ಹೊಸದಿಲ್ಲಿ, ಅ. 28: ಮುಸ್ಲಿಮ್ ದೊರೆಗಳಿದ್ದಾಗ ಭಾರತ ಅತ್ಯಂತ ಶ್ರೀಮಂತ ದೇಶಗಳ ಸಾಲಿಗೆ ಸೇರಿತ್ತು. ಬ್ರಿಟಿಷರು ಭಾರತಕ್ಕೆ ಬರುವ ಮೊದಲು ವಿಶ್ವ ಜಿಡಿಪಿಯಲ್ಲಿ ಭಾರತ ಶೇ. 27 ಭಾಗೀದಾರಿಕೆ ಹೊಂದಿತ್ತು. ಮುಸ್ಲಿಮ್ ಆಳರಸರು ಈ ದೇಶವನ್ನು ಒಂದು ಪ್ರಾಂತದಂತೆ ಒಗ್ಗೂಡಿಸಿ ದೇಶದ ಗುರುತು ಮೂಡಿಸಿದರು ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಆಸ್ಟ್ರೇಲಿಯದ ರಾಷ್ಟೀಯ ಚ್ಯಾನೆಲ್ ಎಬಿಸಿಯೊಂದಿಗಿನ ಸಂದರ್ಶನದಲ್ಲಿ ಹೇಳಿದರು.
ಭಾರತ ಬಟ್ಟೆ ಉದ್ಯಮದಲ್ಲಿ ಮುಸ್ಲಿಮರು ಭಾರಿ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿ ಕೊಂಡಿದ್ದರು. ಬ್ರಿಟಿಷರು ಭಾರತಕ್ಕೆ ಬಂದ ವೇಳೆ ಭಾರತ ಶ್ರೀಮಂತ ದೇಶದ ಪಟ್ಟಿಯಲ್ಲಿತ್ತು. ಜಗತ್ತಿನ ಮಾರುಕಟ್ಟೆಯಲ್ಲಿ ಭಾರತದ ಪಾಲುದಾರಿಕೆ ಶೇ. 27 ಆಗಿತ್ತು. ಹದಿನೆಂಟನೆ ಶತಮಾನದಲ್ಲಿ ಇದು ಶೇ 23ಕ್ಕೆ ಇಳಿಯಿತು. ಇನ್ನೂರು ವರ್ಷಗಳಿಗಿಂತ ಹೆಚ್ಚು ಶೋಷಣೆ, ಲೂಟಿ, ವಿನಾಶದ ನಂತರ ಬ್ರಿಟಿಷರು ಭಾರತ 1947ರಲ್ಲಿ ಭಾರತ ಬಿಟ್ಟು ಹೋದಾಗ ಶೇ.90ರಷ್ಟು ಜನಸಂಖ್ಯೆ ಬಡತನದ ರೇಖೆಗಿಂತ ಕೆಳಗಿತ್ತು . ಶಿಕ್ಷಣ ಶೇ. 17ರಷ್ಟು ಕಡಿಮೆಯಾಗಿತ್ತು ಮತ್ತು 1900ರಿಂದ 1947ರ ನಡುವೆ ಅಭಿವೃದ್ಧಿ ದರ 0.001%ಕ್ಕೆ ಕುಸಿಯಿತು. ಅತ್ಯಂತ ಬಡ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಯಿತು ಎಂದು ಅವರು ವಿವರಿಸಿದ್ದಾರೆ.
ಇದನ್ನು 2017ರಲ್ಲಿ ಆಸ್ಟ್ರೇಲಿಯ ಮೆಲ್ಬರ್ನ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಅವರು ಹೇಳಿದ್ದಾರೆ. ಈ ವೀಡಿಯೊ ಈಗ ಪುನಃ ವೈರಲ್ ಆಗುತ್ತಿದೆ. ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿರುವ ಸಂದರ್ಭದಲ್ಲಿ ಶಶಿ ತರೂರ್ ಹೇಳಿಕೆ ಪ್ರಾಮುಖ್ಯ ಪಡೆದುಕೊಂಡಿದೆ. ಬ್ರಿಟಿಷರು ಮುಕ್ತ ವ್ಯಾಪಾರದ ಹೆಸರಿನಲ್ಲಿ ಭಾರತಕ್ಕೆ ಬಂದು ಭಾರತದ ವ್ಯಾಪಾರಿ ವ್ಯವಸ್ಥೆಯನ್ನೇ ಕೆಡವಿ ಹಾಕಿದ್ದರು. ದೇಶವನ್ನೇ ವಶಪಡಿಸಿಕೊಂಡಿದ್ದರು.
IslamKannada News Portal
