Home / ವಾರ್ತೆಗಳು / ‘ಹಿಜಾಬ್’ ಹೊಸ ಕೃತಿ …….

‘ಹಿಜಾಬ್’ ಹೊಸ ಕೃತಿ …….

ಹೊಸ ಕೃತಿ …….
ಸಾಮಾನ್ಯವಾಗಿ ಮಹಿಳೆಯ ಕುರಿತು ಪ್ರಸ್ತಾಪ ಬಂದಾಗಲೆಲ್ಲಾ ಆಕೆಯ ಹಕ್ಕು-ಕರ್ತವ್ಯಗಳು, ಸ್ಥಾನಮಾನ, ಕಾರ್ಯಕ್ಷೇತ್ರ, ಇತ್ಯಾದಿ ಚರ್ಚೆಗೆ ಬಂದೇ ಬರುತ್ತದೆ. ಮುಸ್ಲಿಮ್ ಮಹಿಳೆಯ ಕುರಿತು ಬಂದಾಗ ಆಕೆಯ ಮೇಲಾಗುವ ದೌರ್ಜನ್ಯಗಳು ಮುತ್ತಲಾಕ್, ಬುರ್ಕಾ, ನಕಾಬ್, ಹಿಜಾಬ್’ಗಳೆಲ್ಲಾ ಚರ್ಚೆಗೆ ಬರುತ್ತದೆ. ಪಾಶ್ಚಾತ್ಯ ಪ್ರಭಾವಕ್ಕೊಳಗಾದ ಸಮೂಹ ಮಾಧ್ಯಮಗಳು ಮುಸ್ಲಿಮ್ ಮಹಿಳೆಯ ಬಗ್ಗೆ ಅಷ್ಟೊಂದು ತಪ್ಪು ಕಲ್ಪನೆಗಳನ್ನು ಹರಡಿವೆ.
ಮುಸ್ಲಿಮ್ ಮಹಿಳೆಯ ಕುರಿತು ಹೆಚ್ಚಾಗಿ ಅವಳು ಧರಿಸುವ ಹಿಜಾಬನ್ನೇ ಸಮೂಹ ಮಾಧ್ಯಮಗಳು ಗುರಿಯಾಗಿರಿಸಿ ನಕಾರಾತ್ಮಕ ರೂಪದಲ್ಲಿ ಬಿಂಬಿಸುತ್ತಿರುತ್ತವೆ. ವಾಸ್ತವದಲ್ಲಿ ಹಿಜಾಬ್ ಎಂದರೇನು, ಅದರ ಮಹತ್ವವೇನು, ಉಪಯೋಗವೇನು ಎಂಬಿತ್ಯಾದಿ ವಿಷಯಗಳ ಕುರಿತು ‘ಅನುಪಮ’ ಮಹಿಳಾ ಮಾಸಿಕದ ಉಪಸಂಪಾದಕಿ ಕುಲ್ಸೂಮ್ ಅಬೂಬಕರ್ ‘ಹಿಜಾಬ್’ ಎಂಬ ಕೃತಿಯಲ್ಲಿ ಬಹಳ ಸರಳವಾಗಿ ವಿವರಿಸಿದ್ದಾರೆ. ಅಲ್ಲದೆ, ಇಸ್ಲಾಮ್ ಮಹಿಳೆಗೆ ನೀಡಿರುವ ಸ್ಥಾನಮಾನ ,ಹಕ್ಕುಗಳು ಮತ್ತು ಆಕೆಯ ಮೇಲಿರುವ ಬಾಧ್ಯತೆಗಳ ಕುರಿತೂ ಬೆಳಕು ಚೆಲ್ಲಿದ್ದಾರೆ. ಹಿಜಾಬ್ ಪ್ರಗತಿಗೆ ಮಾರಕವೇ, ಅಲ್ಲವೇ ಸ್ಪಷ್ಟ ಚಿತ್ರಣವು ಇದರ ವಾಚಕರಿಗೆ ಮನವರಿಕೆಯಾಗುವುದು.
■ ಪುಟ – 56 | ಮುಖಬೆಲೆ – 50 : 00
•┈┈┈•✿ ಶಾಂತಿ ಪ್ರಕಾಶನ ✿•┈┈┈•
9449333496 / 7795837394
SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …