Home / ವಾರ್ತೆಗಳು / ಉಯುಗುರ್ ಮಾನವ ಹಕ್ಕು ಹೋರಾಟಗಾರ ಇಲ್‍ಹಾಂಗೆ ಯುರೋಪಿಯನ್ ಯೂನಿಯನ್ ಪ್ರಶಸ್ತಿ

ಉಯುಗುರ್ ಮಾನವ ಹಕ್ಕು ಹೋರಾಟಗಾರ ಇಲ್‍ಹಾಂಗೆ ಯುರೋಪಿಯನ್ ಯೂನಿಯನ್ ಪ್ರಶಸ್ತಿ

ಸ್ಟಾಸ್‍ಬರ್ಗ್, ಅ. 26: ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟು ಮಾನವ ಹಕ್ಕು ಹೋರಾಟಗಾರರಿಗೆ ಪ್ರದಾನಿಸುವ ಸಖರೋವ್ ಪ್ರಶಸ್ತಿ ಈ ಸಲ ಉಯುಗುರ್‍ ಮುಸ್ಲಿಂ ನಾಯಕ ಹಾಗೂ ಅರ್ಥ ಶಾಸ್ತ್ರ ಅಧ್ಯಾಪಕ ಇಲ್‍ಹಾಂ ತೊಹ್ತಿ ಅವರಿಗೆ ಸಿಕ್ಕಿದ್ದು, ಚೀನ ಇವರ ವಿರುದ್ಧ ಪ್ರತ್ಯೇಕತಾವಾದ ಹರಡಿದರು ಎಂದು ಆರೋಪಿಸಿ ಇವರನ್ನು 2014 ರಿಂದ ಜೈಲಿನಲ್ಲಿರಿಸಿದೆ. ಅವರು ಬೀಜಿಂಗ್ ಯುನಿವರ್ಸಿಟಿಯ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ.

ಇವರನ್ನು ಜೈಲಿಗೆ ಹಾಕಿದ್ದನ್ನು ವಿರೋಧಿಸಿ ಜಗತ್ತಿನಾದ್ಯಂತ ಪ್ರತಿಭಟನೆ ನಡೆದಿವೆ. ಅವರ ಐವತ್ತನೇ ಜನ್ಮ ದಿನದಲ್ಲಿ ಇಲ್‍ಹಾಮ್‍ರಿಗೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಉಯುಗುರ್‍ಗಳನ್ನು ಚೀನ ಕ್ರೂರವಾಗಿ ದಮನಿಸುವುದರ ವಿರುದ್ಧ ಅವರು ಧ್ವನಿಯೆತ್ತಿದ್ದರು. ಇವರಿಗೆ ಇದೇ ಹೋರಾಟಕ್ಕಾಗಿ ಯುರೋಪಿನ ಇನ್ನೊಂದು ಪ್ರಶಸ್ತಿಯೂ ಲಭಿಸಿದೆ. ಉಯುಗುರ್ ವಂಶೀಯರ ಎದುರಿಸುವ ಸಮಸ್ಯೆಗಳನ್ನು ಜಗತ್ತಿನ ಗಮನಕ್ಕೆ ತರಲು ಎಲ್‍ಹಾಮ್ ವೆಬ್‍ಸೈಟ್ ನಡೆಸುತ್ತಿದ್ದರು. ಚೀನ ಅದನ್ನು ಮುಟ್ಟುಗೋಲು ಹಾಕಿದೆ.

2009ರಲ್ಲಿ ಉಯುಗುರ್‍ಗಳಿಗಾಗಿ ಅವರು ಧ್ವನಿಯೆತ್ತಿದರು. ಇದಕ್ಕಾಗಿ ಅವರಿಗೆ ಜೈಲು ಶಿಕ್ಷೆ ನೀಡಲಾಗಿದೆ. ಇವರ ವಿರುದ್ಧ ದೇಶದಲ್ಲಿ ಉಗ್ರವಾದ ಹರಡುತ್ತಿದ್ದಾರೆ ಎಂದು ಚೀನ ಆರೋಪ ಹೊರಿಸುತ್ತಿದೆ. ಉಯುಗುರ್ ವಂಶೀರ ವಿರುದ್ಧ ದಮನದ ಕತೆಗಳು ಬಹಿರಂಗವಾದ ಬಳಿಕ ಅಮೆರಿಕ ಸಹಿತ ಹಲವು ದೇಶಗಳು ಚೀನದ ವಿರುದ್ಧ ಕಠಿಣ ಧೋರಣೆ ತಳೆದಿವೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …