹ ಪ್ರಾರಂಭಿಸಬಹುದು.

ಸಕಲೇಶಪುರದ ಆದಂ ನಿಝಾಮ್ ಪ್ರತಿಭಾವಂತ ವಿದ್ಯಾರ್ಥಿ. PUC science ನಲ್ಲಿ 96% ಅಂಕ ಪಡೆದ ಕಾಲೇಜಿನ ಟಾಪರ್. ಬೇರೆಲ್ಲಾ ಅವಕಾಶಗಳಿದ್ದರೂ ಸಿಇಟಿ ಮೂಲಕ BFSc ಕೋರ್ಸಿಗೆ ದಾಖಲಾದರು. ಮುಂದೆ ಅದೇ ವಿಷಯದಲ್ಲಿ ಉನ್ನತ ಸಂಶೋಧನೆ ಮಾಡುವ ಗುರಿ ಅವರಿಗಿದೆ. ಸರ್ವಶಕ್ತನು ಅವರಿಗೆ ಉನ್ನತ ಭವಿಷ್ಯವನ್ನು ಕೊಡಲಿ ಎಂದು ಹಾರೈಸಿ ನನ್ನ ಮನೆಯಲ್ಲಿ ಇಂದು ಅವರಿಗೆ ಸರಳ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಜಗತ್ತು ತುಂಬಾ ವಿಶಾಲವಾಗಿದೆ.  ವಿಫುಲವಾದ ಅವಕಾಶಗಳು ನಮ್ಮ ಮುಂದಿವೆ. ಕೇವಲ ಡಾಕ್ಟರ್, ಇಂಜಿನಿಯರ್ ಎಂದು ಮಾತ್ರ ಚಿಂತಿಸದೆ ಇಂತಹ ಕೋರ್ಸುಗಳಿಗೂ ಸೇರಿ ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಹುದು.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *