Home / ವಾರ್ತೆಗಳು / ಡೆಲಿವರಿ ಬಾಯ್‍ನಿಂದ ಆಹಾರ ಸ್ವೀಕರಿಸಲು ನಿರಾಕರಿಸಿದ ಗಿರಾಕಿ: ಕೇಸು ದಾಖಲು

ಡೆಲಿವರಿ ಬಾಯ್‍ನಿಂದ ಆಹಾರ ಸ್ವೀಕರಿಸಲು ನಿರಾಕರಿಸಿದ ಗಿರಾಕಿ: ಕೇಸು ದಾಖಲು

ಹೈದರಾಬಾದ್, ಅ. 26: ಡೆಲಿವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ಆಹಾರವನ್ನು ಸ್ವೀಕರಿಸಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಲಾಗಿದೆ.

ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಡೆಲಿವರಿ ಬಾಯ್ ಮುದಸ್ಸಿರ್ ಸುಲೈಮಾನ್ ಬುಧವಾರ ಆಹಾರ ಸ್ವೀಕರಿಸಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ ದೂರು ನೀಡಿದರೆಂದು ತಿಳಿಸಿದ್ದಾರೆ.

ಗ್ರಾಹಕ ಆಹಾರಕ್ಕೆ ಆರ್ಡರ್ ಕೊಟ್ಟ ಬಳಿಕ ಡೆಲಿವರಿ ಬಾಯ್ ಮುಸ್ಲಿಂ ಎನ್ನುವ ಕಾರಣದಿಂದ ಆಹಾರ ಸ್ವೀಕರಿಸಲು ನಿರಾಕರಿಸಿದರೆಂದು ದೂರಿನಲ್ಲಿ ಸುಲೈಮಾನ್ ತಿಳಿಸಿದರು. ನಾವು ಗ್ರಾಹಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಗ್ರಾಹಕರು ಚಿಕನ್ 65ಗೆ ಆರ್ಡರ್ ಕೊಟ್ಟಿದ್ದರು. ಜೊತೆಗೆ ಹಿಂದೂ ಡೆಲಿವರಿ ಬಾಯ್‍ಯಲ್ಲಿ ಕಳುಹಿಸಿಕೊಡಲು ಸೂಚಿಸಿದ್ದರು. ಆದರೆ ಸ್ವಿಗಿ ಮುಸ್ಲಿಮ್ ಡೆಲಿವರಿ ಬಾಯ್ ಮೂಲಕ ಪಾರ್ಸಲ್ ಕಳುಹಿಸಿ ಕೊಟ್ಟಿತ್ತು. ನಂತರ ಗ್ರಾಹಕ ಪಾರ್ಸಲ್ ಪಡೆಯದೆ ಬಿಟ್ಟಿದ್ದಾರೆ.

ವಿಶೇಷವೆಂದರೆ ಪಾರ್ಸಲ್ ತರಲು ಹೇಳಿದ ಹೊಟೇಲ್ ಕೂಡ ಮುಸ್ಲಿಮರದ್ದಾಗಿತ್ತು. ಈ ಹಿಂದೆ ಜೊಮೆಟೊದ ಡೆಲಿವರಿ ಬಾಯ್ ಮುಸ್ಲಿಂ ಆಗಿದ್ದಕ್ಕೆ ಮಧ್ಯ ಪ್ರದೇಶದಲ್ಲಿ ಪಾರ್ಸಲ್ ನಿರಾಕರಿಸಿದ ಘಟನೆ ನಡೆದಿತ್ತು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …